Thursday, April 30, 2026
Homeರಾಜಕೀಯಅಹಿಂದ ರಾಜಕೀಯ : ಸಿಎಂ ಸಿದ್ದರಾಮಯ್ಯ ವಿರುದ್ಧ ಅಶೋಕ್‌ ವಾಗ್ದಾಳಿ

ಅಹಿಂದ ರಾಜಕೀಯ : ಸಿಎಂ ಸಿದ್ದರಾಮಯ್ಯ ವಿರುದ್ಧ ಅಶೋಕ್‌ ವಾಗ್ದಾಳಿ

Ahinda Politics: Ashok lashes out at CM Siddaramaiah

ಬೆಂಗಳೂರು,ಮಾ.23- ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ನಿಮ ಕೊಡುಗೆಯಾದರೂ ಏನು ಸ್ವಾಮಿ? ಇವರ ಹೆಸರಿನಲ್ಲಿ ಅಹಿಂದ ರಾಜಕೀಯ ಮಾಡಿ, ವೋಟು ಗಿಟ್ಟಿಸಿಕೊಂಡು ಅಧಿಕಾರದ ಮೋಜು ಮಾಡಿದ್ದು ಬಿಟ್ಟರೆ ತಮ್ಮ ಸಾಧನೆಯಾದರೂ ಏನು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು Xನಲ್ಲಿ ಪೋಸ್ಟ್‌ ಮಾಡಿರುವ ಅವರು, ಪರಿಶಿಷ್ಟರಿಗೆಲ್ಲಿದೆ ಎಸ್‌‍ಎಸಿಎಸ್‌‍ಪಿ ಟಿಎಸ್‌‍ಪಿ ಅನುದಾನ ಗ್ಯಾರಂಟಿ 4 ವರ್ಷಗಳಲ್ಲಿ 53,000 ಕೋಟಿ ದಲಿತರ ಹಣ ವಂಚಿಸಿದ ಕಾಂಗ್ರೆಸ್‌‍ ಸರ್ಕಾರ! 2023-24ನೇ ಸಾಲಿನಲ್ಲಿ 11,114 ಕೋಟಿ, 2024-25ನೇ ಸಾಲಿನಲ್ಲಿ 14,282.38 ಕೋಟಿ, 2025-26ನೇ ಸಾಲಿನಲ್ಲಿ 13,433 ಕೋಟಿ, 2026-27ನೇ ಸಾಲಿನಲ್ಲಿ 14,198.93 ಕೋಟಿ ಎಂದು ಅಂಕಿ ಸಂಖ್ಯೆಗಳ ವಿವರ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ ದೇವರಾಜ ಅರಸು ಅವರ ಮುಖ್ಯಮಂತ್ರಿ ಅಧಿಕಾರಾವಧಿಯ ರೆಕಾರ್ಡ್‌ ಮುರಿದಿದ್ದೀರಿ. ಆದರೆ ನಿಮ ರಾಜಕೀಯ ಜೀವನದ ಅತ್ಯಂತ ದೊಡ್ಡ ದಾಖಲೆ ಅಂದರೆ ಪರಿಶಿಷ್ಟರ ಹಣವನ್ನು ಅವರ ಕಲ್ಯಾಣಕ್ಕೆ ವಿನಿಯೋಗಿಸದೆ ವಂಚಿಸಿದ್ದು ಎಂದು ವ್ಯಂಗ್ಯವಾಡಿದ್ದಾರೆ.

ಎಷ್ಟು ವರ್ಷ ಕುರ್ಚಿಯಲ್ಲಿ ಕೂತಿದ್ದೀರಿ ಎನ್ನುವ ರೆಕಾರ್ಡ್‌ಗಿಂತ, ಕುರ್ಚಿಯಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ಏನು ಮಾಡಿದ್ದೀರಿ ಎನ್ನುವ ಟ್ರ್ಯಾಕ್‌ ರೆಕಾರ್ಡ್‌ ಮುಖ್ಯ. ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಾದ ಹಣವನ್ನು ಕಬಳಿಸಿ ಅನ್ಯಾಯ ಮಾಡುತ್ತಿದೆ ಈ ದಲಿತ ವಿರೋಧಿ ಕಾಂಗ್ರೆಸ್‌‍ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದು ಪೋಸ್ಟ್‌ ನಲ್ಲಿ ಈ ನಾಲಾಯಕ್‌ ಕಾಂಗ್ರೆಸ್‌‍ ಸರ್ಕಾರದ ದುರಾಡಳಿತದಲ್ಲಿ ಶಾಲಾ ಮಕ್ಕಳು ನೀರಿಗಾಗಿ ತಮ ಬೋರ್‌ವೆಲ್‌ ತಾವೇ ಕೊರೆದುಕೊಳ್ಳಬೇಕು. ನಾಗರಿಕರು ರಸ್ತೆಗುಂಡಿಗಳನ್ನು ತಾವೇ ಮುಚ್ಚಿಕೊಳ್ಳಬೇಕು. ಈ ದರಿದ್ರ ಕಾಂಗ್ರೆಸ್‌‍ ಸರ್ಕಾರ ಬದುಕಿದ್ದರೂ, ಕನ್ನಡಿಗರ ಪಾಲಿಗೆ ಸತ್ತಂತೆ ಎಂದು ಅಶೋಕ್‌ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Latest News