Homeಬೆಂಗಳೂರುಬೆಂಗಳೂರಿನ ಈ ದಿನದ ಕ್ರೈಂ ಸುದ್ದಿಗಳು

ಬೆಂಗಳೂರಿನ ಈ ದಿನದ ಕ್ರೈಂ ಸುದ್ದಿಗಳು

Today's Crime News from Bangalore

ಆಂಧ್ರದ ಗ್ಯಾಂಗ್‌ ಸೆರೆ : 1.16 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು,ಮೇ 26- ಮನೆ ಮತ್ತು ಜ್ಯೂವೆಲ್ಲರಿ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆಂಧ್ರದ ನಾಲ್ಕು ಮಂದಿಯ ಗ್ಯಾಂಗ್‌ ಸೇರಿ ಐದು ಮಂದಿಯನ್ನು ವೈಟ್‌ಫೀಲ್‌್ಡ ಠಾಣೆ ಪೊಲೀಸರು ಬಂಧಿಸಿ 9.85 ಲಕ್ಷ ನಗದು ಸೇರಿದಂತೆ 1.16 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ರಾಕೇಶ್‌ (25), ನರೇಶ್‌ (29), ಸುನೀಲ್‌ (28), ಕರಿಸತ್ಯಬಾಬು (37) ಬಂಧಿತ ಗ್ಯಾಂಗ್‌. ಪ್ರಮುಖ ಆರೋಪಿ ಕರಿಸತ್ಯಬಾಬು ವಿರುದ್ಧ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ , ಕೇರಳ, ಒಡಿಸ್ಸಾ,ಮಹಾರಾಷ್ಟ್ರ, ತಮಿಳುನಾಡು ಪೊಲೀಸ್‌‍ ಠಾಣೆಗಳಲ್ಲಿ ವಿವಿಧ ಒಟ್ಟು 78 ಪ್ರಕರಣಗಳು ದಾಖಲಾಗಿವೆ.

ಬಂಧಿತರಿಂದ 1 ಕೋಟಿ ಮೌಲ್ಯದ 486 ಗ್ರಾಂ ಚಿನ್ನಾಭರಣ, ಕಾರು, ವಾಚ್‌, 9.85 ಲಕ್ಷ ನಗದು ವಶಪಡಿಸಿಕೊಳ್ಳಾಗಿದೆ.ವೈಟ್‌ಫೀಲ್‌್ಡ ಪೊಲೀಸ್‌‍ ಠಾಣೆಯಲ್ಲಿ ಮನೆಗಳ್ಳತನ ಹಾಗೂ ಜ್ಯೂವೆಲ್ಲರಿ ಶಾಪ್‌ನಲ್ಲಿ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಈ ಎರಡೂ ಪ್ರಕರಣಗಳ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ, ಪ್ರಕರಣವೊಂದರಲ್ಲಿ ಆಂಧ್ರದ ನಾಲ್ವರ ಗ್ಯಾಂಗ್‌ನ್ನು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಶಿವಾಜಿನಗರದ ನಿವಾಸಿ ತಾಯಿಬ್‌ಖಾನ್‌ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾನೆ.

ಆರೋಪಿಯಿಂದ 16 ಲಕ್ಷ ಮೌಲ್ಯದ 98 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದ್ದು, ಕಳವು ಮಾಡಿದ ಚಿನ್ನಾಭರಣಗಳ ಪೈಕಿ ಸ್ವಲ್ಪ ಚಿನ್ನಾಭರಣಗಳನ್ನು ಆರೋಪಿಗಳ ವಾಸದ ಮನೆಯಲ್ಲಿ ಹಾಗೂ ಉಳಿದ ಚಿನ್ನಾಭರಣಗಳನ್ನು ಜ್ಯೂವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳ ವಾಸದ ಮನೆಯಿಂದ ಹಾಗೂ ಜ್ಯೂವೆಲ್ಲರಿ ಅಂಗಡಿಗಳಿಂದ ಒಟ್ಟು 584 ಗ್ರಾಂ ಚಿನ್ನಾಭರಣ, ಕಾರು, ವಾಚ್‌, ಹಾಗೂ 9.85 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.

