Homeರಾಷ್ಟ್ರೀಯಡಾಲರ್‌ ಎದುರು ಚೇತರಿಸಿಕೊಂಡ ರೂಪಾಯಿ : 40 ಪೈಸೆ ಏರಿಕೆ

ಡಾಲರ್‌ ಎದುರು ಚೇತರಿಸಿಕೊಂಡ ರೂಪಾಯಿ : 40 ಪೈಸೆ ಏರಿಕೆ

Rupee rises 40 paise to 95.20 against US dollar in early trade

ಮುಂಬೈ,ಮೇ 25- ಅಮೆರಿಕ ಮತ್ತು ಇರಾನ್‌ ನಡುವೆ ಶಾಂತಿ ಒಪ್ಪಂದ ಸಾಧ್ಯತೆಯ ಬಗ್ಗೆ ಮೂಡಿರುವ ಆಶಾವಾದದ ನಡುವೆ, ಇಂದು ಬೆಳಿಗ್ಗೆ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಅಮೆರಿಕ ಡಾಲರ್‌ ಎದುರು 40 ಪೈಸೆ ಏರಿಕೆ ಕಂಡು 95.20ಕ್ಕೆ ತಲುಪಿದೆ.

ವಿದೇಶಿ ವಿನಿಮಯ ಮಾರುಕಟ್ಟೆ ವ್ಯಾಪಾರಿಗಳ ಪ್ರಕಾರ, ಸುಮಾರು ಮೂರು ತಿಂಗಳಿನಿಂದ ಮುಂದುವರಿದಿರುವ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್‌ ಬಹುತೇಕ ಶಾಂತಿ ಒಪ್ಪಂದದ ಕುರಿತು ಮಾತುಕತೆ ಪೂರ್ಣಗೊಳಿಸಿರುವುದರಿಂದ ರೂಪಾಯಿ ಸಕಾರಾತಕ ಆರಂಭ ಕಂಡಿದೆ.

ಅಂತರಬ್ಯಾಂಕ್‌ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಪ್ರತಿ ಡಾಲರ್‌ಗೆ 95.36ರಲ್ಲಿ ವಹಿವಾಟು ಆರಂಭಿಸಿ, ಬಳಿಕ 95.20ಕ್ಕೆ ಏರಿಕೆಯಾಯಿತು. ಶುಕ್ರವಾರ ರೂಪಾಯಿ 75 ಪೈಸೆ ಏರಿಕೆ ಕಂಡು 95.60ರಲ್ಲಿ ಮುಕ್ತಾಯಗೊಂಡಿತ್ತು.

ಇಂದು ದೇಶೀಯ ಷೇರು ಮಾರುಕಟ್ಟೆಯಲ್ಲೂ ಏರಿಕೆ ಕಂಡುಬಂದಿದ್ದು, ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್‌್ಸ 908.98 ಅಂಕಗಳಷ್ಟು ಏರಿ 76,317.85ಕ್ಕೆ ತಲುಪಿದರೆ, ನಿಫ್ಟಿ 262.65 ಅಂಕಗಳಷ್ಟು ಜಿಗಿದು 23,977.70ಕ್ಕೆ ತಲುಪಿದೆ.

ಇನ್ನೊಂದೆಡೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾಹಿತಿ ಪ್ರಕಾರ, ಮೇ 15ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 8.094 ಬಿಲಿಯನ್‌ ಡಾಲರ್‌ ಕುಸಿದು 688.894 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ.

RELATED ARTICLES

Latest News