ಬೆಂಗಳೂರು,ಮಾ.9- ಟಿ-20 ವಿಶ್ವಕಪ್ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡವನ್ನು ಕೇಂದ್ರದ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ.
ಅಹಮದಾಬಾದ್ ನಗರದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಿ-20 ವಿಶ್ವಕಪ್ ಫೈನಲ್ ಪಂದ್ಯವು ಅವಿಸರಣೀಯ ನೆನಪುಗಳು ಹಾಗೂ ಸುಂದರ ಕ್ಷಣಗಳಿಗೂ ಸಾಕ್ಷಿಯಾಯಿತು ಎಂದು ಅವರು ಹೇಳಿದ್ದಾರೆ.
ಶ್ರೇಷ್ಠ ಕ್ರಿಕೆಟ್ ಅನ್ನು ಆಸ್ವಾದಿಸುವುದು ಯಾವಾಗಲೂ ಆನಂದವೇ ಸರಿ. ಇಂತಹ ಪರಂಪರೆ ಮುಂದುವರೆದಿದೆ. ನಾಯಕ ಸೂರ್ಯಕುಮಾರ್ ಅವರ ನೇತೃತ್ವದ ಟೀಂ ಇಂಡಿಯಾದ ಒಗ್ಗಟ್ಟಿನ ತಂಡ ಸ್ಪೂರ್ತಿ ಆಟವು ಮನಸ್ಸಿಗೆ ಮುದ ನೀಡಿತು ಎಂದು ಅವರು ಶ್ಲಾಘಿಸಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ತಂಡವು ವಿಜಯಕ್ಕೆ ಖಂಡಿತವಾಗಿಯೇ ಅರ್ಥ ತಂದುಕೊಟ್ಟಿತು. ಇಂತಹ ಗೆಲುವು ತಂದುಕೊಟ್ಟ ನಮ ಹೆಮೆಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಮ ಎಕ್‌್ಸ ಖಾತೆಯಲ್ಲಿ ತಿಳಿಸಿದ್ದಾರೆ.
