Homeಬೆಂಗಳೂರುಉದ್ಯಮಿ ಬೆದರಿಸಿ ಹಣ ಸುಲಿಗೆ ಪ್ರಕರಣ : ಸಿಐಡಿ ಇನ್ಸ್‌ಪೆಕ್ಟರ್ ಸಹಚರರಿಗಾಗಿ ಶೋಧ

ಉದ್ಯಮಿ ಬೆದರಿಸಿ ಹಣ ಸುಲಿಗೆ ಪ್ರಕರಣ : ಸಿಐಡಿ ಇನ್ಸ್‌ಪೆಕ್ಟರ್ ಸಹಚರರಿಗಾಗಿ ಶೋಧ

ಬೆಂಗಳೂರು,ಜೂ.20- ಕೇರಳದ ಇಬ್ಬರು ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಮಡಿವಾಳ ಉಪವಿಭಾಗದ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇನ್ಸ್‌ಪೆಕ್ಟರ್ ಮಹೇಶ್‌ ಕನಕಗಿರಿ ಸೇರಿದಂತೆ ಇದುವರೆಗೂ ಮೂವರನ್ನು ಬಂಧಿಸಿ ಅವರಿಂದ 14 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.

ಇನ್ನುಳಿದ 6 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್‌ ಕನಕಗಿರಿ ಹಾಗೂ ಅವರ ಬಾತೀದಾರರಾದ ಉಪೇಂದ್ರರೆಡ್ಡಿ ಮತ್ತು ವಸಂತ್‌ಕುಮಾರ್‌ ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ಜೂ.15 ರಂದು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಸಂಬಂಧ ಕೇರಳದಿಂದ ಉದ್ಯಮಿಗಳಾದ ಜನೀಶ್‌ ಬಾಬು ಹಾಗೂ ನವೀನ್‌ ಬಂದು ಮಡಿವಾಳದ ಲಾಡ್‌್ಜವೊಂದರಲ್ಲಿ ಉಳಿದುಕೊಂಡಿದ್ದರು.

ಇನ್ಸ್‌ಪೆಕ್ಟರ್ ಮಹೇಶ್‌ ಅವರ ತಂಡ ಈ ಲಾಡ್‌್ಜ ಮೇಲೆ ದಾಳಿ ಮಾಡಿ ನೀವು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದೀರ, ನಿಮನ್ನು ಬಂಧಿಸುತ್ತೇವೆಂದು ಹೆದರಿಸಿ 20 ಲಕ್ಷ ಹಣ ಸುಲಿಗೆ ಮಾಡಿಕೊಂಡು ಹೋಗಿತ್ತು.
ಈ ಬಗ್ಗೆ ಉದ್ಯಮಿಗಳು ಮಡಿವಾಳ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಮಡಿವಾಳ ವಿಭಾಗದ ಎಸಿಪಿ ವಾಸುದೇವ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಇನ್ಸ್‌ಪೆಕ್ಟರ್ ಅವರ ಸರ್ಕಾರಿ ಜೀಪ್‌ನ ನಂಬರ್‌ ಸೆರೆಯಾಗಿ ಅವರ ಕಳ್ಳಾಟ ಬಯಲಾಗಿದೆ.

ಆ ನಂಬರ್‌ ಆಧರಿಸಿ ಮೊದಲು ಜೀಪನ್ನು ವಶಕ್ಕೆ ಪಡೆದು ನಂತರ ಮಹೇಶ್‌ ಕನಕಗಿರಿಯನ್ನು ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್‌‍ ಇಲಾಖೆ ತಲೆ ತಗ್ಗಿಸುವಂತಾಗಿದೆ. ರಕ್ಷಕರೇ ಭಕ್ಷಕರಾದರೆ ನಾಗರಿಕರು ಪೊಲೀಸರನ್ನು ನಂಬುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ.

RELATED ARTICLES

Latest News