Saturday, April 18, 2026
Homeರಾಜ್ಯರಾಜ್ಯಕ್ಕೆ ಯಾವುದೇ ದೊಡ್ಡ ಕೊಡುಗೆ ಇಲ್ಲದ ಬಜೆಟ್‌ : ಡಿ.ಕೆ.ಶಿವಕುಮಾರ್‌

ರಾಜ್ಯಕ್ಕೆ ಯಾವುದೇ ದೊಡ್ಡ ಕೊಡುಗೆ ಇಲ್ಲದ ಬಜೆಟ್‌ : ಡಿ.ಕೆ.ಶಿವಕುಮಾರ್‌

There is no major contribution to the state in the budget.

ಕನಕಪುರ,ಫೆ.1- ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ದೊಡ್ಡ ಕೊಡುಗೆಗಳು ಸಿಕ್ಕಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ. ಕನಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸಿದ್ದು, ಸಕ್ಕರೆ ಬೆಲೆಯನ್ನು ಬಜೆಟ್‌ನಲ್ಲಿ ಹೆಚ್ಚಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ನಿರ್ಮಲಾ ಸೀತಾರಾಮನ್‌ ಅಂತಹ ಯಾವ ನಿರ್ಧಾರಗಳನ್ನೂ ತೆಗೆದುಕೊಂಡಿಲ್ಲ ಎಂದು ಹೇಳಿದರು.

ನಮಲ್ಲಿ ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲೇ ಕಬ್ಬು ಬೆಳೆಗಾರರಿಗೆ ನೆರವು ನೀಡುವ ಪ್ರಯತ್ನ ಮಾಡಿದೆ. ಸಕ್ಕರೆ ಬೆಲೆ 45ರಿಂದ 50 ರೂ.ಗಳವರೆಗೆ ಹೆಚ್ಚಾದರೂ ಸಮಸ್ಯೆ ಇಲ್ಲ. ಮೊಲಸೀಸ್‌‍ ಬೆಲೆಯನ್ನೂ ಹೆಚ್ಚಿಸಬಹುದಿತ್ತು. ಸಕ್ಕರೆ ಕಾರ್ಖಾನೆಗಳು ಕಾಂಗ್ರೆಸ್‌‍ ಹಿಡಿತದಲ್ಲಿವೆ ಎಂದು ಟೀಕೆ ಮಾಡಲಾಗುತ್ತಿದೆ. ರೈತರು ಸಂಕಷ್ಟದಲ್ಲಿರುವಾಗ ಸಕ್ಕರೆ ಬೆಲೆ ಹೆಚ್ಚಿಸಲು ಯಾವ ಸಂಸ್ಥೆಗಳು ಇರಲಿಲ್ಲ ಎಂದರು.

ಕಳೆದ ಏಳೆಂಟು ವರ್ಷಗಳಿಂದಲೂ ಕೇಂದ್ರ ಸರ್ಕಾರ ರೈತರಿಗೆ ಯಾವುದೇ ನೆರವು ನೀಡಿಲ್ಲ. ಕೃಷಿ ಉತ್ಪನ್ನಗಳ ಬೆಲೆಯ ನಿಯಂತ್ರಣವನ್ನು ಕೇಂದ್ರ ಸರ್ಕಾರ ತನ್ನ ಅಧೀನದಲ್ಲೇ ಇಟ್ಟುಕೊಂಡಿದೆ.

ಉದ್ಯೋಗ ಖಾತ್ರಿ ಯೋಜನೆಯಿಂದ ಮಹಾತ ಗಾಂಧಿ ಹೆಸರನ್ನು ಕೈಬಿಡಲಾಗಿದೆ. ಯಾವುದೋ ಒಂದು ಯೋಜನೆಗೆ ಮಹಾತ ಗಾಂಧಿ ಹೆಸರನ್ನು ನಾಮಕರಣ ಮಾಡಲಾಗಿದೆ. ಮನ್ರೇಗಾ ರದ್ದುಪಡಿಸಿರುವವರ ವಿರುದ್ಧ ನಾವು ಮ್ಯಾರಥಾನ್‌ ಆಯೋಜಿಸಿದ್ದವು.

ಹಳೆಯ ಯೋಜನೆಯನ್ನೇ ಮರು ಸ್ಥಾಪಿಸಬೇಕು, ಶೇ.60:40ರ ಅನುಪಾತ ಪ್ರಯೋಜನಕ್ಕೆ ಬರುವುದಿಲ್ಲ ಎಂದರು. ಕೇಂದ್ರ ಸರ್ಕಾರ, ಉದ್ಯೋಗ ಖಾತ್ರಿಯಂತಹ ಯೋಜನೆಗಳಿಗೂ ಕೃತಕ ಬುದ್ಧಿಮತ್ತೆ ಅಳವಡಿಸುವುದಾಗಿ ಹೇಳುತ್ತಿದೆ. ಕೂಲಿ ಮಾಡುವುದನ್ನು ಮೇಲಿಂದ ನೋಡಿ ದೆಹಲಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರಂತೆ ಇವೆಲ್ಲ ಪ್ರಯೋಜನಕ್ಕೆ ಬರುವುದಿಲ್ಲ. ಕೃಷಿಯಲ್ಲಿ ತಳಿ ಅಭಿವೃದ್ಧಿ, ರೇಷೆ ಉತ್ತೇಜನ ಸೇರಿದಂತೆ ಇತರ ವಿಷಯಗಳಿಗೆ ತಂತ್ರಜ್ಞಾನ ಬಳಸಬಹುದು. ಆದರೆ ಅದಕ್ಕಿಂತ ಜನರಿಗೆ ನೆರವಾಗುವ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.

