ಬೆಂಗಳೂರು,ಜೂ.10- ಜಿಲೆಟಿನ್ ಕಡ್ಡಿಗಳನ್ನು ರಾತ್ರಿ ವೇಳೆ ಸ್ಫೋಟಿಸುತ್ತಿರುವುದರಿಂದ ಕ್ವಾರಿ ಮಾಲೀಕರು ಸೇರಿದಂತೆ ಐದು ಮಂದಿ ವಿರುದ್ಧ ಆವಲಹಳ್ಳಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಾತ್ರಿ ಸಂದರ್ಭದಲ್ಲಿ ಸ್ಫೋಟಕಗಳನ್ನು ಸ್ಫೋಟಿಸುವಂತಿಲ್ಲ. ಇದು ಕಾನೂನು ಉಲ್ಲಂಘನೆ. ಹಾಗಾಗಿ ಕಾನೂನು ಉಲ್ಲಂಘಿಸಿರುವುದರಿಂದ ಐದು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಲಾಗಿದೆ ಎಂದು ಹಿರಿಯ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ಪೊಲೀಸರು ಪತ್ರ ಬರೆದಿದ್ದ, ಕ್ವಾರಿಯಲ್ಲಿ ಸ್ಫೋಟಿಸಲು ಇವರಿಗೆ ಅನುಮತಿ ನೀಡಲಾಗಿತ್ತೇ, ಸ್ಫೋಟಕ ವಸ್ತುಗಳಾದ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್‌ಗಳನ್ನು ದಾಸ್ತಾನು ಮಾಡಲು ಅವಕಾಶ ನೀಡಲಾಗಿತ್ತೇ ಎಂಬಿತ್ಯಾದಿ ವಿಷಯಗಳ ಬಗ್ಗೆ ವಿವರಣೆ ಕೇಳಿದ್ದಾರೆ.
ನಗರದ ಹೊರವಲಯದ ಕಾಡ ಅಗ್ರಹಾರ ಬಳಿ 50 ಡಿಟೋನೇಟರ್ ಹಾಗೂ 231 ಜಿಲೆಟಿನ್ ಕಡ್ಡಿಗಳು ಬಾಕ್‌್ಸಗಳಲ್ಲಿ ಪತ್ತೆಯಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದಾವಿಸಿ ಅವುಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಗ್ರಾನೈಟ್ ಕಂಪನಿ ಮಾಲೀಕರು ಹಾಗೂ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ರಾತ್ರಿ ವೇಳೆ ಕಲ್ಲುಸ್ಪೋಟಕ್ಕೆ ಇವುಗಳನ್ನು ತಂದು ಸಿದ್ಧತೆ ನಡೆಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಹಾಗಾಗಿ ಐದು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
