Homeರಾಜ್ಯತುಮಕೂರು, ದಾವಣಗೆರೆಯಲ್ಲಿ ಉಗ್ರರ ಸೆರೆ : ರಾಜ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ

ತುಮಕೂರು, ದಾವಣಗೆರೆಯಲ್ಲಿ ಉಗ್ರರ ಸೆರೆ : ರಾಜ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ

Two suspected Pakistani terrorists arrested in Davangere

ಬೆಂಗಳೂರು, ಜೂ.5- ಬೆಣ್ಣೆನಗರಿ ದಾವಣಗೆರೆ ಹಾಗೂ ಕಲ್ಪತರು ನಾಡು ತುಮಕೂರಿನಲ್ಲಿ ಅಡಗಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.ದಾವಣಗೆರೆಯ ಬೀಡಿ ಲೇಔಟ್‌ನ ನಿವಾಸಿ ಜಮೀರ್‌ ಖಾನ್‌ (22), ತುಮಕೂರಿನ ಶ್ರೀರಾಮನಗರ ನಿವಾಸಿ ಅಲ್ಲಾಭಕ್ಷು ಬಂಧಿತ ಶಂಕಿತ ಭಯೋತ್ಪಾದಕರು.

ಈ ಇಬ್ಬರೂ ಪಾಕ್‌ನ ಐಎಸ್‌‍ಎಸ್‌‍ ಫಂಡಿಂಗ್‌ ಮಾಡುತ್ತಿದ್ದ ಉಗ್ರರಾದ ಶಾಬಾಸ್‌‍ ಭುಟ್ಟಿ ಹಾಗೂ ರಾಣಾ ಉನೇನ್‌ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಶಂಕಿತರ ಚಲನವಲನದ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಇಬ್ಬರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರೂ ಸೇರಿ ಖ್ಯಾತ ಹಿಂದಿ ಚಲನಚಿತ್ರ ದುರಂದರ್‌ನಲ್ಲಿ ಹೀರೋ ನೆರೆಯ ಪಾಕಿಸ್ತಾನಕ್ಕೆ ಹೋಗಿ ಶತ್ರುಗಳನ್ನು ಸಂಹಾರ ಮಾಡುವ ರೀತಿಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಬಂಧಿತ ಉಗ್ರರು ಸಂಚು ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದುರಂಧರ್‌ ಸಿನಿಮಾದಲ್ಲಿ ಹೇಗೆ ಪಾಕಿಸ್ತಾನದಲ್ಲಿ ಬಾಂಬ್‌ ಸ್ಟೋಟ ಮಾಡಿದ್ರೋ ಅದೇ ರೀತಿ ಭಾರತದಲ್ಲಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಈ ಇಬ್ಬರನ್ನು ಪಿಐಒಗಳಾಗಿ (ಪಾಕಿಸ್ತಾನ್‌ ಇಂಟಲಿಜೆನ್ಸ್ ಅಪರೇಟರ್ಸ್‌) ಉಗ್ರರು ಬಳಕೆ ಮಾಡಿಕೊಂಡಿದ್ದರು.ವಾಟ್ಸಾಪ್‌, ಇನ್‌ಸ್ಟ್ರಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಉಗ್ರರ ಸಂಪರ್ಕದಲ್ಲಿದ್ದರು.

ದೇಶದಲ್ಲಿ ಸಂಚು ನಡೆಸಲು ಭಾರತದ ಮುಸ್ಲಿಂ ಯುವಕರನ್ನು ಬಳಕೆ ಮಾಡಿಕೊಂಡು ಐಎಸ್‌‍ಎಸ್‌‍ ಭಯೋತ್ಪಾದಕ ಸಂಘಟನೆ ವಿಸ್ತರಿಸಲು ಸಂಚು ರೂಪಿಸಿದ್ದರು. ಈಗಾಗಲೇ ಇಬ್ಬರು ಯುವಕರಿಗೆ ಉಗ್ರರು ಮುಂಬೈನಲ್ಲಿ ಉದ್ಯಮಿಯೊಬ್ಬನನ್ನು ಮುಗಿಸಲು ಟಾಸ್ಕ್‌ ನೀಡಿದ್ದರು. ಅಷ್ಟರೊಳೊಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಗುಪ್ತದಳಕ್ಕೆ ತುಮಕೂರಿನ ಒಬ್ಬ ವ್ಯಕ್ತಿ ಪಾಕ್‌ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿ ಬಂದಿತ್ತು. ಆ ನಂತರ ಅವನ ಬಗ್ಗೆ ನಿಗಾ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಆತ ಸಾಮಾಜಿಕ ಜಾಲತಾಣಗಳಲ್ಲಿ ಶಂಕಿತ ಉಗ್ರರಿಗೆ ಮೆಸೆಜ್‌ ಕಳುಹಿಸುತ್ತಿದ್ದ ಇದರ ಜೊತೆಗೆ ಚಾಟ್‌ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ಆತ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಈ ಮಾಹಿತಿಯನ್ನು ರಾಜ್ಯ ಗುಪ್ತದಳಕ್ಕೆ ತಿಳಿಸಲಾಗಿತ್ತು. ಆಗ ತುಮಕೂರು ಪೊಲೀಸರು, ರಾಜ್ಯ ಗುಪ್ತದಳ ಮತ್ತಿತರ ಪೊಲೀಸರು ಆತನ ಚಲನವಲನಗಳ ಬಗ್ಗೆ ಹದ್ದಿನಕಣ್ಣಿಟ್ಟಿದ್ದರು. ಆತನ ಬಗ್ಗೆ ಸಾಕ್ಷ್ಯ ದೊರೆತ ಕೂಡಲೇ ಅಲ್ಲಾಭಕ್ಷನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ದಾವಣಗೆರೆಯಲ್ಲಿರುವ ಮತ್ತೊಬ್ಬ ಶಂಕಿತನ ಬಗ್ಗೆ ಬಾಯ್ಬಿಟ್ಟಿದ್ದ.

