ಪುಣೆ,ನ.4- ಕೆಮ್ಮು ಮತ್ತು ಎದೆ ನೋವಿನ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರೂಬಿ ಹಾಲ್ ಕ್ಲಿನಿಕ್ನ ಮುಖ್ಯ ಹೃದ್ರೋಗ ತಜ್ಞರು ಹಾಗೂ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಟ್ರಸ್ಟಿ ಆಗಿರುವ ಡಾ. ಪರ್ವೆಜ್ ಕೆ. ಗ್ರಾಂಟ್ ಅವರು ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಪವಾರ್ ಅವರ ಆರೋಗ್ಯ ಸ್ಥಿರವಾಗಿದೆ ಅವರು ಆಸ್ಪತ್ರೆಯಿಂದ ನೇರವಾಗಿ ಮುಂಬೈನಲ್ಲಿರುವ ತಮ ನಿವಾಸಕ್ಕೆ ತೆರಳಿದ್ದು, ವಿಶ್ರಾಂತಿಯಲ್ಲಿರುತ್ತಾರೆ ಎಂದು ಹೇಳಿದ್ದಾರೆ.
ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು, ತಮ ತಂದೆಯ ಆರೋಗ್ಯ ಈಗ ಸಾಕಷ್ಟು ಸುಧಾರಿಸಿದೆ ಎಂದು ತಿಳಿಸಿದ್ದು, ಕುಟುಂಬವು ಮುಂಬೈಗೆ ಮರಳುತ್ತಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರ ಕುಟುಂಬದ ಆಪ್ತರಾದ ವಿಠ್ಠಲ್ ಮನಿಯಾರ್ ಅವರು, ಪವಾರ್ ಅವರ ಎಲ್ಲಾ ವೈದ್ಯಕೀಯ ವರದಿಗಳು ತೃಪ್ತಿಕರವಾಗಿವೆ ಮತ್ತು ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ; ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎರಡು ದಿನಗಳ ಹಿಂದೆ ಅವರಿಗೆ ಕೆಮು ಮತ್ತು ಕಫದ ಸಮಸ್ಯೆ ಇದ್ದಿದ್ದರಿಂದ ಅವರನ್ನು ಇಲ್ಲಿ ದಾಖಲಿಸಲಾಗಿತ್ತು. ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ, ವರದಿಗಳಲ್ಲಿ ಆತಂಕಪಡುವಂತಹ ಯಾವುದೇ ವಿಷಯಗಳಿಲ್ಲ ಎಂದು ತಿಳಿಸಿದರು.
ಪವಾರ್ ಆರೋಗ್ಯದ ಬಗ್ಗೆ ವಿಚಾರಿಸಿದ ಪಿಎಂ :
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪವಾರ್ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಕರೆ ಮಾಡಿದ್ದರು, ಪವಾರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಎದು ಮನಿಯಾರ್ ತಿಳಿಸಿದ್ದಾರೆ.
ಪವಾರ್ ಅವರ ಆಸ್ಪತ್ರೆ ದಾಖಲಾತಿ ಮತ್ತು ವೈದ್ಯಕೀಯ ನಿಗಾ :
ಕೆಮ್ಮು ಮತ್ತು ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಈ ಹಿರಿಯ ರಾಜಕಾರಣಿಯನ್ನು ನವೆಂಬರ್ 2 ರಂದು ರೂಬಿ ಹಾಲ್ ಕ್ಲಿನಿಕ್ಗೆ ದಾಖಲಿಸಲಾಗಿತ್ತು. ಅನಾರೋಗ್ಯದ ತೊಂದರೆಗಳು ಕಡಿಮೆಯಾದ ಹಿನ್ನೆಲೆಯಲ್ಲಿ, ವೈದ್ಯರು ಅವರನ್ನು ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.
