ಬೆಂಗಳೂರು,ಅ.9- ಸಿಮ್ ಈವೆಂಟ್ಸ್ ಆಯೋಜನೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಹಯೋಗದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಮ್ಮು ಖದಲ್ಲಿ ಇಂದು ಸಂಜೆ 5.30ಕ್ಕೆ ಸಂಗೀತ ಮತ್ತು ಅಧ್ಯಾತ ವಿಶೇಷ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದೆ.
ನಗರದ ಯಡಿಯೂರು ಕೆರೆ ಮುಂಭಾಗದಲ್ಲಿರುವ ಪುನೀತ್ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.ವಿಧಾನಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಅವರು ಅವಧೂತ ಶ್ರೀ ವಿನಯ್ ಗುರೂಜಿ ಕುರಿತ ಭಕ್ತಿಗೀತೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಡಾ.ಶಮಿತಾ ಮಲ್ನಾಡ್ ಅವರ ಜನನಿ ವಿಶೇಷ ಮಹಿಳಾ ಬ್ಯಾಂಡ್ ತಂಡವು ಭಕ್ತಿ, ತತ್ವ, ಜನಪದ, ವಚನ, ಚಿತ್ರಗೀತೆಗಳ ಗಾಯನವನ್ನು ಪ್ರಸ್ತುತಪಡಿಸಲಿದೆ.ಡಾ.ಎಸ್.ದಯಾನಂದ್, ನೀಲಕಂಠ ಆರ್.ಗೌಡ, ಡಾ.ಡಿ.ಮುನಿರಾಜು, ವಿಶ್ವನಾಥ್ ಪಿ.ಹಿರೇಮಠ್, ಎನ್.ಆರ್.ರಮೇಶ್, ಭಾ.ಮಾ.ಹರೀಶ್ ಮತ್ತು ಎಂ.ಎಸ್.ಮಣಿ ಹೆಗ್ಡೆ ಅವರು ವಿಶೇಷ ಆಹ್ವಾನಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಾ.ಶಮಿತಾ ಮಲ್ನಾಡ್ ಅವರ ಪರಿಕಲ್ಪನೆಯಲ್ಲಿ ಕಾರ್ಯಕ್ರಮ ಜರುಗಲಿದೆ.

