Homeರಾಷ್ಟ್ರೀಯತಿಮಪ್ಪನಿಗೆ ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣ ಕಾಣಿಕೆ ನೀಡಲಿರುವ ಭಕ್ತ

ತಿಮಪ್ಪನಿಗೆ ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣ ಕಾಣಿಕೆ ನೀಡಲಿರುವ ಭಕ್ತ

ಅಮರಾವತಿ, ನ.23- ತಿರುಪತಿ ತಿಮಪ್ಪನಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ನೀಡಲು ತೀರ್ಮಾನಿಸಿದ್ದಾರೆ. ಅಂದಾಜು 150ರಿಂದ 160 ಕೋಟಿ ರೂ. ಮೌಲ್ಯದ ಚಿನ್ನ ಇದಾಗಿದ್ದು, ತಿರುಮಲ ದೇವಸ್ಥಾನದ ಇತಿಹಾಸದಲ್ಲೇ ವೈಯಕ್ತಿಕವಾಗಿ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಿದೆ.

ಒಟ್ಟು 121 ಕೆಜಿ ತೂಕದ ಚಿನ್ನದಲ್ಲಿ 9 ಸೆಟ್‌ಗಳಾಗಿ 45 ವಿವಿಧ ಆಭರಣಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈಗಾಗಲೇ ದಾನಿಯು ಟಿಟಿಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಕಾಣಿಕೆ ಸಮರ್ಪಣೆಗೆ ಅಗತ್ಯವಿರುವ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ.

ನವೆಂಬರ್‌ 26ರಂದು ದೇವಸ್ಥಾನದಲ್ಲಿ ಅಧಿಕೃತವಾಗಿ ಚಿನ್ನಾಭರಣಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯಮಿಯೊಬ್ಬರು ತಮ್ಮ ಕಂಪನಿಯ ಷೇರು ಮಾರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನವನ್ನು ಕಾಣಿಕೆಯಾಗಿ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಆಭರಣಗಳ ತಯಾರಿಕೆ ಪೂರ್ಣಗೊಂಡಿದ್ದು, ನವೆಂಬರ್‌ 26ರಂದು ದೇವರಿಗೆ ಸಮರ್ಪಣೆಯಾಗಲಿದೆ.

RELATED ARTICLES

Latest News