Homeರಾಜ್ಯಮದ್ಯ ಉತ್ಪನ್ನಗಳಲ್ಲಿ ಆಲ್ಕೋಹಾಲ್‌ ಪ್ರಮಾಣ ಆಧರಿಸಿ ತೆರಿಗೆ ವಿಧಿಸಿ ಸರ್ಕಾರ ಅಧಿಕೃತ ಆದೇಶ

ಮದ್ಯ ಉತ್ಪನ್ನಗಳಲ್ಲಿ ಆಲ್ಕೋಹಾಲ್‌ ಪ್ರಮಾಣ ಆಧರಿಸಿ ತೆರಿಗೆ ವಿಧಿಸಿ ಸರ್ಕಾರ ಅಧಿಕೃತ ಆದೇಶ

Tax based on alcohol content in liquor products

ಬೆಂಗಳೂರು,ಮೇ 17- ಮದ್ಯ ಮತ್ತು ಬಿಯರ್‌ ಉತ್ಪನ್ನಗಳ ಆಲ್ಕೋಹಾಲ್‌ ಪ್ರಮಾಣ ಆಧರಿಸಿ ತೆರಿಗೆ ವಿಧಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹೊಸ ಆದೇಶದ ಹಲವು ಮದ್ಯದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೆಲ ಬ್ರ್ಯಾಂಡ್‌ಗಳ ಮದ್ಯದ ದರ ಹೆಚ್ಚಳ, ಇನ್ನೂ ಕೆಲವು ದರ ಇಳಿಕೆ ಕಂಡಿವೆ.

ಹೊಸ ಅಬಕಾರಿ ತೆರಿಗೆ ನೀತಿಯ ಭಾರವು ದೇಶಿ ತಯಾರಿತ ಮದ್ಯದ ಮೊದಲ ಐದು ಅಬಕಾರಿ ಸ್ಲ್ಯಾಬ್‌ಗಳ (ಕಡಿಮೆ ದರದ) ಮೇಲೆ ಹೆಚ್ಚು ಬೀಳಲಿದೆ. ಇವು 180 ಮಿ.ಲೀ (ನಿಪ್‌) ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತವೆ. ಈ ಸ್ಲ್ಯಾಬ್‌ಗಳ ದರಗಳು 20-25 ಶೇಕಡಾ ಏರಿಕೆಯಾಗಿದೆ.

ಇದರಿಂದ ಕಡಿಮೆ ಮತ್ತು ಮಧ್ಯಮ ಆದಾಯದ ಗ್ರಾಹಕರ ಮೇಲೆ ಂಃ ನೀತಿಯ ಪರಿಣಾಮ ಹೆಚ್ಚು ಕಾಣಬಹುದು. ಮೊದಲ ಐದು ಸ್ಲ್ಯಾಬ್‌ಗಳು ಅಬಕಾರಿ ಆದಾಯದ 75 ರಿಂದ 80 ಶೇಕಡಾ ವರೆಗೆ ಕೊಡುಗೆ ನೀಡುತ್ತವೆ. 42.8 ಶೇಕಡಾ ಆಲ್ಕೊಹಾಲ್‌ / ಹೊಂದಿರುವ ಜನಪ್ರಿಯ ರಮ್‌ ಬ್ರ್ಯಾಂಡ್‌ Old Monkನ ಹೊಸ ಎಂಆರ್‌ ಪಿ 765 ರೂಪಾಯಿಗಳಿಂದ 850 ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ. Old Monk ಐದನೇ ಅಬ್ಕಾರಿ ಸ್ಲ್ಯಾಬ್‌ಗೆ ಸೇರಿದೆ.

ಈ ಮದ್ಯದಲ್ಲಿರುವ ಆಲ್ಕೋಹಾಲ್‌ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ದಶಕಗಳ ಹಳೆಯದಾದ ಅಬಕಾರಿ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್‌ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಮಾದರಿಯನ್ನ ಇದೀಗ ಅಳವಡಿಸಿಕೊಂಡಿದೆ. ಕಡಿಮೆ ಆಲ್ಕೋಹಾಲ್‌ ಪ್ರಮಾಣವಿದ್ರೆ ಕಡಿಮೆ ಹಣ, ಬಾಟಲ್‌ ನಲ್ಲಿ ಹೆಚ್ಚು ಕಿಕ್‌ ಕೊಡುವ ಆಲ್ಕೋಹಾಲ್‌ ಪ್ರಮಾಣ ಇದ್ದರೆ, ಹೆಚ್ಚು ಹಣ ಕೊಡಬೇಕಿದೆ.

ವಿಶೇಷವಾಗಿ 180 ಮಿ.ಲೀ (ಕ್ವಾರ್ಟರ್‌) ಟೆಟ್ರಾ ಪ್ಯಾಕ್‌ ಮತ್ತು ಬಾಟಲಿಗಳ ಬೆಲೆ ಶೇ 20 ರಿಂದ 30 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕ ಬ್ರೂವರ್ಸ್‌ ಮತ್ತು ಡಿಸ್ಟಿಲರ್ಸ್‌ ಅಸೋಸಿಯೇಷನ್‌ (ಏಃಆಂ) ಪ್ರಕಾರ, ಮೊದಲ ಐದು ಸ್ಲ್ಯಾಬ್‌ ಗಳಲ್ಲಿರುವ ಹೆಚ್ಚುವರಿ ಅಬಕಾರಿ ಸುಂಕವನ್ನು (ಂಇಆ) ಶೇ 20-30 ರಷ್ಟು ಹೆಚ್ಚಿಸಲಾಗಿದೆ.

