Homeಕ್ರೀಡಾ ಸುದ್ದಿಅರ್ಜೆಂಟೀನಾ ವಿರುದ್ಧ ಸೋಲಿನ ಬಳಿಕ ತೀರ್ಪುಗಾರರ ಮೇಲೆ ಈಜಿಪ್ಟ್ ಫುಟ್ಬಾಲ್‌ ಸಂಸ್ಥೆ ಆಕ್ರೋಶ

ಅರ್ಜೆಂಟೀನಾ ವಿರುದ್ಧ ಸೋಲಿನ ಬಳಿಕ ತೀರ್ಪುಗಾರರ ಮೇಲೆ ಈಜಿಪ್ಟ್ ಫುಟ್ಬಾಲ್‌ ಸಂಸ್ಥೆ ಆಕ್ರೋಶ

ಅಟ್ಲಾಂಟಾ,ಜು. 9- ಅರ್ಜೆಂಟೀನಾ ವಿರುದ್ಧ 3-2 ಗೋಲುಗಳಿಂದ ಸೋತ ಬಳಿಕ ತೀರ್ಪುಗಾರರ ಕಾರ್ಯ ವೈಖರಿಯ ವಿರುದ್ಧ ಈಜಿಪ್ಟ್ ಫುಟ್‌ಬಾಲ್‌‍ ಅಸೋಸಿಯೇಷನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈಜಿಪ್ಟ್ ತಂಡದ ಕೋಚ್‌ ನ್ಯೂಸಾಂ ಹಸನ್‌ ಹಾಗೂ ಹಲವು ಆಟಗಾರರು ಪಂದ್ಯ ಮುಗಿದ ಬಳಿಕ ತೀರ್ಪುಗಾರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಂಡ ಈಜಿಪ್ಟ್ 2-0 ಮುನ್ನಡೆ ಸಾಧಿಸಿದರೂ, ಅರ್ಜೆಂಟೀನಾ ಕೇವಲ 13 ನಿಮಿಷಗಳಲ್ಲಿ ಸತತ ಮೂರು ಗೋಲುಗಳನ್ನು ಗಳಿಸಿ ಇತಿಹಾಸನಂತೆ ರೋಚಕ ಜಯ ದಾಖಲಿಸಿತು.

ಈಜಿಪ್‌್ಟ ರಾಷ್ಟ್ರೀಯತಂಡದ ಹಕ್ಕುಗಳು ಮತ್ತು ಹಿತಾಸಕ್ತಿ ಗಳನ್ನು ರಕ್ಷಿಸು ವುದು ನಮ ಜವಾಬ್ದಾರಿ. ಇದನ್ನು ನಿರ್ಲಕ್ಷಿಸಲು ಅಥವಾ ಸಣ್ಣ ವಿಷಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಈಜಿಪ್ಟ್ ಫುಟ್ಬಾಲ್‌ ಅಸೋಸಿಯೇಷನ್‌ ತಿಳಿಸಿದೆೆ.

ಪಂದ್ಯದ 58ನೇ ನಿಮಿಷದಲ್ಲಿ ಈಜಿಪ್ಟ್ ಎರಡನೇ ಗೋಲು ದಾಖಲಿಸಿದಂತೆ ಕಂಡುಬಂದಿದೆ. ಆದರೆ, ವಿಡಿಯೋ ಸಹಾಯಕ ತೀರ್ಪುಗಾರ ಪರಿಶೀಲನೆಯ ಬಳಿಕ ಮಾರ್ವಾನ್‌ ಅಟ್ಟಿಯಾ ಅವರು ಅರ್ಜೆಂಟೀನಾದ ರಕ್ಷಣಾ ಆಟಗಾರ ಲಿಸಾಂಡ್ರೊ ಮಾರ್ಟಿನೆಜ್‌ ವಿರುದ್ಧ ಫೌಲ್‌ ಎಸಗಿದ್ದಾರೆ ಎಂದು ತೀರ್ಮಾನಿಸಿ ಗೋಲನ್ನು ರದ್ದುಗೊಳಿಸಲಾಯಿತು.

