Homeಬೆಂಗಳೂರುಲಾಂಗ್‌ ಹಿಡಿದು ಆತಂಕ ಸೃಷ್ಟಿಸಿದ್ದ ಪುಡಿರೌಡಿ ಅಂದರ್

ಲಾಂಗ್‌ ಹಿಡಿದು ಆತಂಕ ಸೃಷ್ಟಿಸಿದ್ದ ಪುಡಿರೌಡಿ ಅಂದರ್

ಬೆಂಗಳೂರು,ಸೆ.20-ನಡುರಸ್ತೆಯಲ್ಲಿ ಲಾಂಗ್‌ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದ ಪುಡಿರೌಡಿಯೊಬ್ಬನನ್ನು ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದಾಪುರದ ನಿವಾಸಿ ನದೀಂ (28) ಬಂಽತ ಪುಡಿರೌಡಿ.

ನದೀಂ ಹಾಗೂ ಪರಾರಿಯಾಗಿರುವ ಜುನೈದ್‌ ಬೈಕ್‌ನಲ್ಲಿ ಸಂಚರಿಸುತ್ತಾ ಜಯನಗರದ 9ನೇ ಬ್ಲಾಕ್‌ನಲ್ಲಿ ಲಾಂಗ್‌ ಹಿಡಿದು ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದರು.ಆರೋಪಿಗಳು ಸಾರ್ವಜನಿಕವಾಗಿ ಮಾರಕಾಸಗಳನ್ನು ಪದರ್ಶಿಸುತ್ತಿದ್ದನ್ನು ವಿಡಿಯೋ ಮಾಡಿ ಸ್ಥಳೀಯರೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದರು. ಇದು ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ತಿಲಕ್‌ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬನನ್ನು ಬಂಽಸಿ ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES
spot_img

Latest News