ನಿತ್ಯ ನೀತಿ : ಸುಳ್ಳಿನಿಂದ ಬೆಳೆದವರು ಹುಲ್ಲಿನಂತೆ, ಎಷ್ಟು ಬೇಗ ಬೆಳೆಯುತ್ತಾರೆ ಅಷ್ಟೇ ವೇಗವಾಗಿ ಸುಟ್ಟು ಹೋಗುತ್ತಾರೆ. ಸತ್ಯದಿಂದ ಬೆಳೆದವರು ಆಲದ ಮರದಂತೆ, ಬೆಳೆಯುವುದು ನಿಧಾನವಾದರೂ ಬೆಳೆದ ನಂತರ ಅವರ ವೌಲ್ಯ ಅಪಾರ ಸಂಖ್ಯೆಯಲ್ಲಿರುತ್ತದೆ.
ಪಂಚಾಂಗ : ಮಂಗಳವಾರ, 10-03-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಫಾಲ್ಗುಣ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಅನುರಾಧಾ / ಯೋಗ: ಹರ್ಷಣ / ಕರಣ: ವಿಷ್ಟಿ
ಸೂರ್ಯೋದಯ – 06.32
ಸೂರ್ಯಾಸ್ತ – 6.30
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಒಳಿತು.
ವೃಷಭ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಮಿಥುನ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.
ಕಟಕ: ಹಿತಶತ್ರುಗಳಿಂದ ದೂರವಿದ್ದರೆ ಒಳಿತು.
ಸಿಂಹ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಯಾಗುವ ಸಾಧ್ಯತೆಗಳಿವೆ.
ಕನ್ಯಾ: ನೀವು ಕಂಡ ಕನಸು ಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.
ತುಲಾ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ. ಹಣಕಾಸಿನ ಸಂಸ್ಥೆಯವರಿಗೆ ಅಧಿಕ ಒತ್ತಡ.
ವೃಶ್ಚಿಕ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ಧನುಸ್ಸು: ಹಿರಿಯರ ಆಶೀರ್ವಾದ ಸದಾ ಕಾಲ ನಿಮೊಂದಿಗಿರುತ್ತದೆ. ಉದ್ಯೋಗದಲ್ಲಿ ಲಾಭ ಸಿಗಲಿದೆ.
ಮಕರ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಕುಂಭ: ಪ್ರಯತ್ನಗಳು ಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ಮೀನ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
