Homeಅಂತಾರಾಷ್ಟ್ರೀಯ174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಮಚ್ಚರ್‌ಗೆ ಇಸ್ರೇಲ್‌ ಶೌರ್ಯ ಪ್ರಶಸ್ತಿ

174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಮಚ್ಚರ್‌ಗೆ ಇಸ್ರೇಲ್‌ ಶೌರ್ಯ ಪ್ರಶಸ್ತಿ

ಜೆರುಸಲೇಂ, ಅ.9- ಫ್ಲೈ ದುಬೈ ವಿಮಾನದ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚರ್‌ ಅವರಿಗೆ ಇಸ್ರೇಲ್‌ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಇಸ್ರೇಲ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಈ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವುದಾಗಿ ಇಸ್ರೇಲ್‌ ಅಧ್ಯಕ್ಷ ಐಸಾಕ್‌ ಹೆರ್ಜಾಗ್‌ ಘೋಷಿಸಿದ್ದಾರೆ.

ಫ್ಲೈ ದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಸಹ-ಪೈಲಟ್‌ ನಡೆಸಿದ ದಾಳಿಯನ್ನು ಎದುರಿಸಿ, ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಅವರು 174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಪ್ರಾಣ ಉಳಿಸಿದ್ದರು. ವಿಮಾನದಲ್ಲಿದ್ದಾಗ ಓಮನ್‌ ಪ್ರಜೆಯಾದ ಸಹ-ಪೈಲಟ್‌ ಹಮಮ್‌ ಅಲ್‌-ಹಮಾಮಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದ. ಈತ ಕ್ರ್ಯಾಶ್‌ ಆಕ್ಸ್‌ (ವಿಮಾನದಲ್ಲಿನ ತುರ್ತು ಕೊಡಲಿ) ಬಳಸಿ ಹಲ್ಲೆ ನಡೆಸಿದ ಪರಿಣಾಮ ಸ್ಮಿತ್‌ ಮಚ್ಚರ್‌ ಗಂಭೀರವಾಗಿ ಗಾಯಗೊಂಡಿದ್ದರು.

ತೀವ್ರ ಗಾಯಗೊಂಡು ವಿಪರೀತ ರಕ್ತಸ್ರಾವವಾಗುತ್ತಿದ್ದರೂ ಭಾರತೀಯ ಪೈಲಟ್‌ ಕಾಕ್‌ಪಿಟ್‌ನ ಬಾಗಿಲು ತೆರೆದಿದ್ದರು. ಇದರಿಂದ ಇಸ್ರೇಲಿ ಪ್ರಯಾಣಿಕರು ಕಾಕ್‌ಪಿಟ್‌ಗೆ ಪ್ರವೇಶಿಸಿ, ಹಲ್ಲೆ ನಡೆಸಿದ ವ್ಯಕ್ತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗಿತ್ತು.

RELATED ARTICLES
spot_img

Latest News