Homeಇದೀಗ ಬಂದ ಸುದ್ದಿನಾನು ಮನೇಲಿ ಇದ್ದಿದ್ರೆ ನನ್ನನ್ನೂ ಕೊಲ್ಲುತ್ತಿದ್ದ : ಪ್ರಶಾಂತ್‌ ತಂದೆ ಚಿಕ್ಕಣ್ಣ ಕಣ್ಣೀರು

ನಾನು ಮನೇಲಿ ಇದ್ದಿದ್ರೆ ನನ್ನನ್ನೂ ಕೊಲ್ಲುತ್ತಿದ್ದ : ಪ್ರಶಾಂತ್‌ ತಂದೆ ಚಿಕ್ಕಣ್ಣ ಕಣ್ಣೀರು

ಬೆಂಗಳೂರು,ಜು.11-ನಾನುಮನೆಯಲ್ಲಿದ್ದಿದ್ದರೆ ನನ್ನನ್ನೂ ಕೊಲೆ ಮಾಡುತ್ತಿದ್ದ. ಹೊರಗೆ ಹೋಗಿದ್ದರಿಂದ ಪ್ರಾಣ ಉಳಿಯಿತು. ನಾನು ಎಂದಿನಂತೆ ಆರು ಗಂಟೆಗೆ ಎದ್ದು ಇಸ್ತ್ರಿ ಅಂಗಡಿ ಬಾಗಿಲು ತೆಗೆಯಲು ಹೋಗಿದ್ದೆ. ಹಾಗಾಗಿ ನನ್ನ ಪ್ರಾಣ ಉಳಿಯಿತು ಎಂದು ಆರೋಪಿ ಪ್ರಶಾಂತ್‌ ಅವರ ತಂದೆ ಚಿಕ್ಕಣ್ಣ ಮನನೊಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಶಾಂತ್‌ಗೆ ತಾಯಿ ಎಂದರೆ ಪ್ರಾಣ. ಆದರೆ ಆತನಿಗೆ ಸ್ವಲ್ಪ ಮುಂಗೋಪ. ಆದರೆ ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾನೆಂದು ಅಂದುಕೊಂಡಿರಲಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಊಟ ,ತಿಂಡಿ ವಿಚಾರಕ್ಕೆ ಮನೆಯಲ್ಲಿ ಆಗಾಗ ಸಣ್ಣ ಗಲಾಟೆಯಾಗುತ್ತಿತ್ತು. ಅದು ಬಿಟ್ಟರೆ ಯಾವುದೇ ಜಗಳವಾಡುತ್ತಿರಲಿಲ್ಲ.

ಇಂದು ಬೆಳಗ್ಗೆ ಎಲ್ಲರೂ ಮಲಗಿದ್ದಾಗ ನಾನು ಎದ್ದು 6 ಗಂಟೆಗೆ ಅಂಗಡಿಗೆ ಹೋದೆ ಒಂದು ವೇಳೆ ಮನೆಯಲ್ಲಿ ಗಲಾಟೆಯಾಗಿದ್ದರೆ ನಾನು ಹೋಗುತ್ತಲೇ ಇರಲಿಲ್ಲ. ನಾನು ಮನೆಯಲ್ಲಿದ್ದಿದ್ದರೇ ನನ್ನನ್ನು ಕೊಲೆ ಮಾಡುತ್ತಿದ್ದ ಅನ್ಸುತ್ತೆ.

ನನ್ನ ಸ್ನೇಹಿತರು ಬೆಳಗ್ಗೆ 10 ಗಂಟೆಗೆ ಮೊಬೈಲ್‌ಗೆ ಕರೆ ಮಾಡಿ ನಿಮ ಮನೆಯಲ್ಲಿ ಈ ರೀತಿ ಆಗಿದೆ ಎಂದು ವಿಷಯ ತಿಳಿಸಿದರು. ಮನೆಗೆ ಹೋಗಿ ನೋಡಿದಾಗ ಮೂವರನ್ನು ಕೊಲೆ ಮಾಡಿ ಆತ ಆತಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಯಿತು.

ಮಗ ಮಾನಸಿಕವಾಗಿ ಚೆನ್ನಾಗಿಯೇ ಇದ್ದ. ಒಂದು ವೇಳೆ ಆತನ ಮನಸ್ಥಿತಿ ಕುಗ್ಗಿದ್ದರೆ, ಏಕೆ ಡೈವರ್‌ ಕೆಲಸಕ್ಕೆ ಹೋಗುತ್ತಿದ್ದ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ. ಮೂಲತಃ ಕುಣಿಗಲ್‌ ತಾಲ್ಲೂಕಿನ ಚಿಕ್ಕಣ್ಣ ಏಳೆಂಟು ವರ್ಷದಿಂದ ಕೊಟ್ಟಿಗೆಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.ಇದೀಗ ಕುಟುಂಬದ ನಾಲ್ವರನ್ನು ಕಳೆದುಕೊಂಡು ಮನೆಯ ಯಜಮಾನರಾದ ಅವರು ಒಂಟಿಯಾಗಿದ್ದಾರೆ.

RELATED ARTICLES

Latest News