ಆತನ ಮಾಹಿತಿಯಂತೆ ದಾವಣಗೆರೆಗೆ ದೌಡಾಯಿಸಿದ ಪೊಲೀಸ್‌‍ ತಂಡಗಳು ಬೀಡಿ ಬಡಾವಣೆ ನಿವಾಸಿ ಜಮೀರ್‌ ಖಾನ್‌ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಜಮೀರ್‌ಖಾನ್‌ ಹಿನ್ನೆಲೆ; ಪಾಕ್‌ ಉಗ್ರರೊಂದಿಗೆ ಸತತ ಸಂಪರ್ಕದಲ್ಲಿದ್ದ ಜಮೀರ್‌ಖಾನ್‌ ದಾವಣಗೆರೆಯಲ್ಲಿ ಕಟ್ಟಡಿ ನಿರ್ಮಾಣ ಕೆಲಸ ಮಾಡಿಕೊಂಡಿದ್ದ. ದಾವಣಗೆರೆಯಲ್ಲದೆ ಹಾಸನ ಮತ್ತಿತರ ಜಿಲ್ಲೆಗಳಿಗೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಈತನ ತಂದೆ-ತಾಯಿ ಹಾಗೂ ಇಬ್ಬರು ಸಹೋದರರಿದ್ದು ಅವರು ದಾವಣಗೆರೆಯಲ್ಲಿ ವಾಸಿಸುತ್ತಿದ್ದಾರೆ. ಈತ ಇನ್ಸ್ಟಾ ಗ್ರಾಮ್‌ ಮೂಲಕ ಪಾಕ್‌ ಮೂಲದ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ ಅವರ ನೀಡುವ ನಿರ್ದೇಶನದಂತೆ ಈತ ದಾವಣಗೆರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಅಲ್ಲಾಭಕ್ಷು ಹಿನ್ನೆಲೆ:
ತುಮಕೂರಿನಲ್ಲಿ ಸೆರೆ ಸಿಕ್ಕಿರುವ ಅಲ್ಲಾಭಕ್ಷು ಅಲ್ಲಿನ ಕ್ಯಾತ್ಸಂದ್ರ, ಶ್ರೀರಾಮನಗರ ಮತ್ತಿತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಕೂಲಿ ಕೆಲಸ ಮಾಡಿಕೊಂಡಿದ್ದ, ಕೆಲವು ತಿಂಗಳಗಳ ಹಿಂದೆ ಪಾಕ್‌ ಉಗ್ರಗಾಮಿಗಳ ಸಂಪರ್ಕ ಬೆಳೆಸಿಕೊಂಡಿದ್ದು ದೇಶದ ಭದ್ರತೆಗೆ ಧಕ್ಕೆ ಮಾಡುವಂತಹ ರೀತಿಯ ಸಂಭಾಷಣೆಗಳು ಹಾಗೂ ಸಮುದಾಯಕ್ಕೆ ಸೀಮಿತವಾಗಿ ಪ್ರಚೋದಾನಾತಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.ಇವರಿಬ್ಬರ ವಿಚಾರಣೆ ನಂತರ ಪೊಲೀಸರು ಮತ್ತಷ್ಟು ಶಂಕಿತ ಉಗ್ರರ ಬಂಧನಕ್ಕಾಗಿ ರಾಜ್ಯದಾದ್ಯಂತ ಶೋಧ ಕಾರ್ಯ ಮುಂದುವರೆಸಿದ್ದಾರೆ.

RELATED ARTICLES

Latest News