-ಲಾವಣ್ಯ.ಎ.ವಿ
ಕರ್ನಾಟಕದ ಇತಿಹಾಸದಲ್ಲಿ ಶೌರ್ಯ, ಸಾಹಸ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಗುರುತಿಸಿಕೊಂಡಿರುವ ಮಹಾನ್ ಐತಿಹಾಸಿಕ ವ್ಯಕ್ತಿಗಳಲ್ಲಿ ವೀರ ಮದಕರಿ ನಾಯಕ ಪ್ರಮುಖರು. ಚಿತ್ರದುರ್ಗದ ಇತಿಹಾಸದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಅವರ ಜೀವನಗಾಥೆ ಇಂದಿಗೂ ಜನರಲ್ಲಿ ಧೈರ್ಯ ಮತ್ತು ನಾಡಪ್ರೇಮದ ಭಾವನೆಯನ್ನು ಮೂಡಿಸುತ್ತದೆ.
ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗ ಹೆಸರನ್ನು ಅಜರಾಮರಗೊಳಿಸಿದ ವೀರರಲ್ಲಿ ಮದರಕರಿ ನಾಯಕರು ಪ್ರಮುಖರು. ರಾಜ ವೀರ ಮದಕರಿ ನಾಯಕ ಎಂದೇ ಪ್ರಸಿದ್ದರಅಗಿರುವ ಇವರು 1742ರಲ್ಲಿ ಅಕ್ಟೋಬರ್ 13ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಜನಕಲ್ ಗ್ರಾಮದಲ್ಲಿ ಜನಿಸಿದರು. ನಾಯಕ ಮನೆತನಕ್ಕೆ ಸೇರಿದ್ದ ಇವರಿಗೆ 1758ರಲ್ಲಿ ಚಿತ್ರುದರ್ಗದ ಆಡಳಿತ ಜವಾಬ್ದಾರಿ ದೊರೆಯಿತು. 1779ರವರೆಗೆ ಆಡಳಿತ ನಡೆಸಿದರು.
ಆಚರಿಸಲಾಗುವ ವೀರ ಮದಕರಿ ನಾಯಕ ಜಯಂತಿ ಅವರ ಸಾಧನೆ ಮತ್ತು ಹೋರಾಟದ ಬದುಕನ್ನು ಸರಿಸುವ ಮಹತ್ವದ ಸಂದರ್ಭವಾಗಿದೆ.ರಾಜವೀರ ಮದಕರಿ ನಾಯಕರು ಚಿತ್ರದುರ್ಗದ ನಾಯಕರ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ಪಡೆದವರು.
ಅವರು 18ನೇ ಶತಮಾನದಲ್ಲಿ ಚಿತ್ರದುರ್ಗವನ್ನು ಆಳಿದ ಕೊನೆಯ ನಾಯಕರಾಗಿದ್ದರು. ಕೋಟೆನಾಡಿನ ರಕ್ಷಣೆ, ಆಡಳಿತ ಮತ್ತು ಯುದ್ಧಸಾಹಸಗಳೊಂದಿಗೆ ಅವರ ಹೆಸರು ಇತಿಹಾಸದಲ್ಲಿ ಗುರುತಿಸಿಕೊಂಡಿದೆ. ಶತ್ರುಗಳ ಸವಾಲುಗಳ ನಡುವೆಯೂ ತಮ ರಾಜ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವರು ನಡೆಸಿದ ಹೋರಾಟ ಇಂದಿಗೂ ಜನರ ಸರಣೆಯಲ್ಲಿದೆ.
ಚಿತ್ರದುರ್ಗದ ಕೋಟೆ ಕೇವಲ ಕಲ್ಲಿನ ಕಟ್ಟಡವಲ್ಲ; ಅದು ಈ ನೆಲದ ಇತಿಹಾಸ, ಹೋರಾಟ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಈ ಕೋಟೆಯ ಇತಿಹಾಸವನ್ನು ನೆನಪಿಸಿಕೊಳ್ಳುವಾಗ ಮದಕರಿ ನಾಯಕರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಮದಕರಿ ನಾಯಕರ ಜೀವನಗಾಥೆ ಧೈರ್ಯ, ನಾಯಕತ್ವ ಮತ್ತು ಸಂಕಷ್ಟಗಳನ್ನು ಎದುರಿಸುವ ಮನೋಬಲದ ಮಹತ್ವವನ್ನು ಸಾರುತ್ತದೆ. ರಾಜ್ಯದ ರಕ್ಷಣೆಗಾಗಿ ಅವರು ನಡೆಸಿದ ಹೋರಾಟಗಳು ಕನ್ನಡ ನಾಡಿನ ಐತಿಹಾಸಿಕ ಪರಂಪರೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.
ಇಂದಿನ ಯುವಜನತೆ ತಮ ಜೀವನದಿಂದ ಧೈರ್ಯ, ಕರ್ತವ್ಯನಿಷ್ಠೆ, ಆತವಿಶ್ವಾಸ ಮತ್ತು ನಾಡಿನ ಇತಿಹಾಸದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕಾಗಿದೆ. ಐತಿಹಾಸಿಕ ವ್ಯಕ್ತಿಗಳ ಸಾಧನೆಗಳನ್ನು ತಿಳಿದುಕೊಳ್ಳುವುದು ನಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಮುಖ ಮಾರ್ಗವಾಗಿದೆ. ಜಯಂತಿ ಆಚರಣೆ ಎಂದರೆ ಕೇವಲ ಮೆರವಣಿಗೆ, ಹಾರ ಮತ್ತು ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು.
ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು. ಮದಕರಿ ನಾಯಕರ ಜಯಂತಿಯನ್ನು ಎಲ್ಲ ಸಮುದಾಯಗಳ ಜನರು ಯಾವುದೇ ಧರ್ಮ, ಜಾತಿ ಇಲ್ಲದೆ ಒಗ್ಗಟ್ಟಿನಿಂದ ಆಚರಿಸುವ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಗೌರವವನ್ನು ಬೆಳೆಸಬಹುದು.
ಈ ಒಂದು ಸಂದರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಐತಿಹಾಸಿಕ ಉಪನ್ಯಾಸಗಳು, ಪ್ರಬಂಧ ಸ್ಪರ್ಧೆಗಳು, ಪುಸ್ತಕ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ನಮ ನಾಡಿನ ಇತಿಹಾಸದ ಅರಿವು ಮೂಡಿಸಬಹುದು. ಇತಿಹಾಸದ ನೆನಪು, ಭವಿಷ್ಯಕ್ಕೆ ಪ್ರೇರಣೆಯಾಗಬೇಕು ವೀರ ಮದಕರಿ ನಾಯಕರು ಕರ್ನಾಟಕದ ಐತಿಹಾಸಿಕ ಪರಂಪರೆಯ ಪ್ರಮುಖ ವ್ಯಕ್ತಿ.ವೀರ ಮದಕರಿ ನಾಯಕ ಜಯಂತಿ ಕೇವಲ ಒಬ್ಬ ಐತಿಹಾಸಿಕ ನಾಯಕನನ್ನು ಸರಿಸುವ ದಿನವಲ್ಲ; ಅದು ನಮ ಇತಿಹಾಸ, ಸಂಸ್ಕೃತಿ ಮತ್ತು ಸ್ವಾಭಿಮಾನದ ಮೌಲ್ಯಗಳನ್ನು ನೆನಪಿಸಿಕೊಳ್ಳುವ ದಿನವೂ ಹೌದು. ಅವರ ಜೀವನಗಾಥೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬುದೇ ಈ ಜಯಂತಿಯ ಆಶಯವಾಗಲಿ.