ವಿದೇಶಿ ಮೂಲದ ಪ್ರೀಮಿಯಂ ಬ್ರಾಂಡ್‌ಗಳಾದ ಕಂಪನಿಗಳ ಮದ್ಯದ ಬೆಲೆ ಶೇ 16 ರಿಂದ 20 ರಷ್ಟು ಇಳಿಕೆಯಾಗಲಿದೆ. 6 ರಿಂದ 8ನೇ ಸ್ಲ್ಯಾಬ್‌ನಲ್ಲಿ ಬರುವ ಈ ಪಾನೀಯಗಳ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 10-15 ರಷ್ಟು ಕಡಿಮೆ ಮಾಡಲಾಗಿದೆ.

ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್‌ ಬಿಯರ್‌ಗಳ ಬೆಲೆಗಳು ಮೇ 11ರಿಂದ ಜಾರಿಗೆ ಬರುವಂತೆ 20-25 ಶೇಕಡಾ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಬಿಯರ್‌ ಮತ್ತು ಸ್ಪಿರಿಟ್ಸ್ ಗಳಿಗೆ ಱಆಲ್ಕೊಹಾಲ್‌ ಇನ್‌ ಬೇವರೇಜ್‌ ನೀತಿಯಡಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, 5 ಶೇಕಡಾ ಆಲ್ಕೊಹಾಲ್‌ /(ಟ/ಟ) ಹೊಂದಿರುವ ಬಿಯರ್‌ಗಳ ಗರಿಷ್ಠ ಚಿಲ್ಲರೆ ಬೆಲೆ (ಒಖ) 20 ರಿಂದ 25 ಶೇಕಡಾ ಕಡಿಮೆಯಾಗಿದೆ.

ಹೊಸ ದರಪಟ್ಟಿಯ ಪ್ರಕಾರ, 5 ಶೇಕಡಾ ಆಲ್ಕೊಹಾಲ್‌ ಹೊಂದಿರುವ ಜನಪ್ರಿಯ ಮೈಲ್‌್ಡ ಬಿಯರ್‌ ಬ್ರ್ಯಾಂಡ್‌ಗಳಾದ ಕಿಂಗ್‌ಫಿಷರ್‌ ಪ್ರೀಮಿಯಂ, ಕಿಂಗ್‌ಫಿಷರ್‌ ಅಲ್ಟ್ರಾ, ಬಡ್‌ವೈಸರ್‌, ಯುಬಿ ಎಕ್ಸ್ ಪೋರ್ಟ್‌, ಹೈನಿಕನ್‌ ಮುಂತಾದ 650 ಮಿ.ಲೀ ಬಾಟಲಿಗಳ ಗರಿಷ್ಠ ಚಿಲ್ಲರೆ ದರದಲ್ಲಿ ಕ್ರಮವಾಗಿ 75 ರೂ , 70 ರೂ , 25 ರೂ ಮತ್ತು 20 ರೂ. ಇಳಿಕೆಯಾಗಿದೆ.

ಪ್ರೀಮಿಯಂ ಸ್ಕಾಚ್‌ ವಿಸ್ಕಿಗಳ ಬೆಲೆಯಲ್ಲಿಯೂ 20 ಶೇಕಡಾ ಇಳಿಕೆ ಕಂಡುಬಂದಿದೆ. 750 ಮಿ.ಲೀ ಬಾಟಲಿಯ ಬ್ಲಾಕ್‌ ಲೇಬಲ್‌ (43 ಶೇಕಡಾ ಆಲ್ಕೊಹಾಲ್‌) ಮತ್ತು ಚಿವಾಸ್‌‍ ರೀಗಲ್‌ (40 ಶೇಕಡಾ ಆಲ್ಕೊಹಾಲ್‌) ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ.

ರಾಜ್ಯ ಸರ್ಕಾರವು ಮೇ 8ರಂದು ಹೊಸ ತೆರಿಗೆ ನೀತಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ಱಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು, 2026ೞ ನ್ನು ಪ್ರಕಟಿಸಿತ್ತು. ಇದು ಮೇ 11ರಿಂದ ಜಾರಿಗೆ ಬಂದಿದೆ. ಎಐಬಿ ತೆರಿಗೆ ನೀತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ.

ಎಐಬಿ ಎಂದರೆ ಬ್ರಾಂಡಿ, ವಿಸ್ಕಿ, ಜಿನ್‌, ರಮ್‌, ಬಿಯರ್‌, ವೈನ್‌, ಫ್ರೂಟ್‌ ವೈನ್‌, ಫೋರ್ಟಿಫೈಡ್‌ ವೈನ್‌ ಮುಂತಾದ ಮದ್ಯಗಳಲ್ಲಿ ಪ್ರತಿ ಲೀಟರ್‌ಗೆ ಇರುವ ಆಲ್ಕೊಹಾಲ್‌ ಪ್ರಮಾಣ/ಪರಿಮಾಣ ಎಂದು ಅರ್ಥ. ಇದಲ್ಲದೆ, ಕರ್ನಾಟಕದಲ್ಲಿ ಎಂಆರ್‌ ಪಿ ಆಧಾರದಲ್ಲಿ ಮದ್ಯ ಮಾರಾಟವಾಗುವ ಅಬಕಾರಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಸರ್ಕಾರವು 16ರಿಂದ 8ಕ್ಕೆ ಇಳಿಸಿದೆ.

RELATED ARTICLES

Latest News