Homeರಾಜ್ಯಮ್ಯಾಟ್ರಿಮೋನಿಯಲ್ಲಿ ಯುವಕರನ್ನು ಹುಡುಕುವ ಯುವತಿಯರೇ ಹುಷಾರ್..!

ಮ್ಯಾಟ್ರಿಮೋನಿಯಲ್ಲಿ ಯುವಕರನ್ನು ಹುಡುಕುವ ಯುವತಿಯರೇ ಹುಷಾರ್..!

Unmarried women beware while looking for young men on matrimony

ಬೆಂಗಳೂರು,ಫೆ.11- ಅವಿವಾಹಿತ ಯುವತಿಯರೇ ಎಚ್ಚರ….! ಆನ್‌ಲೈನ್‌ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಲ್ಲಿ ನಿಮ ಮಾನ-ಹಣ ದೋಚುವ ಖತರ್ನಾಕ್‌ ಯುವಕರ ಮಾತಿಗೆ ಮರುಳಾಗದಿರಿ ಜೋಕೆ.

ಇಂತಹದೊಂದು ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದು, ಒಬ್ಬ ಯುವತಿಗೆ ಗೊತ್ತಾಗದಂತೆ ಮತ್ತೊಬ್ಬಾಕೆೆಯನ್ನು, ಆಕೆಗೆ ಗೊತ್ತಾಗದಂತೆ ಇನ್ನೊಬ್ಬ ಯುವತಿಯನ್ನು, ಹೀಗೆ ಯುವತಿಯರಿಗೆೆ ಗಾಳ ಹಾಕುವ ಮೂಲಕ ಬರೋಬ್ಬರಿ ಒಂಬತ್ತು ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ್ದ ಮ್ಯಾಟ್ರಿಮೋನಿ ಮನಥ ಇದೀಗ ಖಾಕಿ ಬಲೆಗೆ ಬಿದ್ದಿದ್ದಾನೆ.

ಮಂಗಳೂರಿನ ನಿವಾಸಿ ಸುಶಾಂತ್‌ ಪೂಜಾರಿ ಅಲಿಯಾಸ್‌‍ ಸುಶಾಂಕ್‌ ಅಂಕುಶ್‌ ಪೂಜಾರಿ ಅಲಿಯಾಸ್‌‍ ಸುಶಾಂಕ್‌ ಜಿ ಕರ್ಕೇರಾ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ಸಹಾಯ ಮಾಡಿದ ಬಾಸ್ಕರ್‌ ಎಂಬಾತನನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.ಈತನ ಕಾಯಕವೇ ಆನ್‌ಲೈನ್‌ ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡುವುದು.

ಮೊದಲಿಗೆ ಉಡುಪಿ ಯುವತಿಯನ್ನು ಮದುವೆಯಾಗಿದ್ದ ಈ ಭೂಪ ನಂತರದ ದಿನಗಳಲ್ಲಿ ಉಡುಪಿಯ ಇಬ್ಬರು ಯುವತಿಯವರಿಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದಿದ್ದಾನೆ.ತದನಂತರ ಮುಂಬೈನ ಇಬ್ಬರು ಯುವತಿಯರಿಗೂ ಇದೇ ರೀತಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದ ಈತ ನಗರದ ಇಬ್ಬರು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದು ಬೆಳಕಿಗೆ ಬರುತ್ತಿದ್ದಂತೆ ನೊಂದ ಮಹಿಳೆ ಮಂಗಳೂರಿನ ಕಾವೂರು ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಆತನ ಜನ ಜಾಲಾಡಿದಾಗ ಬರೋಬ್ಬರಿ ಒಂಬತ್ತು ಯುವತಿಯರಿಗೆ ವಂಚಿಸಿರುವುದು ಗೊತ್ತಾಗಿದೆ.ಇದೇ ರೀತಿ ಈ ಯುವಕನಿಂದ ಮೋಸ ಹೋಗಿದ್ದಲ್ಲಿ ಕೂಡಲೇ ಪೊಲೀಸ್‌‍ ಠಾಣೆಗೆ ದೂರು ನೀಡುವಂತೆ ಕೋರಲಾಗಿದೆ.

RELATED ARTICLES
spot_img

Latest News