ಈ ಎರಡೂ ಪ್ರಕರಣಗಳ ಆರೋಪಿಗಳ ಬಂಧನದಿಂದ ವೈಟ್‌ಪೀಲ್ಡ್ ಪೊಲೀಸ್‌‍ ಠಾಣೆಯ 3 ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಕಾರ್ಯಾಚರಣೆಗಳನ್ನು ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್‌‍ ಆಯುಕ್ತರಾದ ಸೈದುಲು ಅಡಾವತ್‌ಮಾರ್ಗದರ್ಶನದಲ್ಲಿ, ವೈಟ್‌ಫೀಲ್ಡ್ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರಾದ ರೀನಾ ಸುವರ್ಣ ರವರ ನೇತೃತ್ವದಲ್ಲಿ, ಇನ್‌್ಸಪೆಕ್ಟರ್‌ಗಳಾದ ಪೀತಮ್‌ ಹಾಗೂ ಸಿಬ್ಬಂದಿ ತಂಡವು ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಒಂಬತ್ತು ಮಂದಿ ಕೆಲಸಗಾರರ ಬಂಧನ : 89 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶ

ಬೆಂಗಳೂರು,ಮೇ 26- ಕೆಲಸ ಮಾಡಿಕೊಂಡಿದ್ದ ಕಂಪನಿಯಲ್ಲೇ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ರೈಲಿನಲ್ಲಿ ಪರಾರಿಯಾಗಿದ್ದ ಒಂಭತ್ತು ಮಂದಿಯನ್ನು ಹಲಸೂರುಗೇಟ್‌ ಠಾಣೆ ಪೊಲೀಸರು ಬಂಧಿಸಿ 89 ಲಕ್ಷ ಮೌಲ್ಯದ 618 ಗ್ರಾಂ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ನಗರತ್‌ಪೇಟೆ ಮುಖ್ಯರಸ್ತೆಯಲ್ಲಿ ಗೋಲ್ಡ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯನಿಯಲ್ಲಿ ಆರು ತಿಂಗಳಿಂದ ಚಿನ್ನ,ಬೆಳ್ಳಿ ಕೆಲಸ ಮಾಡಿಕೊಂಡಿದ್ದ ಒಂಭತ್ತು ಮಂದಿ ಕೆಲಸಗಾರರು ಮೇ 11 ರಂದು ರಾತ್ರಿ ಕಂಪನಿಯಲ್ಲಿದ್ದ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಕಂಪನಿ ಮಾಲೀಕರು ಹಲಸೂರುಗೇಟ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ಈ ಚಾಲಾಕಿ ಕೆಲಸಗಾರರು ನಗರದಿಂದ ಪಶ್ಚಿಮಬಂಗಾಳಕ್ಕೆ ವಿಶಾಖಪಟ್ಟಣಂ ಮೂಲಕ ರೈಲಿನಲ್ಲಿ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಕಲೆಹಾಕಿ, ತಕ್ಷಣ ಅಲ್ಲಿಗೆ ತೆರಳಿ ಒಂಭತ್ತು ಕೆಲಸಗಾರರನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದ ರೈಲ್ವೆ ನಿಲ್ದಾಣದ ಬಳಿ ಕಳವು ಮಾಡಿದ್ದ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣಗಳ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಮಾಲೀಕರು ಸರಿಯಾಗಿ ಸಂಬಳವನ್ನು ನೀಡದ ಕಾರಣ ಮತ್ತು ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆಭರಣ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.ಒಂಬತ್ತು ಆರೋಪಿಗಳ ಬಂಧನದಿಂದ, ಒಟ್ಟು 618 ಗ್ರಾಂ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಅಶ್ವತ್ಥನಾರಾಯಣಸ್ವಾಮಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿದೆ.

ಇಬ್ಬರು ಆರೋಪಿಗಳ ಬಂಧನ : 64.73 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಮೇ 26- ಕುಟುಂಬ ಸಮೇತ ಕಾಶಿ ಯಾತ್ರೆಗೆ ತೆರಳಿದ್ದಾಗ ಮನೆಯ ಬಾಗಿಲು, ಕಿಟಕಿ ಒಡೆದು ಒಳನುಗ್ಗಿ ಹಣ, ಆಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿ 1.43 ಲಕ್ಷ ನಗದು ಸೇರಿದಂತೆ 64.73 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಲಿಂಗಬೀರನಹಳ್ಳಿಯ ಡಿ ಗ್ರೂಪ್‌ ಲೇಔಟ್‌ ನಿವಾಸಿ ಕಳೆದ ಮಾ.20 ರಂದು ಕುಟುಂಬ ಸಮೇತ ಕಾಶಿ ತೀರ್ಥಯಾತ್ರೆಗೆ ತೆರಳಿದ್ದರು. ಮಾ. 28 ರಂದು ಮನೆಕೆಲಸಗಾರರು ಮನೆ ಬಳಿ ಹೋದಾಗ ಕಿಟಕಿ, ಬಾಗಿಲು ತೆರೆದುಕೊಂಡಿರುವುದು ಕಂಡು ಬಂದಿದೆ.

