Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-07-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-07-2026)

Today's Horoscope

ನಿತ್ಯ ನೀತಿ : ಬದುಕಿನ ಹೋರಾಟದಲ್ಲಿ ಯಾವಾಗ ನೀನು ಕುಸಿದು ಹೋಗುವೆಯೋ ಆಗ ಧೈರ್ಯ ನಿನಗೆ ಸಹಾಯ ಮಾಡುತ್ತದೆ. ಯಾವಾಗ ನಿನ್ನ ಸುತ್ತಮುತ್ತ ಇರುವವರು ಮುಖ ತಿರುಗಿಸಿ ಹೋಗುವರೋ, ಆಗ ಪರಮಾತ ನಿನ್ನ ಜೊತೆ ಇದ್ದೇ ಇರುತ್ತಾನೆ..!!

ಪಂಚಾಂಗ : ಸೋಮವಾರ, 06-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಪೂ.ಭಾ. / ಯೋಗ: ಸೌಭಾಗ್ಯ / ಕರಣ: ವಿಷ್ಟಿ
ಸೂರ್ಯೋದಯ – ಬೆ.5.59
ಸೂರ್ಯಾಸ್ತ – 06.51
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ
ಮೇಷ: ನೀವು ನಿರೀಕ್ಷಿಸಿದ ಉದ್ಯಮದ ಹೊರತಾಗಿ ಬೇರೆ ಕಡೆ ಅವಕಾಶ ದೊರೆಯಲಿದೆ.
ವೃಷಭ: ವಂಶಪಾರಂಪರ್ಯವಾಗಿ ಬಂದ ವ್ಯಾಪಾರ- ವ್ಯವಹಾರಗಳು ಮತ್ತಷ್ಟು ಪ್ರಗತಿ ಕಾಣಲಿವೆ.
ಮಿಥುನ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ವ್ಯಯವಾಗಲಿದೆ. ದೂರ ಪ್ರಯಾಣ ಮಾಡುವಿರಿ.

ಕಟಕ: ವ್ಯವಹಾರಕ್ಕೆ ಸಂಬಂ ಸಿದಂತೆ ಹಿರಿಯರು ಮತ್ತು ಮಡದಿಯಲ್ಲಿದ್ದ ನಕಾರಾತ್ಮಕ ಪ್ರತಿಕ್ರಿಯೆ ಬದಲಾಗಲಿದೆ.
ಸಿಂಹ: ಒಡಹುಟ್ಟಿದವರ ಸಹಾಯ-ಸಹಕಾರದಿಂದ ಮಾನಸಿಕ ನೆಮ್ಮದಿ ಹಾಗೂ ಸಂಸಾರದಲ್ಲಿ ಸಮ ತೋಲನ ಪಡೆಯುವಿರಿ.
ಕನ್ಯಾ: ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ.

ತುಲಾ: ಇಂದಿನ ನಿಮ್ಮ ಶ್ರಮ ಮುಂದಿನ ದಿನಕ್ಕೆ ಅಡಿಪಾಯವಾಗಲಿದೆ.
ವೃಶ್ಚಿಕ: ಸಂತೋಷಕೂಟಗಳಲ್ಲಿ ಭಾಗವಹಿಸುವಾಗ ಗೌರವ ಕಾಪಾಡಿಕೊಳ್ಳುವ ಕಡೆ ಗಮನವಿರಲಿ.
ಧನುಸ್ಸು: ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ.

ಮಕರ: ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನ.
ಕುಂಭ: ತಂದೆ-ತಾಯಿಯ ಆರೋಗ್ಯ ಸುಧಾರಿಸು ವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.
ಮೀನ: ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆ ಯುತ್ತವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.

RELATED ARTICLES
spot_img

Latest News