ಚಿತ್ರದುರ್ಗ,ಏ.3- ಕಳೆ ಮೂರು ದಿನಗಳ ಹಿಂದ ನಾಪತ್ತೆಯಾಗಿದ್ದ ರೈತ ಮೋರ್ಚಾ ಮುಖಂಡ ಶಿವಲಿಂಗಪ್ಪ (50) ಅವರ ಶವ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾಗಿದೆ. ಚಿತ್ರದುರ್ಗದಲ್ಲಿ ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ಶಿವಲಿಂಗಪ್ಪ ,ಕಾಂಗ್ರೆಸ್ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು.
ಸಂಬಂಧಿಗಳು, ಸ್ನೇಹಿತರು ಹಾಗೂ ನೆಂಟರಿಷ್ಟರ ಮನೆಗಳಲ್ಲಿ ವಿಚಾರಿಸಿದರೂ ಶಿವಲಿಂಗಪ್ಪ ಪತ್ತೆಯಾಗಿರಲಿಲ್ಲ. ಅವರ ಸೋದರ ಅಳಿಯ ಬಸವರಾಜ್ ಚಿತ್ರದುರ್ಗದ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಕಳೆದ ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ನಗರದ ಮಹೇಶ್ವರಿ ಲೇಔಟ್ ಇರುವ ಬಗ್ಗೆ ಅವರ ಮೊಬೈಲ್ ಲೊಕೇಶನ್ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ನಂತರ ಮೊಬೈಲ್ ಸ್ವಿಚ್‌್ಡ ಆಫ್ ಆಗಿತ್ತು ಆದರೆ ಈಗ ಆದೇ ಸ್ಥಳದಲ್ಲೇ ಶವವಾಗಿ ಪತ್ತೆಯಾಗಿರೋದು ಅವರ ಕುಟುಂಬಸ್ಥರಲ್ಲಿ ಬಾರೀ ಅನುಮಾನಕ್ಕೆ ಕಾರಣವಾಗಿದೆ.
ಅವರ ಮುಖ ಗುರುತು ಸಿಗದೆ ಸಂಪೂರ್ಣ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದು ಕೊಲೆ ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ ಮೂರು ದಿನದ ಹಿಂದೆಯೇ ಅವರು ಮೃತಪಟ್ಟಿರಬಹುದು ಘಟನೆಯ ಕುರಿತು ಎಲ್ಲಾ ಆಯಾಮದಿಂದ ತನಿಉಖೆ ನಡೆಸಲಾಗುವುದು ಎಂದು ಹೇಳಿದರು.