ಇದರಿಂದ ಗಾಬರಿಯಾದ ಕೆಲಸಗಾರರು ತಕ್ಷಣ ಕರೆ ಮಾಡಿ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಅಂದು ರಾತ್ರಿಯೇ ಕುಟುಂಬದವರು ವಾಪಸ್‌‍ ಆಗಿದ್ದು, ಮನೆಯೊಳಗೆ ಹೋಗಿ ನೋಡಿದಾಗ ಬೀರುವಿನಲ್ಲಿಟ್ಟಿದ್ದ ಹಣ, ಆಭರಣಗಳು ಕಳುವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಜಿಲ್ಲಾ ಲಕ್ಕವಳ್ಳಿ ಪೊಲೀಸ್‌‍ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಜಿಲ್ಲಾ ಕಾರಾಗೃಹದಲ್ಲಿದ್ದ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಬಾಡಿ ವಾರೆಂಟ್‌ ಪಡೆದು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಕಳವು ಮಾಡಿದ್ದ ಚಿನ್ನಮತ್ತು ಬೆಳ್ಳಿ ವಸ್ತುಗಳನ್ನು ಮಂಗಳೂರಿನ ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದು, ಅದರಿಂದ ಬಂದ ಸ್ವಲ್ಪ ಹಣವನ್ನು ವಾಸದ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳ ಮಾಹಿತಿಯಂತೆ ಮಂಗಳೂರಿನ ಜ್ಯೂವೆಲರಿ ಅಂಗಡಿಯಿಂದ 470 ಗ್ರಾಂ ಚಿನ್ನಾಭರಣ, 750 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಆರೋಪಿಯ ಮನೆಯಿಂದ 1.43 ಲಕ್ಷ ನಗದು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಭಾಸ್ಕರ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ ಮತ್ತು ಪೀಣ್ಯ ಪೊಲೀಸ್‌‍ ಠಾಣೆಯ ತಲಾ ಒಂದು ಕನ್ನಕಳವು ಪ್ರಕರಣ ಪತ್ತೆಯಾಗಿವೆ. ಆರೋಪಿಗಳಿಬ್ಬರನ್ನು ಚಿಕ್ಕಮಗಳೂರಿನ ಜಿಲ್ಲಾ ಕಾರಾಗೃಹಕ್ಕೆ ವಾಪಸ್‌‍ ಬಿಡಲಾಗಿರುತ್ತದೆ.

ಕ್ರಿಕೆಟ್‌ ಬೆಟ್ಟಿಂಗ್‌ ಮೇಲೆ ಸಿಸಿಬಿ ದಾಳಿ : ನಗದು ಸೇರಿ 13 ಕೋಟಿ ಮೌಲ್ಯದ ಮಾಲು ವಶ

ಬೆಂಗಳೂರು,ಮೇ 26- ಟಾಟಾ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯಾವಳಿಯ ವೇಳೆ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ವಿರುದ್ದ ಸಿಸಿಬಿಯ ವಿಶೇಷ ದಳದ ಪೊಲೀಸರು ನಗರದಲ್ಲಿ ವಿವಿದೆಡೆ ದಾಳಿ ನಡೆಸಿ 17 ಪ್ರಕರಣಗಳನ್ನು ದಾಖಲಿಸಿ 23 ಆರೋಪಿಗಳನ್ನು ಬಂಧಿಸಿ 13,39,53,344 ರೂ. ಮೌಲ್ಯದ ಹಣ, ಮೊಬೈಲ್‌ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನಗರದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ.

