ಲಂಡನ್, ಜೂ.21- ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸೋಮವಾರ ರಾಜೀನಾಮೆ ನೀಡುವ ಸಾಧ್ಯತೆಯಿದೆ. ತಮ ನಿರ್ಗಮನದ ಸಮಯವನ್ನು ಘೋಷಿಸಲಿದ್ದಾರೆ ಎಂದು ದಿ ಅಬ್ಸರ್‌ವರ್ ಪತ್ರಿಕೆ ವರದಿ ಮಾಡಿದೆ. ಆದರೆ, ಇದು ಇನ್ನೂ ಅಧಿಕೃತವಾಗಿ ಖಚಿತಪಟ್ಟಿಲ್ಲ. ಹಿರಿಯ ಲೇಬರ್ ಪಕ್ಷದ ನಾಯಕರು, ಸಲಹೆಗಾರರು ಮತ್ತು ದಾನಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಸ್ಟಾರ್ಮರ್ ಅವರು ತಮ್ಮ ಸ್ಥಾನವು ಇನ್ನು ಮುಂದೆ ಸಮರ್ಥನೀಯವಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಅವರ ಪ್ರತಿಸ್ಪರ್ಧಿ ಆ್ಯಂಡಿ ಬರ್ನ್‌ಹ್ಯಾಮ್ ಸಂಸತ್ ಸ್ಥಾನವನ್ನು ಗೆದ್ದಿರುವುದು ಕೀರ್ ಸ್ಟಾರ್ಮರ್ ಅವರ ನಾಯಕತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಲೇಬರ್ ಪಕ್ಷದೊಳಗೆ ನಾಯಕತ್ವ ಬದಲಾವಣೆಯ ಕೂಗು ಹೆಚ್ಚಾಗಿದೆ. ಲೇಬರ್ ಪಾರ್ಟಿಯ ಸುಮಾರು 100-ಕ್ಕೂ ಹೆಚ್ಚು ಸಂಸದರು (ಒಟ್ಟು ಸಂಸದರ ಕಾಲು ಭಾಗ) ಸ್ಟಾರ್ಮರ್ ಅವರು ತಮ ಸ್ಥಾನದಿಂದ ಕೆಳಗಿಳಿಯಬೇಕು ಅಥವಾ ನಿರ್ಗಮನದ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪತ್ರಿಕಾ ವರದಿಗಳು ರಾಜೀನಾಮೆಯ ಬಗ್ಗೆ ಮಾತನಾಡುತ್ತಿದ್ದರೂ, ಸರ್ಕಾರಿ ಮೂಲಗಳ ಪ್ರಕಾರ ಪ್ರಧಾನಿಯವರು ತಮ ಕರ್ತವ್ಯದ ಮೇಲೆ ಗಮನ ಹರಿಸಿದ್ದಾರೆ. ಶುಕ್ರವಾರವಷ್ಟೇ ಕೀರ್ ಸ್ಟಾರ್ಮರ್ ಅವರು ತಮ ನಾಯಕತ್ವದ ಮೇಲಿನ ಯಾವುದೇ ಸವಾಲನ್ನು ಎದುರಿಸುವುದಾಗಿ ಮತ್ತು ಹುದ್ದೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ, ಅವರ ಜನಪ್ರಿಯತೆ ಕುಸಿದಿರುವುದು ಮತ್ತು ನಾಯಕತ್ವದ ಮೇಲಿನ ಒತ್ತಡಗಳಿಂದಾಗಿ ರಾಜೀನಾಮೆಯ ಊಹಾಪೋಹಗಳು ಹರಿದಾಡುತ್ತಿವೆಯಾದರೂ, ಪ್ರಧಾನಿ ಕಚೇರಿಯಿಂದ (10) ಈವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಸರ್ಕಾರದ ಮೂಲಗಳು ಸ್ಟಾರ್ಮರ್ ಅವರು ತಮ ಕೆಲಸದ ಮೇಲೆ ಗಮನಹರಿಸಿದ್ದಾರೆ ಮತ್ತು ಆಡಳಿತವನ್ನು ಮುಂದುವರಿಸಲು ಬದ್ಧರಾಗಿದ್ದಾರೆ ಎಂದು ಹೇಳಿವೆ.
ಸ್ಟಾರ್ಮರ್ ಅವರು ಶುಕ್ರವಾರದಂದು ತಮ ನಾಯಕತ್ವದ ವಿರುದ್ಧದ ಯಾವುದೇ ಸವಾಲನ್ನು ಎದುರಿಸುವುದಾಗಿ ಮತ್ತು ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ತಡೆಯುವಂತೆ ಕರೆ ನೀಡಿದ್ದರು. ಸ್ಟಾರ್ಮರ್ ಅವರ ಜನಪ್ರಿಯತೆ ಕುಸಿದಿರುವುದು, ಹಲವಾರು ಹಗರಣಗಳು ಮತ್ತು ನೀತಿ ಬದಲಾವಣೆಗಳ ವಿರುದ್ಧದ ಸಾರ್ವಜನಿಕ ಅಸಮಾಧಾನ ಪ್ರಮುಖ ಕಾರಣಗಳಾಗಿವೆ. ಅಲ್ಲದೆ, ಅವರ ಪ್ರತಿಸ್ಪರ್ಧಿ ಆ್ಯಂಡಿ ಬರ್ನ್‌ಹ್ಯಾಮ್ ಅವರು ಸಂಸತ್ತಿಗೆ ಆಯ್ಕೆಯಾಗಿದ್ದು, ನಾಯಕತ್ವದ ಸವಾಲಿಗೆ ದಾರಿ ಮಾಡಿಕೊಟ್ಟಂತಾಗಿದೆ. ಸುಮಾರು 100ಕ್ಕೂ ಹೆಚ್ಚು ಲೇಬರ್ ಪಕ್ಷದ ಸಂಸದರು ಸ್ಟಾರ್ಮರ್ ಅವರು ರಾಜೀನಾಮೆ ನೀಡಬೇಕು ಅಥವಾ ನಿರ್ಗಮನದ ಸಮಯವನ್ನು ನಿಗದಿಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸೋಮವಾರದ ಬೆಳವಣಿಗೆಗಳನ್ನುಕಾದು ನೋಡಬೇಕಾಗಿದೆ.