ಬೆಂಗಳೂರಿಗೆ ಹೈಸ್ಪೀಡ್‌ ರೈಲು ಘೋಷಿಸಿರುವುದು ಅನುಷ್ಠಾನವಾಗುವುದಿಲ್ಲ. ಶೇ.50:50ರ ಹಣ ಬಳಕೆ ಕಾರ್ಯಸಾಧುವಲ್ಲ. ಶೇ.90ರಷ್ಟು ಕೇಂದ್ರ ಸರ್ಕಾರ ಕೊಟ್ಟು ರಾಜ್ಯ ಸರ್ಕಾರ ಶೇ.10ರಷ್ಟು ಸಾಲ ಕೊಡುವುದಾದರೆ ನಾವು ಸಹಕರಿಸುತ್ತೇವೆ. ಬೇರೆ ರಾಜ್ಯಗಳಿಗೆಲ್ಲ ಈ ಮಾದರಿಯನ್ನು ಅನುಸರಿಸಿದ್ದಾರೆ. ನಮಗೂ ಅದೇ ಮಾದರಿ ಜಾರಿಗೆ ತರಲಿ ಎಂದರು.
ನಮಗೆ ಹೆಚ್ಚು ನಿರೀಕ್ಷೆಗಳಿದ್ದವು, ಪ್ರಧಾನಿಯವರೇ ಬೆಂಗಳೂರನ್ನು ಜಾಗತಿಕ ನಗರ ಎಂದಿದ್ದರು. ಆದರೆ ಹಣ ನೀಡಿಲ್ಲ ಎಂದು ಅವರು ಆಕ್ಷೇಪಿಸಿದರು.

ಕನಕಪುರ ಕನಕೋತ್ಸವ ಐದು ದಿನಗಳಿಂದ ಅದ್ಧೂರಿಯಾಗಿ ನಡೆಯುತ್ತಿದೆ. ಸಾವಿರಾರು ಮಂದಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾರೆ. ಕಳೆದ 15 ವರ್ಷದಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಉತ್ತೇಜನ ಸಿಕ್ಕಿದೆ ಎಂದು ಹೇಳಿದರು. ಸುಮಾರು 15 ಸಾವಿರ ಚಿಕ್ಕಮಕ್ಕಳನ್ನು ಪೋಷಕರು ಫ್ಯಾಷನ್‌ ಶೋದಲ್ಲಿ ಪ್ರದರ್ಶಿಸಿದ್ದಾರೆ. ಓಟದ ಸ್ಪರ್ಧೆಯಲ್ಲೂ 35 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲೇ ವಿಭಿನ್ನವಾಗಿದೆ ನಡೆದಿದೆ.

ಸಾಮಾಜಿಕ ಹಾಗೂ ಶೈಕ್ಷಣಿಕ ವಲಯಕ್ಕೆ ಗ್ರಾಮೀಣ ಮಕ್ಕಳನ್ನು ಪರಿಚಯಿಸಲಾಗುತ್ತಿದೆ. 8700 ಪ್ರತಿಭಾನ್ವಿತ ಮಕ್ಕಳಿಗೆ ಸನಾನ ಮಾಡಲಾಗಿದೆ. ಎಲ್ಲರಿಗೂ ನಗದು ಪ್ರೋತ್ಸಾಹ ನೀಡಲಾಗಿದೆ ಎಂದರು.

ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಬಹಳಷ್ಟು ಶಾಸಕರು ಮತ್ತು ಸಚಿವರು ಭಾಗವಹಿಸಲಾಗಿಲ್ಲ. ಬಂದಿರುವವರು ಖುಷಿಪಟ್ಟು ಹೋಗಿದ್ದಾರೆ ಎಂದರು. ಕನಕೋತ್ಸವದಲ್ಲಿ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ರಂಗೋಲಿ ಸ್ಪರ್ಧೆಯಲ್ಲಿ ಮೇಕೆದಾಟು ಯೋಜನೆ 5 ಗ್ಯಾರಂಟಿ ಯೋಜನೆಗಳ ವಿಷಯ ನೀಡಲಾಗಿತ್ತು. ಇದಲ್ಲದೆ ಬೇರೆ ಬೇರೆ ವಿಷಯಗಳಲ್ಲೂ ರಂಗೋಲಿ ಬಿಡಿಸಬಹುದಿತ್ತು. ಮಹಿಳೆಯೊಬ್ಬರು ಕೇಂದ್ರ ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ರಂಗೋಲಿ ಬಿಡಿಸಿದ್ದಾರೆ. ಅದಕ್ಕೂ ಬಹುಮಾನ ನೀಡಿದ್ದೇವೆ ಎಂದರು.

RELATED ARTICLES

Latest News