ಸಿಸಿಬಿ ಪೊಲೀಸ್‌‍ ಠಾಣೆಯಲ್ಲಿ 9 ಪ್ರಕರಣಗಳು ದಾಖಲಾಗಿದ್ದು, ಪ್ರಮುಖ 4 ಪ್ರಕರಣಗಳಲ್ಲಿ ಬಂಧಿತ ಐವರು ಆರೋಪಿಗಳಿಂದ 1.10 ಲಕ್ಷ ರೂ. ಮೌಲ್ಯದ 7 ಮೊಬೈಲ್‌ಗಳು, 1,06,433 ರೂ. ನಗದು, 13,37,36,911 ಮೌಲ್ಯದ ಚಿಪ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ನಗರದ ಪೊಲೀಸ್‌‍ ಆಯುಕ್ತರಾದ ಸೀಮಂತ್‌ ಕುಮಾರ್‌ ಸಿಂಗ್‌ ಮಾರ್ಗದರ್ಶನದಲ್ಲಿ ಅಪರ ಪೊಲೀಸ್‌‍ ಆಯುಕ್ತ ಅಜಯ್‌ ಹಿಲೋರಿ ಮತ್ತು ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ಸಿಸಿಬಿಯ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್‌‍ ಆಯುಕ್ತರು ಮತ್ತು ಪೊಲೀಸ್‌‍ ಇನ್‌ಸ್ಪೆಕ್ಟರ್‌ ಒಳಗೊಂಡ ಇತರೆ ಅಧಿಕಾರಿ, ಸಿಬ್ಬಂದಿಯವರ ತಂಡ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ನೇಹಿತೆಯ ಹಣ, ಚಿನ್ನಾಭರಣ ದುರುಪಯೋಗ :ದಂಪತಿ ಬಂಧನ

ಬೆಂಗಳೂರು, ಮೇ 26- ನಂಬಿಕೆಯಿಂದ ಸ್ನೇಹಿತೆಯು ತಂದಿಟ್ಟಿದ್ದ ಚಿನ್ನಾಭರಣಗಳನ್ನು ದುರುಪಯೋಗ ಪಡಿಸಿಕೊಂಡಿದ್ದ ದಂಪತಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ಮೌಲ್ಯದ 232 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬನಶಂಕರಿ 6ನೇ ಹಂತದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದ ಸ್ನೇಹಿತೆ ಬಿಇಎಂಎಲ್‌ ಲೇಔಟ್‌ 5ನೇ ಹಂತದಲ್ಲಿ ವಾಸವಿರುವ ಮನೆಯಲ್ಲಿ ಎಂಟು ವರ್ಷಗಳಿಂದ ವಾಸವಾಗಿರುತ್ತಾರೆ.
2024ನೇ ಜೂನ್‌ನಲ್ಲಿ ಬ್ಯಾಂಕ್‌ವೊಂದರ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಬೇರೆ ಬ್ಯಾಂಕ್‌ನ ಲಾಕರ್‌ನಲ್ಲಿಡಲು ಸ್ನೇಹಿತೆ ಬಿಡಿಸಿಕೊಂಡು ಬಂದು, ಅದರ ಜೊತೆಗೆ 49.50 ಲಕ್ಷ ನಗದನ್ನು ಸೇರಿಸಿ, ತನ್ನ ಸ್ನೇಹಿತೆಯ ಮನೆಯ ಕೊಠಡಿಯ ಬೀರುವಿನಲ್ಲಿಟ್ಟು ಕೀಯನ್ನು ಅವರ ಬಳಿಯೇ ಇಟ್ಟುಕೊಂಡಿರುತ್ತಾರೆ.

ಚಿನ್ನಾಭರಣಗಳು ಮತ್ತು ನಗದನ್ನು ಬೇರೊಂದು ಬ್ಯಾಂಕ್‌ನ ಲಾಕರ್‌ನಲ್ಲಿಡಲು ಬೀರುವಿನ ಕೀಯನ್ನು ನೋಡಿದಾಗ ಬೀರುವಿನ ಕೀ ಕಳೆದು ಹೋಗಿರುತ್ತದೆ. ಆಕೆಯ ಸ್ನೇಹಿತೆಗೆ ಬೀಗ ರಿಪೇರಿ ಮಾಡುವವನನ್ನು ಕರೆಸಿ ಕೀ ಮಾಡಿಸುವಂತೆ ತಿಳಿಸಿದ್ದು, ಅವರುಗಳು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ತಾವೇ ಬೀಗ ರಿಪೇರಿ ಮಾಡುವವನನ್ನು ಕರೆಸಿ ಕೀ ಮಾಡಿಸಿ ಬೀರು ತೆರೆದು ನೋಡಿದಾಗ ಅದರಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದು ಇರಲಿಲ್ಲ.

