Homeರಾಜ್ಯಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆಧಾರ್‌ ಬದಲು ಬಯೋಮೆಟ್ರಿಕ್ಸ್ ಮತ್ತು ವೋಟರ್‌ ಐಡಿ ಕಡ್ಡಾಯ

ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆಧಾರ್‌ ಬದಲು ಬಯೋಮೆಟ್ರಿಕ್ಸ್ ಮತ್ತು ವೋಟರ್‌ ಐಡಿ ಕಡ್ಡಾಯ

ನವದೆಹಲಿ,ನ.4- ಇದುವರೆಗೆ ಆಧಾರ್‌ಸಂಖ್ಯೆಯ ಆಧಾರದಲ್ಲಿ ಪಾವತಿಗಳನ್ನು ಪಡೆಯುತ್ತಿದ್ದ ವಿವಿಧ ಯೋಜನೆಗಳ ಫಲಾನುಭವಿಗಳು ಇನ್ನು ಮುಂದೆ ತಮ್ಮ ಬಯೋಮೆಟ್ರಿಕ್ಸ್ (ಜೈವಿಕ ಗುರುತುಗಳು) ಮತ್ತು ಮತದಾರರ ಗುರುತಿನ ಚೀಟಿ (ವೋಟರ್‌ ಐಡಿ) ಸಂಖ್ಯೆಗಳನ್ನು ಬಳಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ರಾಜೀವ್‌ ರಂಜನ್‌ ಸಿಂಗ್‌ (ಲಾಲನ್‌ ಸಿಂಗ್‌) ತಿಳಿಸಿದ್ದಾರೆ.

ಪೀಪಲ್‌್ಸ ಪ್ಲಾನ್‌ ಕ್ಯಾಂಪೇನ್‌ 2026-27 (ಜನರ ಯೋಜನೆ ಅಭಿಯಾನ 2026-27) ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಾಖಲಾತಿ ಕೇಂದ್ರಗಳ ವ್ಯಾಪಕ ಲಭ್ಯತೆ ಮತ್ತು ಆಧಾರ್‌ ಕಾರ್ಡ್‌ ಅನ್ನು ಪಡೆಯುವ ಸುಲಭವು ಫಲಾನುಭವಿಗಳನ್ನು ಪರಿಶೀಲಿಸಲು ಅಸಮರ್ಪಕ ಸಾಧನವಾಗಿದೆ ಎಂದು ತಿಳಿಸಿದರು. ಫಲಾನುಭವಿಗಳಿಗೆ ಪಾವತಿ ಮಾಡಲು ಆಧಾರ್‌ ಕಾರ್ಡ್‌ ಇನ್ನು ಮುಂದೆ ಆಧಾರವಾಗಿರುವುದಿಲ್ಲ, ಆಧಾರ್‌-ನೋಂದಣಿ ಕೇಂದ್ರಗಳು ಈಗ ಎಲ್ಲೆಡೆ ಇವೆ. ನೀವು ಪ್ರತಿ ಬೀದಿಯಲ್ಲಿಯೂ ಒಂದನ್ನು ಕಾಣಬಹುದು ಎಂದರು.

ಫಲಾನುಭವಿಗಳ ಪರಿಶೀಲನೆ ಮತ್ತು ಪಾವತಿ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಲಿದೆ ಎಂದ ಅವರು, ಫಲಾನುಭವಿಗಳನ್ನು ಗುರುತಿಸಲು ಆಧಾರ್‌ಗೆ ಬದಲಾಗಿ, ಇನ್ನು ಮುಂದೆ ಬಯೋಮೆಟ್ರಿಕ್‌ ದೃಢೀಕರಣ ಮತ್ತು ಮತದಾರರ ಗುರುತಿನ ಚೀಟಿಯಲ್ಲಿರುವ (ಎಪಿಕ್‌ ಸಂಖ್ಯೆ) ಇಪಿಐಸಿ ಸಂಖ್ಯೆಯನ್ನು ಬಳಸಲಾಗುವುದು ಎಂದು ತಿಳಿಸಿದರು.

ಆದರೆ, ಈ ಪ್ರಸ್ತಾವಿತ ವ್ಯವಸ್ಥೆಯನ್ನು ಯಾವ ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾಗುತ್ತದೆ, ಇದನ್ನು ವಿವಿಧ ಸಚಿವಾಲಯ ಗಳು ಮತ್ತು ಅವುಗಳ ಯೋಜನೆಗಳಾದ್ಯಂತ ಜಾರಿಗೊಳಿಸಲಾಗುತ್ತದೆಯೇ ಅಥವಾ ಇದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದರ ಕುರಿತು ಸಿಂಗ್‌ ಯಾವುದೇ ಸ್ಪಷ್ಟನೆ ನೀಡಿಲ್ಲ.

RELATED ARTICLES

Latest News