Homeರಾಷ್ಟ್ರೀಯಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಾಂಸ ಎಸೆದ ಮೂವರ ಬಂಧನ

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಾಂಸ ಎಸೆದ ಮೂವರ ಬಂಧನ

ಹೈದರಾಬಾದ್‌, ಸೆ. 21- ನಗರದ ಸೌಹಾರ್ದಕ್ಕೆ ಧಕ್ಕೆ ತರುವಂಥ ಘಟನೆಯೊಂದರಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಹಾಗೂ ಪ್ರಸಾದ ತಯಾರಿಸುತ್ತಿದ್ದ ಸ್ಥಳದ ಮೇಲೆ ಮಾಂಸ ಮತ್ತು ಮೂಳೆಗಳನ್ನು ಎಸೆದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ವಲಯದ ಮದನ್ನಾಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಗಣೇಶೋತ್ಸವದ ಆಹಾರ ತಯಾರಿಕಾ ಪಂದಲ್‌ ಮೇಲೆ ಮಾಂಸದ ತುಂಡುಗಳನ್ನು ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನು ಕಂಡು ಸ್ಥಳೀಯರು ಹಾಗೂ ಶ್ರದ್ಧಾಳುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮದನ್ನಾಪೇಟೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಗುಂಪನ್ನು ಚದುರಿಸಿದರು.ಈ ಕೃತ್ಯಕ್ಕೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ ನಿವಾಸಿಗಳಾದ ಇಮ್ರಾನ್‌ ಖುರೇಷಿ, ಅರ್ಷಿಯಾ ಬೇಗಂ ಮತ್ತು ಸಬೀನಾ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಹೈದರಾಬಾದ್‌ನ ಹಳೆಯ ನಗರ ಭಾಗದಲ್ಲಿ ಗಣೇಶ ಚತುರ್ಥಿ ಹಾಗೂ ಮಿಲಾದ್‌-ಉನ್‌-ನಬಿ ಹಬ್ಬಗಳ ಸಂದರ್ಭದಲ್ಲಿ ಇಂತಹ ಕೋಮು ಸೌಹಾರ್ದ ಕೆಡಿಸುವ ಯತ್ನಗಳು ಹೊಸದೇನಲ್ಲ.ಈ ಹಿಂದೆ ಇದೇ ಮದನ್ನಾಪೇಟೆ ಮತ್ತು ಸೈದಾಬಾದ್‌ ಪ್ರದೇಶಗಳಲ್ಲಿ ಧಾರ್ಮಿಕ ಸ್ಥಳಗಳ ಬಳಿ ಅಪವಿತ್ರ ವಸ್ತುಗಳನ್ನು ಎಸೆದ ಘಟನೆಗಳು ದೊಡ್ಡ ಮಟ್ಟದ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದವು.ಇತ್ತೀಚಿನ ವರ್ಷಗಳಲ್ಲಿಯೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ತಪ್ಪು ವದಂತಿಗಳನ್ನು ಹರಡಿ ನಗರದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಕಿಡಿಗೇಡಿಗಳು ಯತ್ನಿಸಿದ ಉದಾಹರಣೆಗಳಿವೆ.

ಪೊಲೀಸ್‌ ಕಮಿಷನರ್‌ ಎಚ್ಚರಿಕೆ

ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್‌ ತುಕಡಿಗಳನ್ನು ನಿಯೋಜಿಸಲಾಗಿದೆ.ಸಾರ್ವಜನಿಕರು ಹಾಗೂ ಹಬ್ಬದ ಆಯೋಜಕರು ಶಾಂತಿ ಕಾಪಾಡಬೇಕಾಗಿ ಪೊಲೀಸರು ಮನವಿ ಮಾಡಿದ್ದಾರೆ. ಮುಖ್ಯವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ವಿಡಿಯೋಗಳು ಅಥವಾ ಸುಳ್ಳು ವದಂತಿಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ. ಕಿಡಿಗೇಡಿಗಳು ಸೌಹಾರ್ದತೆ ಕದಡಲು ಯತ್ನಿಸಿದರೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
spot_img

Latest News