Homeರಾಜ್ಯಜಿಎಸ್‌‍ಟಿ ಕಡಿತಕ್ಕೆ ಹೋಟೆಲ್‌ ಮಾಲೀಕರ ಸಂಘ ಮನವಿ

ಜಿಎಸ್‌‍ಟಿ ಕಡಿತಕ್ಕೆ ಹೋಟೆಲ್‌ ಮಾಲೀಕರ ಸಂಘ ಮನವಿ

Hotel Owners Association Requests GST Reduction

ಬೆಂಗಳೂರು, ಜ.30- ಹೋಟೆಲ್‌ ಉದ್ಯಮದ ಮೇಲಿನ ಜಿಎಸ್‌‍ಟಿ ಕಡಿತಗೊಳಿಸುವಂತೆ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಬರುವ ಫೆ.1ರಂದು ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊಟೇಲ್‌ ಮಾಲೀಕರು ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ಗೆ ಪತ್ರದ ಮೂಲಕ ಈ ಮನವಿ ಮಾಡಿಕೊಂಡಿದ್ದಾರೆ.

ಆನ್‌ಲೈನ್‌ ಫುಡ್‌ ಡಿಲೇವರಿ ಪೋರ್ಟಲ್‌ನ ಜಿಎಸ್‌‍ ಟಿ ಕಡಿತಗೊಳಿಸಬೇಕು ಅದರಲ್ಲೂ ಪ್ರಮುಖವಾಗಿ ಆನ್‌ಲೈನ್‌‍ ಸೇವೆ ಹಾಗೂ ಕಟ್ಟಡ ಬಾಡಿಗೆ ಇಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಸ್ವಿಗ್ಗಿಯಂತಹ ಯಾವುದೇ ಆನ್‌ಲೈನ್‌‍ ಸೇವಾ ಪೂರೈಕೆದಾರರ ಮೇಲೆ ಸೇವಾ ಶುಲ್ಕವನ್ನು ವಿಧಿಸಬಾರದು. ಹೋಟೆಲ್‌ ಕಟ್ಟಡಗಳ ಮೇಲಿನ ಬಾಡಿಗೆಯ ಜಿಎಸ್‌‍ಟಿಯನ್ನು ಶೇ. 18 ರಿಂದ 5 ಕ್ಕೆ ಇಳಿಸುವಂತೆ ಮನವಿ ಮಾಡಲಾಗಿದೆ.ಇದರ ಜೊತೆಗೆ ಜಿಇಎಂ ಪೋರ್ಟಲ್‌ನಲ್ಲಿನ ಸೇವಾ ಶುಲ್ಕವನ್ನು 0.5% ರಿಂದ 0.1% ಕ್ಕೆ ಇಳಿಸುವಂತೆಯೂ ಕೋರಿಕೊಳ್ಳಲಾಗಿದೆ.

RELATED ARTICLES

Latest News