ಬೆಂಗಳೂರು,ಏ.9- ನಗರದಲ್ಲಿ ಜೋಂಬಿ ಡ್ರಗ್ಸ್ ಪ್ರವೇಶಿಸಿರುವ ಬಗ್ಗೆ ಮಾಹಿತಿಯನ್ನು ಪತ್ತೆ ಹಚ್ಚಿ ಜನರಿಗೆ ವಾಸ್ತವಾಂಶ ತಿಳಿಸುವಂತೆ ನಟ ದುನಿಯಾ ವಿಜಯ್ ಮನವಿ ಮಾಡಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ನಿಂತ ಜಾಗದಲ್ಲೇ ಅರೆಪ್ರಜ್ಞಾವಸ್ಥೆಯಲ್ಲಿ ಅಲುಗಾಡುತ್ತಿರುವುದು ಕಂಡು ಬರುತ್ತಿದೆ.
ಈ ವೀಡಿಯೋ ಬೆಂಗಳೂರಿಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಸದರಿ ವ್ಯಕ್ತಿ ಅಪಾಯಕಾರಿಯಾದ ಜೋಂಬಿ ಡ್ರಗ್ಸ್ ಅನ್ನು ಸೇವಿಸಿದ್ದಾನೆ ಎಂದು ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ದುನಿಯಾ ವಿಜಯ್ ಮನವಿ ಮಾಡಿಕೊಂಡಿದ್ದಾರೆ.
ಈ ಮೊದಲು ಭೀಮ ಸಿನಿಮಾದಲ್ಲಿ ಗಾಂಜಾ ಹಾಗೂ ಟೈಡೆಲ್ ಡ್ರಗ್‌್ಸ ಬಗ್ಗೆ ಚರ್ಚೆ ಮಾಡಲಾಗಿತ್ತು. ಈಗ ಬೆಂಗಳೂರಿಗೆ ಹೊಸದಾಗಿ ಜೋಂಬಿ ಎಂಬ ಡ್ರಗ್‌್ಸ ಬಂದಿರುವುದಾಗಿ ಹೇಳಲಾಗುತ್ತಿದೆ. ಯುವಕರು ಎಚ್ಚರವಾಗಿರಬೇಕು. ಅದರಲ್ಲೂ ಪೋಷಕರು ತಮ ಮಕ್ಕಳ ಮೇಲೆ ತೀವ್ರ ನಿಗಾವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆ ಈಗಾಗಲೇ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಜೋಂಬಿ ಡ್ರಗ್‌್ಸ ಬಗ್ಗೆ ವಾಸ್ತವಾಂಶವನ್ನು ಪತ್ತೆ ಹಚ್ಚಿ ಜನರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಈ ರೀತಿ ಅಪಾಯಕಾರಿ ಡ್ರಗ್‌್ಸ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಬೇಕೆಂದು ದುನಿಯಾ ವಿಜಯ್ ಮನವಿ ಮಾಡಿದ್ದಾರೆ.
ಜೋಂಬಿ ಡ್ರಗ್‌್ಸ ಈಗಾಗಲೇ ಬಹಳಷ್ಟು ಕಡೆ ಹರಿದಾಡಿದ್ದು, ತೀವ್ರ ಪರಿಣಾಮವನ್ನು ಸೃಷ್ಟಿಸಿದೆ. ಅದು ಬೆಂಗಳೂರಿಗೂ ಕಾಲಿಟ್ಟಿದೆ ಎಂಬ ಬಗ್ಗೆ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದರು.
