Homeರಾಜ್ಯಮೇ 5 ರಿಂದ 8 ರವರೆಗೆ ಪೀಣ್ಯ ಫ್ಲೈಓವರ್‌ ಸಂಚಾರ ನಿರ್ಬಂಧ

ಮೇ 5 ರಿಂದ 8 ರವರೆಗೆ ಪೀಣ್ಯ ಫ್ಲೈಓವರ್‌ ಸಂಚಾರ ನಿರ್ಬಂಧ

Traffic restrictions on Peenya flyover from May 5 to 8

ಬೆಂಗಳೂರು,ಮೇ 2- ಪೀಣ್ಯಫ್ಲೈಓವರ್‌ ಮೇಲೆ ಅಳವಡಿಸಲಾದ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣ ಗೊಂಡಿದ್ದು, ಅವುಗಳ ಸಮಗ್ರತೆಯನ್ನು ಪರಿಶೀಲಿಸುವ ಸಲುವಾಗಿ ಅಂತಿಮವಾಗಿ ನಾಲ್ಕು ದಿನಗಳ ಕಾಲ ಲೋಡ್‌ ಟೆಸ್ಟಿಂಗ್‌ ನಡೆಸುವ ಹಿನ್ನೆಲೆಯಲ್ಲಿ ಫ್ಲೈಓವರ್‌
ಮೇಲೆ ಮೇ 5 ರಿಂದ 8 ರ ವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕ ವಾಗಿ ನಿರ್ಬಂಧಿಸಲಾಗಿದೆ.

ಅಂದು ಬೆಳಗಿನ ಜಾವ 5 ಗಂಟೆಯಿಂದ ಮೇ 8 ರಂದು ಬೆಳಿಗ್ಗೆ 11 ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿ 4 ರ ಪೀಣ್ಯಾ ಎಲೆವೇಟೆಡ್‌ ಫ್ಲೈಓವರ್‌ ಮೇಲೆ ಕೆನ್ನಮೆಟಲ್‌ ವಿಡಿಯಾ ಅಪ್ಪರ್‌ ರ್ಯಾಂಪ್‌ ಎಸ್‌‍ಆರ್‌ಎಸ್‌‍ ಡೌನ್‌ ರ್ಯಾಂಪ್‌ ವರೆಗೆ ಎರಡು ಕಡೆಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗ:
ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್‌ ಫ್ಯಾಕ್ಟರಿ ಹತ್ತಿರ ಫ್ಲೈಓವರ್‌ನ ಕೆಳಭಾಗದ ಎನ್‌ಹೆಚ್‌-4 ಮತ್ತು ಸರ್ವಿಸ್‌‍ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌‍, ಪೀಣ್ಯಾ ಪೊಲೀಸ್‌‍ ಠಾಣೆ ಜಂಕ್ಷನ್‌, ಎಸ್‌‍ಆರ್‌ಎಸ್‌‍ ಜಂಕ್ಷನ್‌ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ.

ಸಿಎಂಟಿಐ ನಿಂದ ನೆಲಮಂಗಲ ಕಡೆಗೆ ಹೋಗುವ ವಾಹನಗಳು ಫ್ಲೈಓವರ್‌ ಕೆಳಭಾಗದ ಎನ್‌ಹೆಚ್‌-4 ಮತ್ತು ಸರ್ವಿಸ್‌‍ ರಸ್ತೆ ಮೂಲಕ ಎಸ್‌‍ಆರ್‌ಎಸ್‌‍ ಜಂಕ್ಷನ್‌, ಪೀಣ್ಯಾ ಪೊಲೀಸ್‌‍ ಠಾಣೆ ಜಂಕ್ಷನ್‌, ಜಾಲಹಳ್ಳಿ ಕ್ರಾಸ್‌‍, ದಾಸರಹಳ್ಳಿ, 8ನೇ ಮೈಲಿ ಮಾರ್ಗವಾಗಿ ಪಾರ್ಲೆ ಜಿ ಟೋಲ್‌ ತಲುಪಬಹುದಾಗಿದೆ.

ಪೀಣ್ಯಾ ಮೇಲ್ಸೇತುವೆ ಮೂಲಕ ಸಾಗುವ ವಾಹನಗಳ ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೋರಿಕೆ ಮೇರೆಗೆ ಈ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
spot_img

Latest News