Homeರಾಜಕೀಯಪ್ರಾಮಾಣಿಕವಾಗಿದ್ದರೆ ಸ್ಟಿಂಗ್‌ ಆಪರೇಷನ್‌ ಭಯ ಏಕೆ..? : ನಿಖಿಲ್‌ ಕುಮಾರಸ್ವಾಮಿ

ಪ್ರಾಮಾಣಿಕವಾಗಿದ್ದರೆ ಸ್ಟಿಂಗ್‌ ಆಪರೇಷನ್‌ ಭಯ ಏಕೆ..? : ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು,ಅ.9- ಪ್ರಾಮಾಣಿಕವಾಗಿ ಆಡಳಿತ ನಡೆಸುತ್ತಿದ್ದರೆ ಸ್ಟಿಂಗ್‌ ಆಪರೇಷನ್‌ ಭಯವೇಕೆ ಎಂದು ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿಯವರು ಪ್ರಶ್ನಿಸಿದರು.ನೆಲಮಂಗಲದಲ್ಲಿ ರೈತ ಸ್ವಾಭಿಮಾನ ಯಾತ್ರೆ ಅಂಗವಾಗಿ ಟಿ.ಬಿ.ಬಸ್‌‍ ನಿಲ್ದಾಣದಿಂದ ತಾಲ್ಲೂಕು ಕಚೇರಿಯ ಕೆಂಗಲ್‌ ಹನುಮಂತಯ್ಯ ಪ್ರತಿಮೆವರೆಗೆ ಮೆರವಣಿಗೆ ನಡೆಸಿದ ನಂತರ ಅವರು ಮಾತನಾಡಿದರು.

ಹಾಯ್‌, ಹಲೋ, ಟ್ರ್ಯಾಪ್‌, ಸ್ಟಿಂಗ್‌ ಬಗ್ಗೆ ಜನರಿಗೆ ಮಾಹಿತಿ ಇದೆ. ನಿಮದೇ ಸರ್ಕಾರ ಆಡಳಿತವಿದೆ. ಮುಖ್ಯಮಂತ್ರಿ ಅಧೀನದಲ್ಲೇ ಗುಪ್ತಚರ ಇಲಾಖೆ ಇದೆ. ಸ್ಟಿಂಗ್‌ ಮಾಡಿದವರ ಬಗ್ಗೆ ಮಾಹಿತಿ ಇದ್ದರೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೆಸರು ಹೇಳದೇ ನಿಖಿಲ್‌ ಕುಮಾರಸ್ವಾಮಿ ಒತ್ತಾಯಿಸಿದರು.

ನಾಡಿನ ಜನರು ಪ್ರಬುದ್ಧರಾಗಿದ್ದು, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್‌‍ ಸರ್ಕಾರದ ಆಡಳಿತದ ವಿರೋಧದ ಅಲೆ ಕಂಡುಬರುತ್ತಿದೆ ಎಂದು ಅವರು ಹೇಳಿದರು. ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.

ಕೇವಲ ರೀಲ್ಸ್ ಮಾಡುವುದರಿಂದ ಜನರ ಸಂಕಷ್ಟ ದೂರವಾಗುವುದಿಲ್ಲ. ಜನರ ಸಮಸ್ಯೆಗಳ ನಿವಾರಣೆಗೆ ಸರ್ಕಾರದಿಂದ ಗಂಭೀರ ಪ್ರಯತ್ನಗಳಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಾ.ಶ್ರೀನಿವಾಸಮೂರ್ತಿ, ಎಲ್‌.ಎನ್‌.ನಾರಾಯಣಸ್ವಾಮಿ, ವಿಧಾನಪರಿಷತ್‌ ಮಾಜಿ ಸದಸ್ಯ ಇ.ಕೃಷ್ಣಪ್ಪ ಸೇರಿದಂತೆ ಜೆಡಿಎಸ್‌‍ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಂಡಿದ್ದರು.

RELATED ARTICLES
spot_img

Latest News