Homeರಾಜಕೀಯಸಂಪುಟ ವಿಸ್ತರಣೆ ಕುರಿತ ನಾಟಕೀಯ ಬೆಳವಣಿಗೆ : ಬ್ಲಾಕ್‌ಮೇಲ್‌ಗೆ ಮಣಿದ 'ಕೈ'ಕಮಾಂಡ್‌

ಸಂಪುಟ ವಿಸ್ತರಣೆ ಕುರಿತ ನಾಟಕೀಯ ಬೆಳವಣಿಗೆ : ಬ್ಲಾಕ್‌ಮೇಲ್‌ಗೆ ಮಣಿದ ‘ಕೈ’ಕಮಾಂಡ್‌

Dramatic development regarding cabinet expansion

ಬೆಂಗಳೂರು, ಆ.3- ಸಚಿವ ಸಂಪುಟ ವಿಸ್ತರಣೆ ಕುರಿತ ನಿರ್ಧಾರಗಳಲ್ಲಿ ಕೆಲ ನಾಟಕೀಯ ಬೆಳವಣಿಗೆಗಳಾಗಿದ್ದು, ಸಚಿವ ಸ್ಥಾನ ನೀಡದೇ ಇದ್ದರೆ ಕುಟುಂಬ ಸಮೇತ ರಾಜೀನಾಮೆ ನೀಡುವುದಾಗಿ ಎಸ್‌‍.ಎಸ್‌‍.ಮಲ್ಲಿಕಾರ್ಜುನ ಅವರ ಬ್ಲಾಕ್‌ಮೇಲ್‌ಗೆ ಕಾಂಗ್ರೆಸ್‌‍ ಹೈಕಮಾಂಡ್‌ ಮಣಿದಿದೆ.

ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಗೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಮಂಕಾಳ ಸುಬ್ಬವೈದ್ಯ ಕೊನೆ ಕ್ಷಣದಲ್ಲಾದ ಬದಲಾವಣೆಯಿಂದ ಅವಕಾಶ ಕಳೆದುಕೊಂಡಿದ್ದಾರೆ. ಇದರಿಂದ ದುಗುಡಗೊಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಆಗಮಿಸಿದರು. ಆದರೆ ಕಾರ್ಯದೊತ್ತಡದ ನೆಪದಲ್ಲಿ ಮುಖ್ಯಮಂತ್ರಿಯವರು ಮಂಕಾಳ ವೈದ್ಯ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಕಾಳ ವೈದ್ಯ ತಮಗೆ ಇನ್ನೂ ಯಾವುದೇ ಖಚಿತ ಮಾಹಿತಿ ಇಲ್ಲ. ಮುಖ್ಯಮಂತ್ರಿಯವರು ಭೇಟಿಗೆ ಸಿಕ್ಕಿಲ್ಲ, ಮತ್ತೊಮೆ ಬರುತ್ತೇನೆ. ನಾನು ಮಾತನಾಡುವ ವ್ಯಕ್ತಿಯಲ್ಲ. ಕೆಲಸ ಮಾಡುವ ಜನ ಎಂದು ಹೇಳಿ ತೆರಳಿದ್ದಾರೆ.

ರಾಜೀನಾಮೆ ಒತ್ತಡ:
ಲಿಂಗಾಯತ ವೀರಶೈವ ಸಮುದಾಯದ ಪ್ರಭಾವಿ ಮುಖಂಡರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಪುತ್ರರಾಗಿರುವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಮೊದಲ ಹಂತದ ಸಂಪುಟ ರಚನೆಯಲ್ಲಿ ಮಲ್ಲಿಕಾರ್ಜುನ ಅವರನ್ನು ಕೈಬಿಡಲಾಗಿತ್ತು. ವಿಸ್ತರಣೆಯಲ್ಲಿ ಅವಕಾಶ ತಪ್ಪಿದ್ದರೆ ಕುಟುಂಬ ಸಮೇತ ಕಾಂಗ್ರೆಸ್‌‍ಗೆ ರಾಜೀನಾಮೆ ನೀಡುವುದಾಗಿ ಮಲ್ಲಿಕಾರ್ಜುನ್‌ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮಲ್ಲಿಕಾರ್ಜುನ್‌ ದಾವಣಗೆರೆ ಉತ್ತರದಿಂದ ಶಾಸಕರಾಗಿದ್ದರೆ, ದಾವಣಗೆರೆ ದಕ್ಷಿಣದಿಂದ ಅವರ ಪುತ್ರ ಸಮರ್ಥ ಶಾಮನೂರು ಇತ್ತೀಚೆಗೆ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಮಲ್ಲಿಕಾರ್ಜುನ ಅವರ ಪತ್ನಿ ಡಾ.ಪ್ರಭಾ ದಾವಣಗೆರೆಯಿಂದ ಸಂಸದರಾಗಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದವರಿಗೆ ಎಲ್ಲಾ ಸ್ಥಾನಗಳು ದೊರೆತ್ತಿದ್ದು, ಕುಟುಂಬ ರಾಜಕಾರಣಕ್ಕೆ ಕಾಂಗ್ರೆಸ್‌‍ ಪಕ್ಷ ಮಿತಿಮೀರಿದ ಒತ್ತು ನೀಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜಕೀಯ ಹಿನ್ನಲೆಯಿಲ್ಲದೆ ಮಂಕಾಳ ವೈದ್ಯ ಕೊನೆ ಕ್ಷಣದಲ್ಲಿ ಬಲಿಪಶುವಾಗಿದ್ದಾರೆ.

RELATED ARTICLES
spot_img

Latest News