Thursday, April 16, 2026
Homeರಾಜ್ಯಮೆಸೇಜ್‌ ನೋಡಿ ಹಣ ಹಾಕಿ ಸೈಬರ್‌ ಗಾಳಕ್ಕೆ ಸಿಲುಕಿದ ಮಹಿಳೆ

ಮೆಸೇಜ್‌ ನೋಡಿ ಹಣ ಹಾಕಿ ಸೈಬರ್‌ ಗಾಳಕ್ಕೆ ಸಿಲುಕಿದ ಮಹಿಳೆ

Woman gets caught in cyber trap after seeing message and depositing money

ಬೆಂಗಳೂರು,ಫೆ.22- ಸೈಬರ್‌ ವಂಚಕರು ಯಾವುದಾದರೂ ರೀತಿಯಲ್ಲಿ ಅಮಾಯಕರ ಮನಃಪರಿವರ್ತನೆ ಮಾಡುತ್ತಾ ಅವರನ್ನು ತಮ ಖೆಡ್ಡಾಗೆ ಬೀಳಿಸಿಕೊಂಡು ಹಣ ಲಪಟಾಯಿಸುತ್ತಿರುವುದು ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇದೆ.

ಇದಕ್ಕೆ ಉದಾಹರಣೆ ಎಂಬಂತೆ ವರ್ಕ್‌ ಫ್ರಂ ಹೋಂ ಹೆಸರಿನಲ್ಲಿ ಮೊಬೈಲ್‌ಗೆ ಬಂದ ಮೆಸೇಜ್‌ ನೋಡಿ ಅಮಾಯಕ ವಿದ್ಯಾರ್ಥಿ ತನ್ನ ತಾಯಿಯಿಂದ 40 ಸಾವಿರ ಹಣ ಹಾಕಿಸಿ ಮೋಸದ ಜಾಲಕ್ಕೆ ಸಿಲುಕಿದ್ದಾರೆ.

ನಗರದ ಬೆನ್ಸನ್‌ ಟೌನ್‌ ನಿವಾಸಿಯಾಗಿರುವ ಪಿಯುಸಿ ವಿದ್ಯಾರ್ಥಿಯ ಮೊಬೈಲ್‌ಗೆ ವರ್ಕ್‌ ಫ್ರಂ ಹೋಂ ಹೆಸರಿನಲ್ಲಿ ಮೆಸೇಜ್‌ ಬಂದಿದೆ. ಆ ಮೆಸೇಜ್‌ನಲ್ಲಿ ಮನೆಯಲ್ಲಿಯೇ ಕುಳಿತು ನೀವು ಶಾಪಿಂಗ್‌ ಆ್ಯಪ್‌ ಮೂಲಕ ಹಣ ಗಳಿಸಬಹುದು. ನಾವು ಕೊಡುವ ಟಾಸ್ಕ್‌ಗಳನ್ನು ಪೂರ್ಣಗೊಳ್ಳಲು ಸ್ವಲ್ಪ ಹಣ ಪಾವತಿ ಮಾಡಿದರೆ ನಿಮಗೆ ನಾವು ಹೆಚ್ಚು ಹಣ ಕೊಡುತ್ತೇವೆ ಎಂದು ಸುಳ್ಳು ರಿವ್ಯೂಗಳನ್ನು ತೋರಿಸಿ ನಂಬಿಸಿದ್ದಾರೆ.

ಇದನ್ನು ನೋಡಿದ ಆತ ತನ್ನ ತಾಯಿಗೆ ಈ ಬಗ್ಗೆ ವಿವರಿಸಿ ಹಣ ಹಾಕುವಂತೆ ಹೇಳಿದ್ದಾನೆ. ಮಗನ ಮಾತು ಕೇಳಿ ತಾಯಿ ಹಣ ಹಾಕಿದ್ದಾರೆ.ಆರಂಭದಲ್ಲಿ ಕಡಿಮೆ ಹಣದಿಂದ ಆರಂಭವಾಗಿ ತದನಂತರದಲ್ಲಿ ಸಾವಿರಾರು ರೂ. ಬೇಡಿಕೆ ಇಟ್ಟಿದ್ದಾರೆ. ಯಾವಾಗ ಹಣ ಹೆಚ್ಚು ಪಾವತಿಸುವಂತೆ ಸೈಬರ್‌ ವಂಚಕರು ಹೇಳಿದಾಗ ಅನುಮಾನಗೊಂಡ ಮಹಿಳೆ ನಾವು ಕೊಟ್ಟಿರುವ ಹಣ ವಾಪಸ್‌‍ ಹಾಕುವಂತೆ ತಿಳಿಸಿದ್ದಾರೆ.

