Homeರಾಜ್ಯಅಂಬಾರಿ ಹೊರುವ ರೇಸ್‌‍ನಲ್ಲಿ 4 ಆನೆಗಳು : ಇನ್ನೆರಡು ದಿನಗಳಲ್ಲಿ ಅಂತಿಮ ಆಯ್ಕೆ

ಅಂಬಾರಿ ಹೊರುವ ರೇಸ್‌‍ನಲ್ಲಿ 4 ಆನೆಗಳು : ಇನ್ನೆರಡು ದಿನಗಳಲ್ಲಿ ಅಂತಿಮ ಆಯ್ಕೆ

ಮೈಸೂರು,ಅ. 9- ದಸರಾ ಗಜಪಡೆಯ ಎರಡನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿ ನಡೆದಿದ್ದು, ಯಾವುದೇ ಆನೆಗಳು ಗುಂಡಿನ ಸದ್ದಿಗೆ ಬೆದರಿಲ್ಲ. ಎಲ್ಲ ಆನೆಗಳು ಸದ್ದಿಗೆ ಹೊಂದಿಕೊಂಡಿದ್ದು, ಅವುಗಳ ಆರೋಗ್ಯವೂ ಉತ್ತಮವಾಗಿದೆ ಎಂದು ಡಿಸಿಎಫ್‌ ಡಾ. ಪ್ರಭುಗೌಡ ತಿಳಿಸಿದ್ದಾರೆ.

ತಾಲೀಮಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬಾರಿ ಹೊರುವ ಆನೆಯ ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.ಮಹೇಂದ್ರ ಆನೆ ಭಾರ ಹೊರಲು ಹಿಂದೇಟು ಹಾಕುತ್ತಿದೆ. ಈ ಹಿಂದೆ ನಾಲ್ಕು ಬಾರಿ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸಿದ್ದರೂ, ಸದ್ಯ ಭಾರ ಹೊರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಹೇಂದ್ರ ಆನೆಯನ್ನು ಅಂಬಾರಿ ಹೊರಲು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಧನಂಜಯ, ಪ್ರಶಾಂತ, ಸುಗ್ರೀವ ಮತ್ತು ಏಕಲವ್ಯ ಆನೆಗಳು ಅಂಬಾರಿ ಹೊರುವ ರೇಸ್‌‍ನಲ್ಲಿವೆ. ಈ ನಾಲ್ಕು ಆನೆಗಳ ಪೈಕಿ ಒಂದನ್ನು ಆಯ್ಕೆ ಮಾಡಿ, ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊರಲು ಅಂತಿಮಗೊಳಿಸಲಾಗುವುದು. ಇನ್ನೆರಡು ದಿನಗಳಲ್ಲಿ ಆನೆಯ ಹೆಸರನ್ನು ಪ್ರಕಟಿಸಲಾಗುವುದು ಎಂದು ಡಾ. ಪ್ರಭುಗೌಡ ತಿಳಿಸಿದರು.

RELATED ARTICLES
spot_img

Latest News