Wednesday, April 22, 2026
Homeಜಿಲ್ಲಾ ಸುದ್ದಿಗಳುನೈಟಿ, ಗೌನ್‌ ಹಾಕುತ್ತಿದ್ದ ಪತ್ನಿಗೆ ಬೆಂಕಿಯಿಟ್ಟ ಪತಿ

ನೈಟಿ, ಗೌನ್‌ ಹಾಕುತ್ತಿದ್ದ ಪತ್ನಿಗೆ ಬೆಂಕಿಯಿಟ್ಟ ಪತಿ

Husband sets wife on fire for wearing Nighty

ಬೆಳಗಾವಿ,ಏ.22- ಪತ್ನಿ ತೊಟ್ಟ ಬಟ್ಟೆ ಬಗ್ಗೆ ಜಗಳ ನಡೆದು ಕೊನೆಗೆ ಆಕೆಗೆ ಬೆಂಕಿ ಹಚ್ಚಿದ ಪಾಪಿ ಪತಿರಾಯ ಪರಾರಿಯಾಗಿರುವ ಘಟನೆ ಜಿಲ್ಲೆಯ ಖಾನಾಪೂರ ನಂದಗಡದಲ್ಲಿ ನಡೆದಿದೆ.ಕೃಷ್ಣಾಜಿ ಪಾಟೀಲ್‌ ಪತ್ನಿಗೆ ಬೆಂಕಿ ಹಚ್ಚಿದ ಆರೋಪಿಯಾಗಿದ್ದು, ಘಟನೆಯಲ್ಲಿ ಪತ್ನಿ ಮಂಜುಳಾ ಪಾಟೀಲ್‌ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ತಕ್ಷಣ ಅಕ್ಕಪಕ್ಕದವರು ದಾವಿಸಿ ಬೆಂಕಿ ನಂದಿಸಿ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಬಿಮ್ಸೌ ಆಸ್ಪತ್ರೆಯಿಂದ ಗೋವಾಗೆ ಶಿ್ಟ್‌ ಮಾಡಿದ್ದಾರೆ. ಮಂಜುಳಾ ಹಾಗೂ ಕೃಷ್ಣಾಜಿ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಹೆಂಡತಿ ಸೀರೆ ಬದಲು ನೈಟಿ, ಗೌನ್‌ ಹಾಕುತ್ತಿರುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು.

ವಾಗ್ವಾದ ಅತೀರೇಕಕ್ಕೆ ಹೋಗಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲಾಟೆ ಶಬ್ಧ ಕೇಳಿ ಸ್ಥಳೀಯರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ನಂತರ ಆರೋಪಿಯನ್ನು ಬಂಽಸಿದ್ದಾರೆ.
ನಂದಗಢ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News