ನಿತ್ಯ ನೀತಿ : ಕಷ್ಟವೆಂಬುವ ಕಸವ ಗುಡಿಸವ್ವಾ ನೀ ನಷ್ಟವೆಂಬುವ ನೆಲವ ತೊಳೆಯವ್ವಾ ನಿರ್ಮಲಾತ್ಮದ ನೀರ ಹಾಕಿ ಭಕ್ತಿ ಎಂಬ ರಂಗೋಲೆ ಬಿಡಿಸವ್ವಾ
ಪಂಚಾಂಗ : ಗುರುವಾರ 17-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಶುಕ್ಲ / ತಿಥಿ: ಷಷ್ಠಿ / ನಕ್ಷತ್ರ: ಅನುರಾಧಾ / ಯೋಗ: ವಿಷ್ಕಂಭ / ಕರಣ: ಗರಜ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.22
ರಾಹುಕಾಲ – 1.30- 3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00- 10.30
ರಾಶಿಭವಿಷ್ಯ :
ಮೇಷ: ಸಮೀಪ ವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ.
ವೃಷಭ: ವಕೀಲರು ಕೋರ್ಟು -ಕಚೇರಿ ಕೆಲಸಗಳಲ್ಲಿ ಅಽಕ ಲಾಭ ಗಳಿಸುವರು.
ಮಿಥುನ: ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆರೋಗ್ಯ ಸಮಸ್ಯೆ ಕಾಡುವುದು.
ಕಟಕ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ.
ಸಿಂಹ: ರಫ್ತು, ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಕನ್ಯಾ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.
ತುಲಾ: ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ.
ಧನುಸ್ಸು: ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡು ವವರಿಗೆ ಉತ್ತಮ ಯಶಸ್ಸು ಸಿಗಲಿದೆ.
ಮಕರ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡ ಬೇಕಾಗಬಹುದು. ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಮೀನ: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.
