Homeರಾಷ್ಟ್ರೀಯಸ್ವದೇಶಿ ನಿರ್ಮಿತ ಮೂರು ನೌಕಾಪಡೆಯ ಹಡಗುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಸ್ವದೇಶಿ ನಿರ್ಮಿತ ಮೂರು ನೌಕಾಪಡೆಯ ಹಡಗುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಕೋಲ್ಕತ್ತಾ, ಜೂ.21- ಪ್ರಧಾನಿ ಮೋದಿ ಅವರು ಇಂದು ಕೋಲ್ಕತ್ತಾದ ನಲ್ಲಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ ಭಾರತೀಯ ನೌಕಾಪಡೆಯ ಮೂರು ಯುದ್ಧನೌಕೆಗಳನ್ನು ಅಧಿಕೃತವಾಗಿ ಸೇವೆಗೆ ಸಮರ್ಪಿಸಿದರು. ಸೇವೆಗೆ ಸೇರ್ಪಡೆಯಾದ ಮೂರು ಪ್ರಮುಖ ನೌಕಾ ವೇದಿಕೆಗಳೆಂದರೆ, ಸ್ಟೆಲ್ತ್‌ ಫ್ರಿಗೇಟ್‌ ಐಎನ್‌ಎಸ್‌‍ ದುನಗಿರಿ, , ಸಮೀಕ್ಷಾ ಹಡಗು ಐಎನ್‌‍ಎಸ್‌‍ ಸಂಶೋಧಕ್‌ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯದ ಆಳವಿಲ್ಲದ ಜಲಪ್ರದೇಶದ ಯುದ್ಧನೌಕೆ ಐಎನ್‌‍ಎಸ್‌‍ ಅಗ್ರೇ.

ಈ ಮೂರು ಹಡಗುಗಳು ಸಮುದ್ರ ಯುದ್ಧ, ಜಲಮಾಪನ ಸಮೀಕ್ಷೆ (ಹೈಡ್ರೋಗ್ರಾಫಿಕ್‌ ಸರ್ವೇ) ಹಾಗೂ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಂತಹ ಪ್ರಮುಖ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಪ್ರತಿನಿಧಿಸುತ್ತವೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್‌.ಎನ್‌‍.ರವಿ, ಮುಖ್ಯಮಂತ್ರಿ ಸುವೆಂದು ಅಧಿಕಾರಿ ಹಾಗೂ ನೌಕಾ ಪಡೆ ಮುಖ್ಯಸ್ಥ ಅಡಿರಲ್‌ ಕೃಷ್ಣ ಸ್ವಾಮಿನಾಥನ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಹಡಗುಗಳನ್ನು ಭಾರತೀಯ ನೌಕಾಪಡೆಯ ವಿನ್ಯಾಸಗೊಳಿಸಿದ್ದು, ಕೋಲ್ಕತ್ತಾ ಮೂಲದ ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಎಂಜಿನಿಯರ್ಸ್‌ ಲಿಮಿಟೆಡ್‌ ಸಂಸ್ಥೆ ನಿರ್ಮಿಸಿದೆ. ಅಧಿಕಾರಿಗಳ ಪ್ರಕಾರ, ಈ ಹಡಗುಗಳಲ್ಲಿ 75 ಪ್ರತಿಶತಕ್ಕಿಂತ ಹೆಚ್ಚಿನ ಸ್ವದೇಶಿ ಅಂಶಗಳಿವೆ. ನಿರ್ಮಾಣ ಕಾರ್ಯದಲ್ಲಿ 200ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ಭಾರತೀಯ ಕೈಗಾರಿಕೆಗಳ ವ್ಯಾಪಕ ಪಾಲ್ಗೊಳ್ಳುವಿಕೆ ಇದ್ದು, ಇದು ದೇಶದ ಆತ್ಮನಿರ್ಭರ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.

RELATED ARTICLES
spot_img

Latest News