Homeರಾಜ್ಯಮೈಸೂರು ಸಿಲ್ಕ್ ಸಂಸ್ಥೆ ಮುಚ್ಚಿದರೆ ಉಗ್ರ ಹೋರಾಟ : ಆರ್‌.ಅಶೋಕ್‌ ಎಚ್ಚರಿಕೆ

ಮೈಸೂರು ಸಿಲ್ಕ್ ಸಂಸ್ಥೆ ಮುಚ್ಚಿದರೆ ಉಗ್ರ ಹೋರಾಟ : ಆರ್‌.ಅಶೋಕ್‌ ಎಚ್ಚರಿಕೆ

protests if Mysore Silk Institute is closed: R. Ashok warns

ಬೆಂಗಳೂರು,ಫೆ.27- ಕನ್ನಡ ನಾಡಿನ ಹೆಮೆಯ ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚಲು ಮುಂದಾದರೆ ಸರ್ಕಾರದ ವಿರುದ್ದ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

Xನಲ್ಲಿ ಪೋಸ್ಟ್‌ ಮಾಡಿರುವ ಅವರು, ಮೈಸೂರು ಸಿಲ್ಕ್ ಎನ್ನುವುದು ಕನ್ನಡಿಗರ ಪಾಲಿಗೆ ಕೇವಲ ಒಂದು ವಸ್ತ್ರವಲ್ಲ, ಅದು ನಮ ಸ್ವಾಭಿಮಾನದ ಶಕ್ತಿ. ಈ ಸಂಸ್ಥೆಯನ್ನು ಉಳಿಸಲು, ನೇಕಾರರ ಹಿತ ಕಾಯಲು ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ನಾಡದ್ರೋಹಿ ಕಾಂಗ್ರೆಸ್‌‍ ಸರ್ಕಾರಕ್ಕೆ ಧಿಕ್ಕಾರ! ಎಂಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಅಸಿತೆ, ಮೈಸೂರು ಮಹಾರಾಜರು ನೀಡಿದ ಕೊಡುಗೆ, ವಿಶ್ವವಿಖ್ಯಾತ `ಮೈಸೂರು ಸಿಲ್‌್ಕ’ ಇಂದು ಈ ಅಸಮರ್ಥ, ನಾಲಾಯಕ್‌ ಕಾಂಗ್ರೆಸ್‌‍ ಸರ್ಕಾರದ ದುರಾಡಳಿತದ ಪರಿಮಾಣವಾಗಿ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಮೈಸೂರು ಸಿಲ್‌್ಕ ಎಂಬ ಈ ಪರಂಪರೆ ಕನ್ನಡಿಗರ ಪಾಲಿನ ಭಾವನೆ ಮಾತ್ರವಲ್ಲ, ಸಾವಿರಾರು ಕುಟುಂಬಗಳ ಬದುಕು. ಆದರೆ ಈ ನಾಡದ್ರೋಹಿ ಕಾಂಗ್ರೆಸ್‌‍ ಸರ್ಕಾರಕ್ಕೆ ಪರಂಪರೆಯ ಬೆಲೆಯೂ ಗೊತ್ತಿಲ್ಲ, ರೈತರ ನೋವೂ ಅರ್ಥವಾಗುತ್ತಿಲ್ಲ ಎಂದು ವಾಗ್ದಳಿ ನಡೆಸಿದ್ದಾರೆ.

ಮೈಸೂರು ರೇಷೆ ನಂಬಿ ಬದುಕುತ್ತಿರುವ ಸಾವಿರಾರು ನೇಕಾರರ ಕುಟುಂಬಗಳು ಇಂದು ಆತಂಕದಲ್ಲಿವೆ. ರೇಷೆ ಬೆಳೆಗಾರರಿಗೆ ಸಿಗಬೇಕಾದ ಪ್ರೋತ್ಸಾಹದ ಧನ ಎಲ್ಲಿ? ನೇಕಾರರ ಶ್ರಮಕ್ಕೆ ಬೆಲೆ ಎಲ್ಲಿ?ಕೆ.ಎಸ್‌‍.ಐ.ಸಿ ಸಂಸ್ಥೆಯನ್ನು ವ್ಯವಸ್ಥಿತವಾಗಿ ಹಳ್ಳ ಹಿಡಿಸುತ್ತಿರುವುದು ಯಾರ ಲಾಭಕ್ಕಾಗಿ? ಗ್ಯಾರಂಟಿ ಹೆಸರಲ್ಲಿ ಬೊಕ್ಕಸ ಖಾಲಿ ಮಾಡಿ, ಈಗ ನಮ ಹೆಮೆಯ ಸಾರ್ವಜನಿಕ ಉದ್ಯಮಗಳನ್ನು ಮಾರಾಟಕ್ಕಿಟ್ಟಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಮೈಸೂರು ಸಿಲ್‌್ಕ ಎಂಬುದು ಕೇವಲ ಬ್ರ್ಯಾಂಡ್‌ ಅಲ್ಲ, ಅದು ಕನ್ನಡ ನಾಡಿನ ಮಣ್ಣಿನ ಗುಣ. ಈ ಪರಂಪರೆಯನ್ನು ಉಳಿಸುವ ಯೋಗ್ಯತೆ ನಿಮಗಿಲ್ಲದಿದ್ದರೆ, ಅಧಿಕಾರ ಬಿಟ್ಟು ತೊಲಗಿ.ಸಿಎಂ ಸಿದ್ದರಾಮಯ್ಯ ಅವರಿಗೆ ನಾನಾ ಎಚ್ಚರಿಕೆ. ನೆನಪಿರಲಿ,ನಮ ನಾಡಿನ ಹೆಮೆಯ ಪರಂಪರೆಯನ್ನು ಕಾಂಗ್ರೆಸ್‌‍ ಸರ್ಕಾರದ ಭ್ರಷ್ಟಾಚಾರಕ್ಕೆ, ಅಸಮರ್ಥತೆಗೆ ಆಹುತಿ ಕೊಡಲು ನಾವು ಬಿಡುವುದಿಲ್ಲ! ಎಂದು ಅಶೋಕ್‌ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

RELATED ARTICLES

Latest News