Homeರಾಷ್ಟ್ರೀಯಕೇರಳ ಸ್ಫೋಟಕ ವಶ ಪ್ರಕರಣ: ಪ್ರಮುಖ ಆರೋಪಿ ಬಂಧನ

ಕೇರಳ ಸ್ಫೋಟಕ ವಶ ಪ್ರಕರಣ: ಪ್ರಮುಖ ಆರೋಪಿ ಬಂಧನ

ನವದೆಹಲಿ, ಆ.9- ಕೇರಳದ ಮಲಪ್ಪುರಂನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಬಂಧಿತನನ್ನು ಮಲಪ್ಪುರಂ ಜಿಲ್ಲೆಯ ಮಂಜೇರಿಯ ಹರಿಸ್‌‍ ಟಿಎ ಎಂದು ಗುರುತಿಸಲಾಗಿದೆ.. ಪ್ರಕರಣದ ಪ್ರಮುಖ ಸಂಚುಕೋರನಾಗಿರುವ ಈತ ವಶಪಡಿಸಿಕೊಳ್ಳಲಾದ ಸ್ಫೋಟಕಗಳನ್ನು ಅಕ್ರಮವಾಗಿ ಖರೀದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಎನ್‌ಐಎ ತಿಳಿಸಿದೆ.

2026ರ ಫೆಬ್ರವರಿ 7ರಂದು ಮಲಪ್ಪುರಂನ ಚೆಮ್ಮಾಡ್‌‍ತಲಪ್ಪಾರ ರಸ್ತೆ ಬದಿಯಲ್ಲಿರುವ ಫಹಾರ್‌ ಹಾಲೋ ಬ್ರಿಕ್‌್ಸ ಕಂಪನಿಯ ಆವರಣದಲ್ಲಿ ನಿಲ್ಲಿಸಿದ್ದ ಲಾರಿಯಿಂದ 89,600 ಸ್ಫೋಟಕ ಕಡ್ಡಿಗಳು ಹಾಗೂ 10,500 ಶಾಕ್‌ ಟ್ಯೂಬ್‌ಗಳನ್ನು (ನೋನೆಲ್‌‍) ವಶಪಡಿಸಿಕೊಳ್ಳಲಾಗಿತ್ತು. ಕೇರಳ ಪೊಲೀಸರು ಲಾರಿಯನ್ನು ತಡೆದು ಪರಿಶೀಲಿಸಿದ ವೇಳೆ ಸ್ಫೋಟಕ ಸಾಗಣೆಗೆ ಸಂಬಂಧಿಸಿದ ಮೂವರನ್ನು ಬಂಧಿಸಿದ್ದರು. ಆರೋಪಿಗಳ ಬಳಿ ಸ್ಫೋಟಕಗಳನ್ನು ಸಾಗಿಸಲು ಅಥವಾ ಹೊಂದಲು ಅಗತ್ಯವಿದ್ದ ಮಾನ್ಯ ಪರವಾನಗಿ ಅಥವಾ ಅನುಮತಿ ಇರಲಿಲ್ಲ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ನಂತರ ಎನ್‌ಐಎ ಪ್ರಕರಣವನ್ನು ಮರುನೋಂದಣಿ ಮಾಡಿಕೊಂಡು ತನಿಖೆಯನ್ನು ವಹಿಸಿಕೊಂಡಿತ್ತು. ತನಿಖೆಯ ಭಾಗವಾಗಿ ಮೂರು ರಾಜ್ಯಗಳ 19 ಸ್ಥಳಗಳಲ್ಲಿ ಶೋಧ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಆಗಸ್ಟ್‌ 7ರಂದು ಕರ್ನಾಟಕದ ವಿಜಯಪುರದಲ್ಲಿ ಎನ್‌ಐಎ ಮೂವರು ಆರೋಪಿಗಳನ್ನು ಬಂಧಿಸಿತ್ತು. ಇದೀಗ ಹರಿಸ್‌‍ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು 10 ಮಂದಿ ಬಂಧಿತರಾಗಿದ್ದಾರೆ. ಸ್ಫೋಟಕಗಳ ಅಕ್ರಮ ಖರೀದಿ, ಸಾಗಣೆ ಹಾಗೂ ಇದರ ಹಿಂದಿರುವ ದೊಡ್ಡ ಸಂಚಿನ ಕುರಿತು ತನಿಖೆ ಮುಂದುವರಿದಿದೆ ಎಂದು ಎನ್‌ಐಎ ತಿಳಿಸಿದೆ.

RELATED ARTICLES
spot_img

Latest News