ದೂರು ನೀಡಿರುವ ಮಹಿಳೆಯು ತನ್ನ ಸ್ನೇಹಿತೆ ಮತ್ತು ಆಕೆಯ ಪತಿಯನ್ನು ವಿಚಾರಿಸಿದಾಗ ಹಣದ ಅವಶ್ಯಕತೆಯಿದ್ದು, ಹಣವನ್ನು ಬಳಸಿಕೊಂಡಿರುವುದಾಗಿ ಹಾಗೂ ಚಿನ್ನಾಭರಣಗಳನ್ನು ಜ್ಯೂವೆಲ್ಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿರುವುದಾಗಿ ತಿಳಿಸಿದ್ದಾರೆ.

ಹಣ ಮತ್ತು ಚಿನ್ನಾಭರಣವನ್ನು ಹಿಂದಿರುಗಿಸದ ಕಾರಣ ಅವರು ದಂಪತಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ದೂರುದಾರರ ಸ್ನೇಹಿತೆ ಮತ್ತು ಆಕೆಯ ಪತಿಯನ್ನು ಬಿಇಎಂಎಲ್‌ ಲೇಔಟ್‌ 5ನೇ ಹಂತದಲ್ಲಿರುವ ಅವರ ವಾಸದ ಮನೆಯಲ್ಲಿ ಬಂಧಿಸಿದ್ದಾರೆ.

ಅವರಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ನಮ ವ್ಯವಹಾರಕ್ಕೆ ಹಣದ ಅವಶ್ಯಕತೆ ಇದ್ದ ಕಾರಣ ಹಣವನ್ನು ಬಳಸಿಕೊಂಡಿದ್ದು, ಚಿನ್ನಾಭರಣಗಳನ್ನು ಹಲಸೂರಿನಲ್ಲಿ ವಾಸವಿರುವ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿರುತ್ತಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸ್ನೇಹಿತನಿಂದ 232 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ತಂಡದವರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಜ್ಯುವೆಲರಿ ಅಂಗಡಿ ಗೋಡೆ ಕೊರೆದು ಕನ್ನ

ಬೆಂಗಳೂರು, ಮೇ 26- ಜ್ಯೂವೆಲರಿ ಹಿಂಭಾಗದ ಗೋಡೆ ಕೊರೆದು ಕಳವು ಮಾಡಿಕೊಂಡು ರಾಜಸ್ಥಾನಕ್ಕೆ ಪರಾರಿಯಾಗಿದ್ದ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 98.39 ಲಕ್ಷ ರೂ. ಮೌಲ್ಯದ ಬೆಳ್ಳಿ ಗಟ್ಟಿ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಯಶವಂತಪುರದ ಗೋಕುಲ 1ನೇ ಹಂತದ ನಿವಾಸಿಯೊಬ್ಬರು ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಜ್ಯೂವೆಲರಿ ಅಂಗಡಿ ಇಟ್ಟುಕೊಂಡಿದ್ದು ಏ.27 ರಂದು ರಾತ್ರಿ ಚಿನ್ನಾಭರಣ ಗಳನ್ನು ಲಾಕರ್‌ನಲ್ಲಿಟ್ಟು ಬೆಳ್ಳಿ ವಸ್ತು ಗಳನ್ನು ಶೋಕೇಸ್‌‍ನಲ್ಲಿಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಹೋಗಿದ್ದರು. ಅಂದು ರಾತ್ರಿ ಜ್ಯೂವೆಲರಿ ಅಂಗಡಿ ಹಿಂಭಾಗದ ಗೋಡೆ ಕೊರೆದು ಒಳಗೆ ನುಗ್ಗಿ ಕೈಗೆ ಸಿಕ್ಕಿದ 70 ಕೆಜಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಲ್ಲದೇ ಅಂಗಡಿಯ ಹಿಂಭಾಗದ ಸೆರಾಮಿಕ್‌್ಸ ಅಂಗಡಿಯ ಶಟರ್‌ರ‍ಸ ಬೀಗ ಒಡೆದು ಲ್ಯಾಪ್‌ಟಾಪ್‌, ಮೊಬೈಲ್‌, ಸ್ಯಾನಿಟರಿ ವಸ್ತುಗಳು ಹಾಗೂ ಹಣ ದೋಚಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಮಾಲೀಕರು ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾಹಿತಿಗಳನ್ನು ಕಲೆಹಾಕಿ ರಾಜಸ್ಥಾನದ ರಾಯಪುರದಲ್ಲಿ ಇಬ್ಬರನ್ನು ನೆಲಮಂಗಲದಲ್ಲಿ ಮತ್ತೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಗಂಗರುದ್ರಯ್ಯ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿದೆ.

RELATED ARTICLES

Latest News