Homeಇದೀಗ ಬಂದ ಸುದ್ದಿಆಂಬುಲೆನ್ಸ್ ನಲ್ಲಿ ಮಾದಕವಸ್ತು ಸರಬರಾಜು: ಚಾಲಕನ ಪತ್ತೆಗಾಗಿ ಪೊಲೀಸರ ಶೋಧ

ಆಂಬುಲೆನ್ಸ್ ನಲ್ಲಿ ಮಾದಕವಸ್ತು ಸರಬರಾಜು: ಚಾಲಕನ ಪತ್ತೆಗಾಗಿ ಪೊಲೀಸರ ಶೋಧ

ಬೆಂಗಳೂರು, ಜು.26- ಸಮಾಜಸೇವೆ ಹೆಸರಿನಲ್ಲಿ ಆಂಬುಲೆನ್ಸ್ ನಲ್ಲೇ ಮಾದಕವಸ್ತು ಸರಬರಾಜು ಮಾಡುತ್ತಿದ್ದುದನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದವನೇ ಡ್ರಗ್‌್ಸ ಸಾಗಾಟ ಮಾಡುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಚಾಲಕ ಕಳೆದ ಒಂದು ವಾರದಿಂದ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮಂಗಳೂರು ಸೂರತ್ಕಲ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್‌ಟ್ಯಾಂಕ್‌ ಬಳಿಯ ಮನೆಯೊಂದರಲ್ಲಿ ಮಾದಕವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಆ ಮನೆಯ ಮೇಲೆ ದಾಳಿ ಮಾಡಿ ಆರೋಪಿ ಅಣ್ಣಪ್ಪಸ್ವಾಮಿ ಎಂಬಾತನನ್ನು ಬಂಧಿಸಿ 1.50 ಲಕ್ಷ ರೂ. ಮೌಲ್ಯದ 15 ಗ್ರಾಂ ಮಾದಕವಸ್ತು ಎಂಡಿಎಂಎ ವಶಪಡಿಸಿಕೊಂಡು ವಿಚಾರಣೆ ಕೈಗೊಂಡಾಗ ಇನ್ನಿಬ್ಬರ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ತನಿಖೆ ಮುಂದುವರೆಸಿ ಡ್ರಗ್‌ಪೆಡ್ಲರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ದೆಹಲಿಯಿಂದ ಮಾದಕವಸ್ತುವನ್ನು ಖರೀದಿಸಿ ಬೆಂಗಳೂರಿಗೆ ಹೋಗುತ್ತಿರುವ ಮಾಹಿತಿ ಲಭಿಸಿದೆ.
ಈ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಪೊಲೀಸರು ಬಾಗಲಕೋಟೆ ಜಿಲ್ಲೆಯ ಹುನಗುಂದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಾಡ್‌್ಜವೊಂದರ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲ್ಲೂಕಿನ ಮೊಹಮದ್‌ ಅಲ್ಫಾಜ್‌ (28) ಮತ್ತು ಮೊಹಮದ್‌ ಮುಸ್ತಾಫಾ (28) ಬಂಧಿತ ಡ್ರಗ್‌ ಪೆಡ್ಲರ್‌ಗಳಾಗಿದ್ದು, ಇವರಿಂದ ಒಟ್ಟು 5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ದೆಹಲಿಯಿಂದ ಕಾರಿನಲ್ಲಿ ಮಾದಕವಸ್ತುವನ್ನು ಖರೀದಿಸಿಕೊಂಡು ಬೆಂಗಳೂರು ನಗರವನ್ನು ಕೇಂದ್ರವಾಗಿಸಿಕೊಂಡು ದ.ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳ ರಾಜ್ಯದ ಇತರ ಕಡೆಗಳಿಗೆ ಮಾದಕವಸ್ತು ಪೂರೈಕೆ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.

RELATED ARTICLES

Latest News