ವ್ಯವಸ್ಥೆ ಸಮರ್ಪಕವಾಗಿ ಬಳಸದೇ ತಪ್ಪು ನಿರ್ಧಾರ ಕೈಗೊಳ್ಳಲಾಗಿದೆ ಇದು ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದ ಹಲವು ನಿರ್ಧಾರಗಳು ನ್ಯಾಯಸಮತತೆ ಮತ್ತು ಏಕರೂಪತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟುಹಾಕಿವೆ ಎಂದು ಐಎಫ್‌ಎ ಆರೋಪಿಸಿದೆ. ಆದರೆ 67ನೇ ನಿಮಿಷದಲ್ಲಿ ಮೊಸ್ತಫಾ ಝಿಕೊ ಮತ್ತೊಂದು ಗೋಲು ಗಳಿಸಿ ಈಜಿಪ್‌್ಟಗೆ 2-0 ಮುನ್ನಡೆ ನೀಡಿದ್ದರು.

ಆದರೆ 79ನೇ ನಿಮಿಷದಲ್ಲಿ ಲಿಯೋನೆಲ್‌ ಮೆಸ್ಸಿನೀಡಿದ ಅಸಿಸ್ಟ್‌ನಿಂದ ಕ್ರಿಸ್ಟಿಯನ್‌ ರೊಮೆರೊ ಮೊದಲ ಗೋಲು ಗಳಿಸಿದ ಬಳಿಕ ಪಂದ್ಯದ ಚಿತ್ರಣವೇ ಬದಲಾಗಿತ್ತು. ನಂತರ ಅರ್ಜೆಂಟೀನಾ ಸತತ ಮೂರು ಗೋಲುಗಳನ್ನು ದಾಖಲಿಸಿ ಜಯ ಸಾಧಿಸಿತು.

ಇಂಜುರಿ ವೇಳೆಯಲ್ಲಿ ಅರ್ಜೆಂಟೀ ನಾದ ನಿರ್ಣಾಯಕ ಗೋಲಿನ ಬಳಿಕ ಈಜಿಪ್ಟ್ ಕೋಚ್‌ ನ್ಯೂಸಾಂ ಹಸನ್‌ ಅವರ ವರ್ಣಭೇದದ ನಿಂದನೆ ಸೂಚಿಸುವಂತೆ ತಮ ಕೈಗಳಿಂದ ಎಕ್ಸ್‌‍ ಚಿಹ್ನೆಯನ್ನು ಪ್ರದರ್ಶಿಸಿದರು. ಬಳಿಕ ಮಾತನಾಡಿದ ಅವರು, ಫುಟ್‌ಬಾಲ್‌‍ ವ್ಯವಸ್ಥೆಯು ಅರ್ಜೆಂಟೀನಾ ಹಾಗೂ ಮೆಸ್ಸಿಗೆ ಅನುಕೂಲವಾಗುವಂತೆ ವರ್ತಿಸಿದೆ ಎಂದು ಆರೋಪಿಸಿದರು.

ಪಂದ್ಯದ ಅಂತಿಮ ಕ್ಷಣಗಳಲ್ಲಿ ಈಜಿಪ್ಟ್ ಗೋಲ್ಕೀಪಿಂಗ್‌ ಕೋಚ್‌ ಸಾಫಾನ್‌ ಎಲ್ಸಾಘಿರ್‌ ಅವರಿಗೆ ಕೆಂಪು ಕಾರ್ಡ್‌ ತೋರಿಸಲಾಗಿದೆ. ಜೊತೆಗೆ ಈಜಿಪ್ಟ್ ತಂಡ ಹಲವು ಆಟಗಾರರಿಗೆ ಹಳದಿ ಕಾರ್ಡ್‌ಗಳನ್ನೂ ನೀಡಲಾಯಿತು.

ಈಜಿಪ್ಟ್ ತಂಡದ ಆಟಗಾರರು, ತರಬೇತುದಾರರು ಮತ್ತು ಅಭಿಮಾನಿಗಳ ನಿರಾಸೆಯನ್ನು ವ್ಯಕ್ತಪಡಿಸಿರುವ ಐಎಫ್‌ಎ, ಈಜಿಪ್ಟ್ ಜೆರ್ಸಿ ಧರಿಸುವ ಪ್ರತಿಯೊಬ್ಬರೂ ಆಟಗಾರ ಹಾಗೂ ತಂಡವನ್ನು ಬೆಂಬಲಿಸುವ ಪ್ರತಿಯೊಬ್ಬ ಅಭಿಮಾನಿಯೂ ನ್ಯಾಯಯುತ ಹಾಗೂ ಸಮಾನ ತೀರ್ಪುಗಾರರಿಗೆ ಅರ್ಹರು ಎಂದು ಒತ್ತಾಯಿಸಿದ್ದಾರೆ.

RELATED ARTICLES

Latest News