Thursday, April 16, 2026
Homeರಾಜ್ಯಬೆಂಗಳೂರಲ್ಲಿ ಶಾಲೆಗಳ ಸುತ್ತಮುತ್ತ ಅನಾಮಿಕರು ಓಡಾಟ, ಆತಂಕದಲ್ಲಿ ಪೋಷಕರು..!

ಬೆಂಗಳೂರಲ್ಲಿ ಶಾಲೆಗಳ ಸುತ್ತಮುತ್ತ ಅನಾಮಿಕರು ಓಡಾಟ, ಆತಂಕದಲ್ಲಿ ಪೋಷಕರು..!

Unknown people roaming around schools in Bengaluru, parents worried..!

ಬೆಂಗಳೂರು, ಫೆ.23- ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳ ಸುತ್ತಮುತ್ತ ಅನಾಮಿಕರ ಓಡಾಟ ಕಂಡುಬರುತ್ತಿರುವುದು ಪೋಷಕರು ಹಾಗೂ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ಅನಾಮಿಕರ ಓಡಾಟದ ಶಂಕೆ ವ್ಯಕ್ತವಾಗುತ್ತಿದ್ದಂತೆ ಶಾಲಾ ನಿರ್ವಹಣಾ ಮಂಡಳಿಗಳು ಎಚ್ಚೆತ್ತುಕೊಂಡಿವೆ. ಕೆಲವು ಶಾಲೆಗಳು ಪೋಷಕರಿಗೆ ಸಲಹಾ ಪತ್ರ ಕಳುಹಿಸಿ, ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಿಕೊಂಡಿವೆ.

ಖಾಸಗಿ ಶಾಲೆಗಳ ಸುತ್ತ ಅಪರಿಚಿತರ ಸಂಚರಣೆ ಬಗ್ಗೆ ಶಂಕೆಮಕ್ಕಳಿಗೆ ಚಾಕಲೇಟ್‌ ಅಥವಾ ಉಡುಗೊರೆ ನೀಡಿ ಹತ್ತಿರವಾಗಲು ಯತ್ನಗಳು ನಡೆಯುತ್ತಿವೆ.ಶಾಲೆ ಬಿಡುವ ಸಮಯದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಹಾಜರಿ ಕಂಡು ಬಂದಿದೆ. ಕೆಲವು ಕಡೆ ಪೋಷಕರಿಗೆ ಮುನ್ನೆಚ್ಚರಿಕಾ ಸೂಚನೆ ನೀಡಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಾಧನ ಕಾರ್ಯದರ್ಶಿ ಶಶಿಕುಮಾರ್‌ ಮಾಹಿತಿ ನೀಡಿದ್ದಾರೆ.

ಖಾಸಗಿ ಶಾಲೆಗಳ ಒಕ್ಕೂಟದಡಿ ಕಾರ್ಯನಿರ್ವಹಿಸುವ ಕ್ಯಾಮ್ಸೌಸಂಸ್ಥೆಯ ಸೂಚನೆ ಮೇರೆಗೆ ಹಲವು ಶಾಲೆಗಳಲ್ಲಿ ಮಾಕ್‌ ಡ್ರಿಲ್‌ ಆರಂಭವಾಗಿದೆ.ಮಾಕ್‌ ಡ್ರಿಲ್‌ನಲ್ಲಿ ಅಪರಿಚಿತರೊಂದಿಗೆ ಮಾತನಾಡಬಾರದು. ಯಾರಾದರೂ ಚಾಕಲೇಟ್‌‍. ಉಡುಗೊರೆ ಕೊಟ್ಟರೆ ತಕ್ಷಣ ಶಿಕ್ಷಕರಿಗೆ ತಿಳಿಸಬೇಕು.ಪೋಷಕರ ಹೊರತು ಬೇರೆ ಯಾರ ಜೊತೆಗೆ ಹೋಗಬಾರದು.ಅನುಮಾನಾಸ್ಪದ ಘಟನೆ ಕಂಡರೆ ತಕ್ಷಣ ಶಾಲಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಮಕ್ಕಳಿಗೆ ಸರಳವಾಗಿ ಹಾಗೂ ಉದಾಹರಣೆಗಳ ಮೂಲಕ ಅಪಾಯದ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನೂ ಪೋಷಕರಿಗೆ ಮಕ್ಕಳಿಗೆ ಗುಡ್‌ ಟಚ್‌ ಬ್ಯಾಡ್‌ ಟಚ್‌ ಅರಿವು ಕಲಿಸಬೇಕು, ಶಾಲೆಯಿಂದ ಮನೆಗೆ ಬರುವ ಸಮಯದಲ್ಲಿ ಗಮನ ವಹಿಸಬೇಕು, ಅಪರಿಚಿತರೊಂದಿಗೆ ಮಾತನಾಡಬಾರದು ಎಂಬುದನ್ನು ಮತ್ತೆ ಮತ್ತೆ ಹೇಳಬೇಕು, ಶಾಲಾ ಐಡಿ ಕಾರ್ಡ್‌ ಕಡ್ಡಾಯವಾಗಿ ಧರಿಸಲು ಸೂಚಿಸಬೇಕು ಎಂದು ಪೋಷಕರಿ ತಿಳಿಹೇಳಲಾಗಿದೆ.

ಪೊಲೀಸ್‌‍ ಇಲಾಖೆಶಾಲೆಗಳ ಸುತ್ತ ಪ್ಯಟ್ರೋಲಿಂಗ್‌ ಹೆಚ್ಚಿಸುವಂತೆ ಸ್ಥಳೀಯ ಪೊಲೀಸ್‌‍ ಠಾಣೆಗಳಿಗೆ ಮನವಿ ಮಾಡಲಾಗಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.ಶಾಲೆಗಳ ಸುರಕ್ಷತೆ ಕುರಿತು ಹೆಚ್ಚುತ್ತಿರುವ ಆತಂಕದ ನಡುವೆ, ಮುನ್ನೆಚ್ಚರಿಕೆ ಕ್ರಮಗಳೇ ಮಕ್ಕಳ ಭದ್ರತೆಗೆ ಮೊದಲ ಹೆಜ್ಜೆ ಎಂಬ ಸಂದೇಶವನ್ನು ಶಾಲಾ ನಿರ್ವಹಣೆ ಮತ್ತು ಪೋಷಕರು ಒತ್ತಿ ಹೇಳುತ್ತಿದ್ದಾರೆ.

RELATED ARTICLES

Latest News