Homeರಾಷ್ಟ್ರೀಯಶೇ 98.47ರಷ್ಟು ₹2,000 ನೋಟುಗಳನ್ನು ವಾಪಸ್ ಪಡೆಯಲಾಗಿದೆ : ಆರ್‌ಬಿಐ

ಶೇ 98.47ರಷ್ಟು ₹2,000 ನೋಟುಗಳನ್ನು ವಾಪಸ್ ಪಡೆಯಲಾಗಿದೆ : ಆರ್‌ಬಿಐ

RBI Says 98.47 Per Cent of ₹2,000 Banknotes Have Been Returned

ನವದೆಹಲಿ, ಜು.9- ದೇಶದ ಅರ್ಥ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ 2ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳು ಇನ್ನೂ ಕಾನೂನುಬದ್ಧ ಚಲಾವಣೆಯಲ್ಲಿವೆ. ಅವುಗಳನ್ನು ಅಮಾನ್ಯ ಎಂದು ಘೋಷಿಸಲಾಗಿಲ್ಲ ಎಂದು ಸ್ಪಷ್ಟ ಪಡಿಸಿರುವ ಆರ್‌ ಬಿ ಐ, ತಮ ಬಳಿ ಇರುವ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

ಆರ್‌ ಬಿ ಐ ಮಾಹಿತಿ ಪ್ರಕಾರ, 2023ರ ಮೇ 19ರಂದು 2000 ರೂಪಾಯಿ ಮುಖ ಬೆಲೆಯ ನೋಟುಗಳ ಹಿಂತೆಗೆತವನ್ನು ಘೋಷಣೆ ಮಾಡಲಾಗಿತ್ತು. ಆಗ ಚಲಾವಣೆಯಲ್ಲಿ ಸುಮಾರು 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಿದ್ದವು. 2026ರ ಏಪ್ರಿಲ್‌ 30ರ ವೇಳೆಗೆ ಈ ಮೌಲ್ಯ 5,451 ಕೋಟಿಗೆ ರೂಪಾಯಿಗೆ ಇಳಿದಿದೆ. ಒಟ್ಟು ಚಲಾವಣೆಯಲ್ಲಿದ್ದ ನೋಟುಗಳಲ್ಲಿ ಶೇ.98.47 ನೋಟುಗಳು ಈಗಾಗಲೇ ಮರಳಿವೆ ಎಂದು ಆರ್‌ ಬಿ ಐ ತಿಳಿಸಿದೆ.

ಆರ್‌ ಬಿ ಐ ಪ್ರಕಟಣೆಯ ಪ್ರಕಾರ, 2000 ರೂಪಾಯಿ ನೋಟುಗಳು ಇನ್ನೂ ಕಾನೂನುಬದ್ಧ ಚಲಾವಣಾ ಹಣವಾಗಿವೆ. ಹೀಗಾಗಿ, ಇಂತಹ ನೋಟುಗಳನ್ನು ಹೊಂದಿರುವವರು ಅವನ್ನು ಬಳಸುವಂತೆಯೇ, ಆರ್‌ ಬಿ ಐ ಸೂಚಿಸಿರುವ ವಿಧಾನಗಳ ಮೂಲಕ ವಿನಿಮಯ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದೆ.

ಸಾರ್ವಜನಿಕರು ತಮ ಬಳಿ ಇರುವ ನೋಟುಗಳನ್ನು ಆರ್‌ ಬಿ ಐ ನ 19 ಇಶ್ಯೂ ಕಚೇರಿಗಳಿಗೆ ಕೊಂಡೊಯ್ದು ವಿನಿಮಯ ಮಾಡಿಸಿಕೊಳ್ಳಬಹುದು. ಇಂಡಿಯಾ ಪೋಸ್ಟ್‌ ಮೂಲಕವೂ ಕಳುಹಿಸಬಹುದು. ದೇಶದ ಯಾವುದೇ ಅಂಚೆ ಕಚೇರಿಯಿಂದ ಯಾವುದೇ ಆರ್‌ ಬಿ ಐ ಇಶ್ಯೂ ಕಚೇರಿಗೆ ಕಳುಹಿಸಿ, ಸಂಬಂಧಿತ ಬ್ಯಾಂಕ್‌ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಸಾರ್ವಜನಿಕರ ಬಳಿಯಲ್ಲಿ ಇನ್ನೂ 2000 ರೂಪಾಯಿ ಮುಖಬೆಲೆಯ ನೋಟುಗಳಿದ್ದರೆ, ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಖಾತೆಗೆ ಜಮಾ ಮಾಡಿಸಲು ಅವಕಾಶ ಮುಂದುವರಿದಿದೆ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

RELATED ARTICLES

Latest News