Saturday, April 18, 2026
Homeಆರೋಗ್ಯ / ಜೀವನಶೈಲಿಪಾರ್ಶ್ವವಾಯು ಬಳಿಕ ಚೇತರಿಕೆಗೆ ಹೋಮಿಯೋಪತಿ ಸಹಾಯವಾಗಬಹುದೇ..?

ಪಾರ್ಶ್ವವಾಯು ಬಳಿಕ ಚೇತರಿಕೆಗೆ ಹೋಮಿಯೋಪತಿ ಸಹಾಯವಾಗಬಹುದೇ..?

an Homeopathy Help in Recovery After a Stroke?

ಡಾ.ಕುಶಾಲ್ ಬ್ಯಾನರ್ಜಿ ( ಹೋಮಿಯೋಪತಿ ಹಿರಿಯ ವೈದ್ಯರು, ಡಾ.ಕಲ್ಯಾಣ್ ಬ್ಯಾನರ್ಜೀಸ್ ಕ್ಲಿನಿಕ್)
ಪಾರ್ಶ್ವವಾಯು ಎಂದ ಕೂಡಲೇ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುವುದು ಸಹಜ. ಪಾರ್ಶ್ವವಾಯುನಿಂದ ಗೆದ್ದ ಬಳಿಕ ಕುಟುಂಬದ ಸದಸ್ಯರು ಮತ್ತು ಜನ ನಿಟ್ಟುಸಿರು ಬಿಡುತ್ತಾರೆ. ಅದರೆ ಪಾರ್ಶ್ವವಾಯುನಿಂದ ಬದುಕುಳಿದ ವ್ಯಕ್ತಿ ಮೊದಲಿನಂತೆ ದೇಹ ಸ್ಥಿತಿ ಮರುಕಳಿಸುವುದಿಲ್ಲ.

ಸಾಮಾನ್ಯದ ಕ್ರಿಯೆಗಳಾದ ಕಪ್ ಹಿಡಿಯುವುದು ಕಷ್ಟಕರ, ವಕ್ರವಾಗಿ ನಡೆದಾಡುವಿಕೆ, ಅಸ್ಪಷ್ಟ ಮಾತು, ಹಠಾತ್ ಬೀಳುವಿಕೆ, ದೈಹಿಕ ಹೋರಾಟದಲ್ಲಿ ತೊಂದರೆಗಳಾಗುವುದು ಪಾರ್ಶ್ವವಾಯುಯಿಂದ ಆಗುವ ತೊಂದರೆಗಳಾಗಿವೆ. ಪಾರ್ಶ್ವವಾಯು ಒಳಗಾದ ವ್ಯಕ್ತಿಗೆ ಭಯ, ಅಸಹನೆ, ದುಃಖ, ನೆನಪಿನ ದುರ್ಬಲತೆ ಮತ್ತು ಸ್ವಾತಂತ್ರ್ಯ ಕಳೆದುಕೊಂಡಿ ಭಾವನೆ ಮೂಡುವುದು ಸಹಜ. ಹಲವಾರು ಮಂದಿ ಪಾರ್ಶ್ವವಾಯುನಿಂದ ಬದುಕುಳಿದವರು “ನಾನು ಹಿಂದಿನಂತಿಲ್ಲ ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.

ಪಾರ್ಶ್ವವಾಯು ಗೆದ್ದ ನಂತರ ಫಿಸಿಯೋಥೆರಪಿ, ಸ್ಪೀಚ್ ಥೆರಪಿ ಮತ್ತು ನಿಯಮಿತ ವೈದ್ಯಕೀಯ ಆರೈಕೆ ಅತ್ಯಂತ ಅಗತ್ಯ. ಆದರೆ ಭಾವನಾತ್ಮಕ ಮತ್ತು ಮಾನಸಿಕವಾಗಿ ಗುಣಮುಖರಾಗುವುದು ತಡವಾಗುತ್ತದೆ. ಮನಸ್ಥಿತಿ ಬದಲಾವಣೆಗಳು, ಮತ್ತೊಮ್ಮೆ ಪಾರ್ಶ್ವವಾಯು ಆಗಬಹುದೆಂಬ ಆತಂಕ, ನಿದ್ರಾಹೀನತೆ, ಹಾಗೆಯೇ ಮನೋವ್ಯಾಧಿ ಸಹ ಸಾಮಾನ್ಯ. ಮನಸ್ಸು ಭಾರವಾಗಿದ್ದರೆ, ದೇಹದ ಚೇತರಿಕೆಯೂ ನಿಧಾನವಾಗಬಹುದು. ದೇಹದ ಚೇತರಿಕೆ ನಿಧಾನವಾಗುವುದು ಅಥವಾ ಒಂದು ಹಂತದಲ್ಲಿ ನಿಂತಂತೆ ಕಾಣಿಸುವುದು ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳು—ಇವುಗಳ ಕಾರಣದಿಂದ ಹಲವಾರು ರೋಗಿಗಳು ಮತ್ತು ಅವರ ಕುಟುಂಬಗಳು ಪರ್ಯಾಯ ವೈದ್ಯಕೀಯ ಪದ್ಧತಿಗಳತ್ತ ಗಮನ ಹರಿಸುತ್ತಾರೆ.

