Homeರಾಜ್ಯಆ.12ರ ವರೆಗೆ ಪೀಣ್ಯ ಫ್ಲೈಓವರ್‌ ಮೇಲೆ ಸಂಚಾರ ನಿರ್ಬಂಧ

ಆ.12ರ ವರೆಗೆ ಪೀಣ್ಯ ಫ್ಲೈಓವರ್‌ ಮೇಲೆ ಸಂಚಾರ ನಿರ್ಬಂಧ

Traffic restrictions on Peenya Flyover till August 12

ಬೆಂಗಳೂರು,ಆ.4-ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಎಲಿವೇಟೆಡ್‌ ಫ್ಲೈಓವರ್‌ ಮೇಲೆ ಡಾಂಬರೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಠಿಯಿಂದ ಇಂದಿನಿಂದ ಆ.12 ರ ವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಈ ಅವಧಿಯ ಶನಿವಾರ ಮತ್ತು ಭಾನುವಾರ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್‌ ಫ್ಲೈಓವರ್‌ ಮೇಲೆ ತುಮಕೂರು ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ಪೀಣ್ಯ ಎಲಿವೇಟೆಡ್‌ ಫ್ಲೈಓವರ್‌ ಮೇಲೆ ಎಸ್‌‍ಆರ್‌ಎಸ್‌‍ ಅಪ್ಪರ್‌ ರ್ಯಾಂಪ್‌ದಿಂದ ಕೆನ್ನಮೆಟಲ್‌ ವಿಡಿಯಾ ಡೌನ್‌ ರ್ಯಾಂಪ್‌ ವರೆಗೆ ಫ್ಲೈಓವರ್‌ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ: ಬೆಂಗಳೂರಿನಿಂದ ನೆಲಮಂಗಲ ಕಡೆಗೆ ಸಂಚರಿಸುವ ವಾಹನಗಳು ಎಸ್‌‍ಆರ್‌ಎಸ್‌‍ ಅಪ್ಪರ್‌ ರ್ಯಾಂಪ್‌ ಫ್ಲೈಓವರ್‌ ಕೆಳಭಾಗಗದ ಎನ್‌ಹೆಚ್‌ 4 ರಸ್ತೆ ಮತ್ತು ಸರ್ವಿಸ್‌‍ ರಸ್ತೆ ಮೂಲಕ ಎಸ್‌‍ಆರ್‌ಎಸ್‌‍ ಜಂಕ್ಷನ್‌, ಪೀಣ್ಯ ಪೊಲೀಸ್‌‍ ಠಾಣೆ ಜಂಕ್ಷನ್‌, ಜಾಲಹಳ್ಳಿ ಕ್ರಾಸ್‌‍, ದಾಸರಹಳ್ಳಿ ಜಂಕ್ಷನ್‌, 8ನೇ ಮೈಲಿ ಜಂಕ್ಷನ್‌ ಮುಖಾಂತರ ಪಾರ್ಲೆ ಜಿ ಟೋಲ್‌ ಮೂಲಕ ಸಂಚರಿಸಬಹುದಾಗಿದೆ.ಸಾರ್ವಜನಿಕರು ಸಹಕರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

RELATED ARTICLES
spot_img

Latest News