ಮಹಿಳೆಯ ಮಾತು ಒಪ್ಪದ ವಂಚಕರು ನಮ ಟಾಸ್ಕ್‌ ಮುಗಿದರೆ ಮಾತ್ರ ಹಣ ಕೊಡುವುದು ಎಂದು ಹೇಳಿ ನಂಬಿಸಿ ಮತ್ತೆ ಹಣ ಹಾಕಿಸಿಕೊಂಡಿದ್ದಾರೆ. ಇದುವರೆಗೂ ಆ ಮಹಿಳೆ 40 ಸಾವಿರ ಹಣ ಹಾಕಿದ್ದಾರೆ. ಅಷ್ಟರಲ್ಲೇ ವಂಚಕರು ತಮ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.ತದನಂತರದಲ್ಲಿ ತಾವು ಮೋಸ ಹೋಗಿರುವುದನ್ನು ಅರಿತು ಮಹಿಳೆ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್‌ ವಂಚಕರಿಗಾಗಿ ಬಲೆ ಬೀಸಿದ್ದಾರೆ.

ಮೆಸೇಜ್‌ ತೆರೆಯಬೇಡಿ :
ಈ ಬಗ್ಗೆ ಸೈಬರ್‌ ತಜ್ಞರು ಪ್ರತಿಕ್ರಿಯಿಸಿ, ನಗರದಲ್ಲಿ ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿವೆ. ಯಾವುದೋ ಆ್ಯಪ್‌ ಹೆಸರಿನಲ್ಲಿ ಮೆಸೇಜ್‌ಗಳು ಬಂದರೆ ದಯವಿಟ್ಟು ಅವುಗಳನ್ನು ತೆರೆಯಬೇಡಿ. ಅದನ್ನು ಫಾಲೋ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.ಪ್ರಮುಖವಾಗಿ ಸರಳವಾಗಿಯೇ ಹಣ ಗಳಿಸಬಹುದು ಎಂಬ ಯಾವುದೇ ಸಂದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಕೆಲ ಶಾಪಿಂಗ್‌ ಆ್ಯಪ್‌ ಮತ್ತು ವರ್ಕ್‌ ಫ್ರಂ ಹೋಂ ಹೆಸರಿನಲ್ಲಿ ಗೂಗಲ್‌ ರಿವ್ಯೂ, ಪ್ರಾಡೆಕ್ಟ್‌ ರಿವ್ಯೂ ಎಂಬ ಟಾಸ್ಕ್‌ ಕಂಪ್ಲೀಟ್‌ ಮಾಡುವ ಟಾಸ್ಕ್‌ ನೀಡಿ ಅಮಾಯಕರನ್ನು ಸೈಬರ್‌ ವಂಚಕರು ಬೀಳಿಸಿಕೊಳ್ಳುವ ಮೂಲಕ ಹಣ ದೋಚುತ್ತಿರುವುದು ಹೆಚ್ಚಾಗುತ್ತಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಮೆಸೇಜ್‌ ತೆರೆಯಬೇಡಿ :
ಈ ಬಗ್ಗೆ ಸೈಬರ್‌ ತಜ್ಞರು ಪ್ರತಿಕ್ರಿಯಿಸಿ, ನಗರದಲ್ಲಿ ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿವೆ. ಯಾವುದೋ ಆ್ಯಪ್‌ ಹೆಸರಿನಲ್ಲಿ ಮೆಸೇಜ್‌ಗಳು ಬಂದರೆ ದಯವಿಟ್ಟು ಅವುಗಳನ್ನು ತೆರೆಯಬೇಡಿ. ಅದನ್ನು ಾಲೋ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಪ್ರಮುಖವಾಗಿ ಸರಳವಾಗಿಯೇ ಹಣ ಗಳಿಸಬಹುದು ಎಂಬ ಯಾವುದೇ ಸಂದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.ಇತ್ತೀಚೆಗೆ ಕೆಲ ಶಾಪಿಂಗ್‌ ಆ್ಯಪ್‌ ಮತ್ತು ವರ್ಕ್‌ ಫ್ರಮ್ ಹೋಂ ಹೆಸರಿನಲ್ಲಿ ಗೂಗಲ್‌ ರಿವ್ಯೂ, ಪ್ರಾಡೆಕ್ಟ್‌ ರಿವ್ಯೂ ಎಂಬ ಟಾಸ್‌್ಕ ಕಂಪ್ಲೀಟ್‌ ಮಾಡುವ ಟಾಸ್ಕ್ ನೀಡಿ ಅಮಾಯಕರನ್ನು ಸೈಬರ್‌ ವಂಚಕರು ಬೀಳಿಸಿಕೊಳ್ಳುವ ಮೂಲಕ ಹಣ ದೋಚುತ್ತಿರುವುದು ಹೆಚ್ಚಾಗುತ್ತಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

RELATED ARTICLES

Latest News