Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-09-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-09-2026)

Today's Horoscope

ನಿತ್ಯ ನೀತಿ : ಈ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಓಡುವ ವಸ್ತುವೆಂದರೆ ಮನಸ್ಸು, ಮೋಕ್ಷಕ್ಕೂ, ಬಂಧನಕ್ಕೂ ಮನಸ್ಸೇ ಕಾರಣ.

ಪಂಚಾಂಗ : ಶುಕ್ರವಾರ, 18-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಪ್ರೀತಿ / ಕರಣ: ವಿಷ್ಟಿ ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.21
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ಹೊಸ ಜನರನ್ನು ಭೇಟಿ ಮಾಡುವುದರಿಂದ ನಿಮಗೆ ಹೆಚ್ಚು ಪ್ರಯೋಜನವಾಗಲಿದೆ.
ವೃಷಭ: ಕೆಲವು ಕಾರಣಗಳಿಂದ ತೊಂದರೆಗೊಳಗಾಗಬಹುದು. ಪೋಷಕರ ಆಶೀರ್ವಾದ ಪಡೆಯಿರಿ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚ ಲಿದೆ. ಕುಟುಂಬದಲ್ಲಿ ಪೋಷಕರ ಬೆಂಬಲ ಸಿಗಲಿದೆ.

ಕಟಕ: ವೃತ್ತಿಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.
ಸಿಂಹ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿ ಅಥವಾ ಹಣ ದೊರೆಯುವ ಅವಕಾಶಗಳು ಹೆಚ್ಚಾಗಿವೆ.
ಕನ್ಯಾ: ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಲ್ಲಿ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗುವಿರಿ.

ತುಲಾ: ಮಾತು, ನಡವಳಿಕೆಯಿಂದ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ.
ವೃಶ್ಚಿಕ: ಆರೋಗ್ಯದ ಕೊರತೆಯಿಂದ ಹಣಕಾಸಿನ ಸ್ಥಿತಿಯೂ ದುರ್ಬಲಗೊಳ್ಳುವ ಸಾಧ್ಯತೆ ಇದೆ.
ಧನುಸ್ಸು: ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನೆರೆಹೊರೆಯವರೊಂದಿಗೆ ಹೆಚ್ಚು ಜಾಗರೂಕರಾಗಿರಿ.

ಮಕರ: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದು ಕೊಳ್ಳುವುದನ್ನು ತಪ್ಪಿಸಿ.
ಕುಂಭ: ಸಾರ್ವಜನಿಕ ರಂಗದಲ್ಲಿ ದುಡಿಯುವವರಿಗೆ ಮಹತ್ವದ ಜವಾಬ್ದಾರಿ ಬರಲಿದೆ.
ಮೀನ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.

RELATED ARTICLES
spot_img

Latest News