ನಿತ್ಯ ನೀತಿ : ಜನರನ್ನು ಪ್ರೀತಿಸುವುದಕ್ಕಿಂತ ನೆನಪುಗಳನ್ನು ಪ್ರೀತಿಸಬೇಕು, ಏಕೆಂದರೆ ಜನರು ಯಾವಾಗ ಬೇಕಾದರೂ ಬದಲಾಗುತ್ತಾರೆ. ಆದರೆ ನೆನಪುಗಳು ಯಾವತ್ತೂ ಬದಲಾಗುವುದಿಲ್ಲ.
ಪಂಚಾಂಗ : ಬುಧವಾರ, 10-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ/ ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ದಶಮಿ / ನಕ್ಷತ್ರ: ಉ.ಭಾ. / ಯೋಗ: ಆಯುಷಾನ / ಕರಣ: ವಣಿಜ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.46
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಕೆಲಸ ಕಾರ್ಯದಲ್ಲಿ ತಾಳ್ಮೆ ಅಗತ್ಯ. ಆರೋಗ್ಯದ ಬಗ್ಗೆ ತುಸು ಗಮನ ವಹಿಸಿ.
ವೃಷಭ: ಆಸ್ತಿ ವಿಚಾರದಲ್ಲಿ ಗೊಂದಲ, ದೃಢ ನಿರ್ಧಾರದಿಂದ ಭವಿಷ್ಯ ಉತ್ತಮ.
ಮಿಥುನ: ಇಷ್ಟಾರ್ಥ ದೇವರ ದರ್ಶನ. ಕೆಲಸದಲ್ಲಿ ಉತ್ತಮ ಪ್ರಶಂಸೆ.
ಕಟಕ: ಸರ್ಕಾರಿ ಕೆಲಸದವರಿಗೆ ಶುಭ ಸುದ್ದಿ. ಧನಾಗಮನ.
ಸಿಂಹ: ನಿಮ್ಮಿಂದ ಇತರರಿಗೆ ಒಳ್ಳೆಯ ಕೆಲಸ. ನಿಷ್ಠೂರದ ಮಾತುಗಳು ತಪ್ಪವು.
ಕನ್ಯಾ: ಆರೋಗ್ಯದಲ್ಲಿ ಏರುಪೇರು. ಮಕ್ಕಳ ಮಾತುಗಳಿಂದ ನೋವು.
ತುಲಾ: ವ್ಯಾಪಾರದಲ್ಲಿ ಕೊಂಚ ನಷ್ಟ. ಕುಲದೇವರ ದರ್ಶನದಿಂದ ಒಳಿತು.
ವೃಶ್ಚಿಕ: ಬಂಧು-ಮಿತ್ರರಿಂದ ಶುಭ ಸುದ್ದಿ. ಸಣ್ಣ ಉದ್ಯಮದವರಿಗೆ ಲಾಭ.
ಧನುಸ್ಸು: ದೂರದೂರಿಗೆ ಪಯಣ. ಸಾಂಸಾರಿಕ ನೆಮ್ಮದಿ.
ಮಕರ: ಮನೆಯಲ್ಲಿ ಸಣ್ಣಪುಟ್ಟ ಗೊಂದಲ. ಆಸ್ತಿ ಪಾಲುದಾರಿಕೆಯಲ್ಲಿ ಒಳ್ಳೆ ನಿರ್ಧಾರ.
ಕುಂಭ: ಮಾತಿನಿಂದ ಸ್ನೇಹಿತರು ದೂರ. ಬಂಧುಗಳ ಆಗಮನ.
ಮೀನ: ಗುರುಹಿರಿಯರಿಂದ ಸಹಾಯ, ವಿದ್ಯಾರ್ಥಿಗಳಿಗೆ ಅನುಕೂಲ.