ಹೋಮಿಯೋಪತಿಯಲ್ಲಿ ಪಾರ್ಶ್ವವಾಯುವಿಗೆ ಔಷಧಿಗಳು ಇವೆ. ಅವು ತೀವ್ರ ಮತ್ತು ದೀರ್ಘಕಾಲಿಕ ನರ ಸಂಬಂಧಿತ ಸಮಸ್ಯೆಗಳಿಗೂ ಉಪಯೋಗವಾಗಬಹುದು ಎಂದು ಹೇಳಲಾಗುತ್ತದೆ. ಇದು ಕೇವಲ ದುರ್ಬಲವಾದ ಸ್ನಾಯುಗಳು ಅಥವಾ ನರ ಹಾನಿಯನ್ನಷ್ಟೇ ಗಮನಿಸುವುದಿಲ್ಲ. ವ್ಯಕ್ತಿಯನ್ನು ಸಮಗ್ರವಾಗಿ ಪರಿಗಣಿಸುತ್ತದೆ. ಅವರು ಭಾವನಾತ್ಮಕವಾಗಿ ಹೇಗಿದ್ದಾರೆ, ಹೇಗೆ ನಿದ್ರೆ ಮಾಡುತ್ತಾರೆ, ಶಕ್ತಿಯ ಮಟ್ಟ ಹೇಗೆ ಬದಲಾಗುತ್ತದೆ, ಮತ್ತು ಪಾರ್ಶ್ವವಾಯು ನಂತರ ಅವರ ವ್ಯಕ್ತಿತ್ವದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನೂ ಒಳಗೊಂಡಿದೆ. ಪ್ರತಿ ಪಾರ್ಶ್ವವಾಯು ಅನುಭವವೂ ವಿಭಿನ್ನ. ಕೆಲವರು ದೇಹದ ಒಂದು ಭಾಗದಲ್ಲಿ ಗಟ್ಟಿತನ ಅಥವಾ ಸುಮ್ಮನಾಗಿರುವ ಭಾವನೆ ಅನುಭವಿಸಬಹುದು. ಕೆಲವರಿಗೆ ನಿರಂತರ ದಣಿವು ಕಾಡಬಹುದು. ಇನ್ನೂ ಕೆಲವರು ಅತಿಯಾಗಿ ಭಾವನಾತ್ಮಕ ಖಿನ್ನತೆಗೆ ಒಳಗಾಗಿರಬಹುದು. ಇಂತಹ ಲಕ್ಷಣಗಳಿಗೆ ಹೋಮಿಯೋಪಥಿಕ್ ಚಿಕಿತ್ಸೆ ಸಹಕಾರಿಯಾಗಲಿದೆ ಎಂದು ಕೆಲವರು ನಂಬುತ್ತಾರೆ.

ದೈಹಿಕವಾಗಿ, ಸ್ನಾಯು ಗಟ್ಟಿತನ, ದುರ್ಬಲತೆ, ದೇಹ ಬೆವರುವಿಕೆ ಮತ್ತು ನರ ಸಂಬಂಧಿತ ಅಸ್ವಸ್ಥತೆಗಳಿಗೆ, ಥೆರಪಿಯ ಜತೆಗೆ ಹೋಮಿಯೋಪಥಿಯನ್ನು ಬಳಸಬಹುದು ಎಂದು ಹೇಳಲಾಗುತ್ತದೆ. ಸಾಮಾನ್ಯ ಚಿಕಿತ್ಸೆಯ ನಂತರ ನಿಂತಂತಾಗಿದ್ದ ಚಲನೆಯ ವ್ಯಾಪ್ತಿ ಅಥವಾ ಮಾತಿನ ಸುಧಾರಣೆ, ಹೋಮಿಯೋಪಥಿ ಪ್ರಾರಂಭಿಸಿದ ನಂತರ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಕೆಲವರು ತಿಳಿಸಿದ್ದಾರೆ. ಆರಂಭಿಕ ಹಂತದಲ್ಲೇ ಹೋಮಿಯೋಪಥಿಯನ್ನು ಥೆರಪಿ ಜೊತೆ ಪಡೆದರೆ ಹೆಚ್ಚು ಲಾಭವೂ ಇದೆ.

