ಬೆಂಗಳೂರು, ಮೇ.2- ಇಂದು ನಿಮ್ಮ ಮೊಬೈಲ್ ಫೋನ್ ಜೋರಾಗಿ ಬೀಪ್ ಮಾಡಿದರೆ ಅಥವಾ ಅನಿರೀಕ್ಷಿತ ಮೆಸೇಜ್ ಬಂದರೆ ಭಯಪಡಬೇಡಿ. ಅದು ತುರ್ತು ಎಚ್ಚರಿಕೆಯ ಸಂದೇಶವಾಗಿರುತ್ತದೆ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸರ್ಕಾರ ಪರೀಕ್ಷಿ ಸುತ್ತಿರುವುದರಿಂದ
ಇಂದು ನಿಮ ಮೊಬೈಲ್ ಫೋನ್‌ಗಳಿಗೆ ಈ ರೀತಿಯ ಮೆಸೆಜ್ ಬರಬಹುದು ಅದಕ್ಕೆ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪ ಬಂದಾಗ ತನ್ನ ನಾಗರಿಕರನ್ನು ರಕ್ಷಿಸಲು ಭಾರತ ತನ್ನದೇ ಆದ ಎಚ್ಚರಿಕೆ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಹೆಸರಿನ ಈ ಸಿಸ್ಟಮ್ ಪ್ರಸ್ತುತ ದೇಶಾದ್ಯಂತ ಪರೀಕ್ಷೆಯಲ್ಲಿದೆ.
ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ನಾಗರಿಕರ ಮೊಬೈಲ್‌ಗಳಿಗೆ ನೇರವಾಗಿ ಸಂದೇಶ ಬಿತ್ತರಿಸುವ ಸೆಲ್ ಬ್ರಾಡ್‌ಕಾಸ್ಟ್ ಸೇವೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಅದರ ಭಾಗವಾಗಿ ಇಂದು ನಗರದ ನಾಗರಿಕರ ಮೊಬೈಲ್‌ಗಳಿಗೆ ನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಫ್ಲ್ಯಾಶ್ ಎಸ್‌ಎಂಎಸ್ ಸಂದೇಶ ಬರಬಹುದು. ಅದಕ್ಕೆ ಯಾರೂ ಆತಂಕಪಡಬೇಕಿಲ್ಲ.
ಪ್ರಕೃತಿ ವಿಕೋಪ ಮತ್ತು ತುರ್ತು ಸಂದರ್ಭಗಳಲ್ಲಿ ಸರ್ಕಾರವು ಸಕಾಲಿಕ ಮಾಹಿತಿಯನ್ನು ಒದಗಿಸಲು ಇದು ಸಹಕಾರಿಯಾಗಿರಲಿದೆ.ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅದರ ಸನ್ನದ್ಧತೆಯ ಭಾಗವಾಗಿ, ಸರ್ಕಾರವು ಸ್ಥಳೀಯ ಪ್ರಸಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ದೇಶಾದ್ಯಂತ ಈ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತಿದೆ.
ಸರ್ಕಾರವು ಈ ವ್ಯವಸ್ಥೆಯನ್ನು ಈ ಹಿಂದೆಯೂ ಕೆಲವು ಬಾರಿ ಪರೀಕ್ಷಿಸಿದೆ. ಆದರೆ, ಇದನ್ನು ರಾಷ್ಟ್ರವ್ಯಾಪಿ ಜಾರಿಗೆ ತರುವ ಮೊದಲು ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ನಿರ್ಣಯಿಸುವ ಸಲುವಾಗಿ ಮತ್ತೊಂದು ಪರೀಕ್ಷೆ ನಡೆಸುತ್ತಿದೆ.
