ವಾಷಿಂಗ್ಟನ್,ಏ.20: ಒಮಾನ್ ಕೊಲ್ಲಿಯಲ್ಲಿ ಇರಾನ್ ಧ್ವಜದ ಟ್ಯಾಂಕರ್ನ್ನು ಅಮೆರಿಕಾ ವಶಪಡಿಸಿಕೊಂಡ ಘಟನೆಗೆ ತಕ್ಷಣ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಸೇನೆ ಎಚ್ಚರಿಕೆ ನೀಡಿದೆ.ಅಮೆರಿಕಾ ಪಡೆಗಳು ಹಡಗಿನ ಮೇಲೆ ದಾಳಿ ನಡೆಸಿ ನಂತರ ಅದನ್ನು ಹತ್ತಿಕೊಂಡಿರುವುದು ಯುದ್ಧ ವಿರಾಮ ಒಪ್ಪಂದದ ಉಲ್ಲಂಘನೆ ಎಂದು ಇರಾನ್ ಸೇನಾ ಮುಖ್ಯ ಕಚೇರಿ ಹೇಳಿದೆ.
ಈ ಕ್ರಮವನ್ನು ಸಮುದ್ರ ದರೋಡೆ ಎಂದು ಇರಾನ್ ಸರ್ಕಾರದ ಪ್ರಸಾರ ಸಂಸ್ಥೆ ಖಂಡಿಸಿದೆ.ಅಮೆರಿಕಾ ಹೇಳುವಂತೆ, ಹಡಗು ಹಲವು ಎಚ್ಚರಿಕೆಗಳನ್ನು ಲೆಕ್ಕಿಸದೆ ನೌಕಾ ನಿಷೇಧ ರೇಖೆಯನ್ನು ದಾಟಿದ್ದರಿಂದ ಅದನ್ನು ವಶಪಡಿಸಿಕೊಂಡಿದೆ ಎಂದಿದೆ.
ಹಾರ್ಮುಜ್ ಜಲಸಂಧಿಯ ಸಮೀಪ ನೌಕಾ ನಿಷೇಧವನ್ನು ಮೀರಿ ಸಾಗಲು ಪ್ರಯತ್ನಿಸಿದ ಇರಾನ್ ಧ್ವಜದ ಸರಕು ಹಡಗನ್ನು ಅಮೆರಿಕಾ ನಿನ್ನೆ ಬಲವಂತವಾಗಿ ವಶಪಡಿಸಿಕೊಂಡಿದೆ.ಕಳೆದ ವಾರ ಇರಾನ್ ಬಂದರುಗಳ ಮೇಲಿನ ನಿಷೇಧ ಆರಂಭವಾದ ಬಳಿಕ ಇದೇ ಮೊದಲ ಘಟನೆ ಎಂದು ತಿಳಿಸಲಾಗಿದೆ.
ಈ ಬೆಳವಣಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್್ಡ ಟ್ರಂಪ್ ಅವರು ಇಂದು ಪಾಕಿಸ್ತಾನದಲ್ಲಿ ಇರಾನ್ ಜೊತೆ ಮತ್ತೊಂದು ಸಂಧಾನಕರರನ್ನು ಸುತ್ತಿನ ಮಾತುಕತೆಗೆ ಅಮೆರಿಕಾ ಪ್ರತಿನಿಧಿಗಳು ತೆರಳಲಿದ್ದಾರೆ ಎಂದು ಮಾಡಿದ ಘೋಷಣೆಯ ಬಗ್ಗೆ ಅನುಮಾನ ಮೂಡಿಸಿದೆ. ಯುದ್ಧ ವಿರಾಮ ಬುಧವಾರಕ್ಕೆ ಕೊನೆಗೊಳ್ಳಲಿದ್ದು, ಜಲಸಂಧಿ ವಿಚಾರದಲ್ಲಿ ವಾಷಿಂಗ್ಟನ್ ಮತ್ತು ತೆಹ್ರಾನ್ ನಡುವೆ ಸಂಘರ್ಷ ಮುಂದುವರಿದಿದೆ.