ಪಾರ್ಶ್ವವಾಯು ನಂತರ ಆತ್ಮವಿಶ್ವಾಸ ಕುಸಿಯಬಹುದು. ಒಮ್ಮೆ ಚುರುಕಾಗಿ ಇದ್ದವರು ಅಸಹಾಯಕರಂತೆ ಭಾವಿಸಬಹುದು. ಬೀಳುವ ಭಯ, ಮತ್ತೊಮ್ಮೆ ಪಾರ್ಶ್ವವಾಯು ಆಗುವ ಭಯ ಮತ್ತು ಅಸಹನೆ ಇಂತಹ ದೌರ್ಬಲ್ಯಗಳು ಕಾಡುತ್ತದೆ. ಹೋಮಿಯೋಪತಿ ವೈದ್ಯರು ಈ ಭಾವನಾತ್ಮಕ ಬದಲಾವಣೆಗಳಿಗೆ ಹೆಚ್ಚಿನ ಗಮನ ನೀಡಿ, ಮನಶಾಂತಿ ಪುನಃಸ್ಥಾಪನೆ, ನಿದ್ರೆ ಸುಧಾರಣೆ ಮತ್ತು ಕಡಿಮೆ ಮನಸ್ಥಿತಿಯನ್ನು ಉನ್ನತಿಗೆ ಚಿಕಿತ್ಸೆ ನೀಡಲಿದ್ದಾರೆ.

ಮತ್ತೊಂದು ಸಾಮಾನ್ಯ ಸಮಸ್ಯೆ ದಣಿವು. ಚಿಕ್ಕ ಚಿಕ್ಕ ಕಾರ್ಯಗಳೂ ಬಹಳ ಶ್ರಮದಾಯಕವಂತೆ ಆಯಾಸ. ನಿದ್ರೆಯ ಗುಣಮಟ್ಟ ಕಡಿಮೆಯಾಗಬಹುದು. ರಾತ್ರಿ ವೇಳೆ ನೆಮ್ಮದಿ ಇಲ್ಲದ ನಿದ್ರೆ ಅಥವಾ ಪದೇ ಪದೇ ಎಚ್ಚರವಾಗುವುದು ಸಾಮಾನ್ಯ. ಸರಿಯಾದ ವಿಶ್ರಾಂತಿ ದೊರಕದಿದ್ದರೆ ಕಷ್ಟವಾಗುತ್ತದೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹೋಮಿಯೋಪತಿ ಆರೈಕೆ ಸಾಮಾನ್ಯವಾಗಿ ಮೊದಲು ನಿದ್ರೆ ಮತ್ತು ಶಕ್ತಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತದೆ ಎಂದು ಹೇಳಲಾಗುತ್ತದೆ.

ಪಾರ್ಶ್ವವಾಯು ಚಿಕಿತ್ಸೆಗೆ ಹೋಮಿಯೋಪಥಿಕ್ ವ್ಯಾಪ್ತಿ ಮತ್ತು ಮಿತಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಸಾಂಪ್ರದಾಯಿಕ ಚಿಕಿತ್ಸೆಯಂತೆ, ಹೋಮಿಯೋಪತಿಯೂ ಎಲ್ಲ ರೀತಿಯ ಹಾನಿಯನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಅಲ್ಲ. ಪಾರ್ಶ್ವವಾಯುನ ತೀವ್ರತೆಯಿಂದ ಚೇತರಿಕೆಗೆ, ಮೆದುಳಿನ ಯಾವ ಭಾಗ ಪ್ರಭಾವಿತವಾಗಿದೆ, ಇತರ ಕಾಯಿಲೆಗಳು, ಆರಂಭಿಕ ಚಿಕಿತ್ಸೆ, ವಯಸ್ಸು ಮತ್ತು ಇನ್ನೂ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಹೋಮಿಯೋಪತಿ ಚಿಕಿತ್ಸೆಯ ನಿರ್ವಹಣೆಯಲ್ಲಿ ತೊಡಗಿರುವ ವೈದ್ಯರು ಅನುಭವಿಗಳಾಗಿದ್ದು, ಪಾರ್ಶ್ವವಾಯುನಿಂದ ಉಂಟಾಗುವ ವಿವಿಧ ಸಮಸ್ಯೆಗಳ ವ್ಯಾಪ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ ಫಲಿತಾಂಶಗಳು ಉತ್ತಮವಾಗಿರಬಹುದು.

ಪಾರ್ಶ್ವವಾಯು ನಂತರದ ಜೀವನವು ಕೇವಲ ಚಲನವಲನವನ್ನು ಮರಳಿ ಪಡೆಯುವುದರ ಬಗ್ಗೆ ಮಾತ್ರವಲ್ಲ. ಅದು ಆತ್ಮವಿಶ್ವಾಸ, ಭಾವನಾತ್ಮಕ ಬಲ ಮತ್ತು ದಿನನಿತ್ಯದ ಕ್ಷಣಗಳನ್ನು ಮತ್ತೆ ಆನಂದಿಸುವ ಸಾಮರ್ಥ್ಯವನ್ನು ಪುನರ್ನಿರ್ಮಿಸುವ ಪ್ರಯಾಣವಾಗಿದೆ. ಹೋಮಿಯೋಪಥಿ ಒಂದು ನಂಬಿಕೆಯ ಚಿಕಿತ್ಸೆಯಾಗಿದೆ. ದೇಹದ ಗುಣಮುಖತೆಯ ಜೊತೆಗೆ ಮನಸ್ಸಿನ ಚೇತರಿಕೆಗೆ ಸಹ ಬೆಂಬಲ ನೀಡುತ್ತದೆ.

RELATED ARTICLES

Latest News