ಬುಡಾಪೆಸ್ಟ್, ಏ.9- ಚಾಟ್ ಜಿಪಿಟಿ ಬಳಸಿ ಇರಾನ್ ಬರೆದ ಪ್ರಸ್ತಾವನೆಯನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.ಹಂಗೇರಿ ರಾಜಧಾನಿ ಬುಡಾಪೆಸ್ಟ್ನಿಂದ ಹೊರಡುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇರಾನ್ ಒಟ್ಟು ಮೂರು ರೀತಿಯ 10 ಅಂಶಗಳ (10- ) ಶಾಂತಿ ಪ್ರಸ್ತಾವನೆಗಳನ್ನು ಕಳುಹಿಸಿದೆ. ಈ ಪೈಕಿ ಮೊದಲನೆಯ ಆವೃತ್ತಿಯನ್ನು ಬಹುಶಃ ಚಾಟ್ ಜಿಪಿಟಿ ಬಳಸಿ ಬರೆದಿರಬಹುದು ಎಂದು ವ್ಯಾನ್್ಸ ಹೇಳಿದ್ದಾರೆ.
ಆ ಪ್ರಸ್ತಾವನೆಯು ತೀರ ಸಾಮಾನ್ಯವಾದ ಅಂಶಗಳನ್ನು ಹೊಂದಿತ್ತು. ಗಂಭೀರತೆಯಿಂದ ಕೂಡಿಲ್ಲದ ಕಾರಣ ಅದನ್ನು ಕಸದ ಬುಟ್ಟಿಗೆ ಹಾಕಲಾಗಿದೆ ಎಂದು ಅವರು ಹೇಳಿದರು.ಇರಾನ್ ಕಳುಹಿಸಿದ ವಿಭಿನ್ನ ಆವೃತ್ತಿಗಳು ಸಂಧಾನ ಪ್ರಕ್ರಿಯೆಯಲ್ಲಿ ಗೊಂದಲ ಮೂಡಿಸಿವೆ. ಅದರಲ್ಲಿ ಕೆಲವೊಮ್ಮೆ ತೀವ್ರವಾದ ಬೇಡಿಕೆಗಳಿದ್ದರೆ, ಕೆಲವೊಂದು ಸಾಮಾನ್ಯ ವಿಚಾರಗಳಿವೆ ಎಂದು ಅವರು ತಿಳಿಸಿದರು.
ಸದ್ಯಕ್ಕೆ ಎರಡನೇ ಆವೃತ್ತಿಯ 10-ಅಂಶಗಳ ಪ್ರಸ್ತಾವನೆಯನ್ನು ಮಾತ್ರ ಅಮೆರಿಕ ಗಂಭೀರವಾಗಿ ಪರಿಗಣಿಸಿದ್ದು, ಇದು ಮುಂಬರುವ ಇಸ್ಲಾಮಾಬಾದ್ ಮಾತುಕತೆಗಳಿಗೆ ಆಧಾರವಾಗುವ ಸಾಧ್ಯತೆಯಿದೆ.ಅಮೆರಿಕ-ಇರಾನ್ ಮಧ್ಯೆ ಎರಡು ವಾರಗಳ ಕದನ ವಿರಾಮ ಘೋಷಣೆಯಾಗಿದ್ದು ಸಂಧಾನ ಮಾತುಕತೆಗಳು ಏಪ್ರಿಲ್ 11 ರಿಂದ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಪ್ರಾದೇಶಿಕವಾಗಿ ಭಯೋತ್ಪಾದಕ ಗುಂಪುಗಳಿಗೆ ನೀಡುತ್ತಿರುವ ಬೆಂಬಲವನ್ನು ಕೈಬಿಡಬೇಕು ಎನ್ನುವುದು ಅಮೆರಿಕದ ಪ್ರಮುಖ ಬೇಡಿಕೆ. ಈ ಬೇಡಿಕೆಯನ್ನು ಇರಾನ್ ಒಪ್ಪಿಕೊಳ್ಳುತ್ತ ಅನ್ನುವುದರ ಮೇಲೆ ಶಾಂತಿ ಮಾತುಕತೆ ನಡೆಯಲಿದೆ.
