ನಿತ್ಯ ನೀತಿ : ಯಶಸ್ಸು ಎನ್ನುವುದು ಒಂದೇ ದಿನದ ಫಲವಲ್ಲ; ಪ್ರತಿದಿನ ನೀನು ಹಾಕಿರುವ ಸಣ್ಣ ಸಣ್ಣ ಪ್ರಯತ್ನಗಳ ಒಟ್ಟಾರೆ ಫಲ ಅದು.
ಪಂಚಾಂಗ : ಭಾನುವಾರ, 05-04-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ
ಪಕ್ಷ: ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ವಿಶಾಖಾ / ಯೋಗ: ವಜ್ರ / ಕರಣ: ಭವ
ಸೂರ್ಯೋದಯ – 06.15
ಸೂರ್ಯಾಸ್ತ – 6.32
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಕಾಡಬಹುದು. ದಾಂಪತ್ಯದಲ್ಲಿ ಅಪನಂಬಿಕೆ.
ವೃಷಭ: ಕೆಲಸದಲ್ಲಿ ಬಡ್ತಿ ಸಿಗಬಹುದು ಹಾಗೂ ಪ್ರಗತಿ ಪಥದೆಡೆಗೆ ಜೀವನ ಸಾಗಬಹುದು.
ಮಿಥುನ: ವ್ಯಾಪಾರಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಉತ್ತಮ ಫಲ ಪಡೆಯುವರು.
ಕಟಕ: ಕೆಲ ಜನರು ನಿಮ್ಮನ್ನು ನೋಡಿ ಅಸೂಯೆ ಪಡೆಯಬಹುದು. ಖರ್ಚು ಹೆಚ್ಚಾಗುವ ಸಂಭವವಿದೆ.
ಸಿಂಹ: ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಹಿರಿಯರಿಂದ ಮನ್ನಣೆ ಸಿಗಲಿದೆ.
ಕನ್ಯಾ: ಹೊಸ ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ.
ತುಲಾ: ನಿಮಗೆ ಬರಬೇಕಾದ ಹಳೇ ಬಾಕಿ ಇದ್ದಲ್ಲಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮ್ಮನ್ನು ಕಾಡಲಿದೆ.
ಧನುಸ್ಸು: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಲವು ಮೂಲಗಳಿಂದ ಅನುಕೂಲ ಒದಗಿಬರಲಿವೆ.
ಮಕರ: ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ವಾದ ದಿನವಾಗಿದೆ. ಧೈರ್ಯ ಹೆಚ್ಚಾಗಿರುತ್ತದೆ.
ಕುಂಭ: ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ.
ಮೀನ: ಕಾಫಿ ಮತ್ತು ಅಡಿಕೆ ಕೃಷಿಕರಿಗೆ ಹೆಚ್ಚಿನ ಲಾಭ ಸಿಗಲಿದೆ. ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ ಸಾಧಿಸುವಿರಿ.
