Homeರಾಜ್ಯಬಿಎಸ್‌‍ವೈ ಅಭಿಮಾನೋತ್ಸವಕ್ಕೆ : 10 ಲಕ್ಷ ಜನರಿಗೆ ಊಟ, ತಿಂಡಿ ವ್ಯವಸ್ಥೆ

ಬಿಎಸ್‌‍ವೈ ಅಭಿಮಾನೋತ್ಸವಕ್ಕೆ : 10 ಲಕ್ಷ ಜನರಿಗೆ ಊಟ, ತಿಂಡಿ ವ್ಯವಸ್ಥೆ

BSY Abhimanotsava: Meals and snacks arranged for 10 lakh people

ಬೆಂಗಳೂರು,ಮೇ 8- ಕೋಟೆನಾಡು ಚಿತ್ರದುರ್ಗದಲ್ಲಿ ನಾಳೆ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬರಲಿರುವ ಲಕ್ಷಾಂತರ ಅಭಿಮಾನಿಗಳಿಗಾಗಿ ವಿವಿಧ ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸಲಾಗಿದೆ.

ಕಾರ್ಯಕ್ರಮ ಮುಗಿಯುವವರೆಗೂ ದಾಸೋಹ ನಡೆಯಲಿದ್ದು, ಸುಮಾರು 500 ಜನ ಬಾಣಸಿಗರು ಊಟ-ತಿಂಡಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಯಡಿಯೂರಪ್ಪ ಅಭಿಮಾನಿಗಳು ರಾಜ್ಯದ ಮೂಲೆಮೂಲೆಯಿಂದ ಚಿತ್ರದುರ್ಗಕ್ಕೆ ಬರುತ್ತಿರುವುದರಿಂದ ಅಡುಗೆ ವ್ಯವಸ್ಥೆಯನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಯಾರಿಗೂ ಊಟಕ್ಕೆ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ.

10 ಲಕ್ಷ ಜನರಿಗೆ ಊಟ, ತಿಂಡಿ ತಯಾರಿಸಲಾಗುತ್ತಿದ್ದು, ಅದಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಊಟ, ನೀರಿನ ಕೊರತೆಯಾಗದಂತೆ ನೀಡಿಕೊಳ್ಳುವ ಜವಾಬ್ದಾರಿಯನ್ನು ಪಕ್ಷ ಬೆಂಗಳೂರಿನ ಶಾಸಕರಿಗೆ ಮತ್ತು ಪ್ರಮುಖರಿಗೆ ವಹಿಸಿದೆ. ಅಡುಗೆಯವರು ಅಗತ್ಯ ಸಾಮಗ್ರಿಗಳೊಂದಿಗೆ ಬರಲಿದ್ದು, ಅವರಿಗೆ ಬೇಕಾದ ಸಹಾಯವನ್ನು ಕಾರ್ಯಕರ್ತರು ನೀಡುತ್ತಿದ್ದಾರೆ.

ನಾಳೆ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ಊಟದ ವ್ಯವಸ್ಥೆ ಮಾಡಲಾಗುವುದು. ಬಂದವರಿಗೆ ಸ್ವಯಂ ಸೇವಾ ಪದ್ಧತಿಯಡಿ ಊಟ ಬಡಿಸಲಾಗುವುದು. ಬೆಳಿಗ್ಗೆ ಟೊಮೆಟೊ ಬಾತ್‌, ಮೈಸೂರು ಪಾಕ್‌, ನೀರಿನ ಬಾಟಲಿ ನೀಡಲಾಗುವುದು. ಮಧ್ಯಾಹ್ನ 12ರ ನಂತರ ತರಕಾರಿ ಪಲಾವ್‌, ಮೊಸರನ್ನ, ಮೈಸೂರ್‌ಪಾಕ್‌ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಬಂದವರನ್ನು ಹಸಿದ ಹೊಟ್ಟೆಯಲ್ಲಿ ಹೋಗಬಾರದು.
ಊಟದ ಕೌಂಟರ್‌ಗಳ ಬಳಿ ಇಬ್ಬರು ಶಾಸಕರು, 120 ಜನ ಸ್ವಯಂ ಸೇವಕರು ಇರಲಿದ್ದಾರೆ. ಜನರಿಗೆ ಬಿಸಿಬಿಸಿ ಆಹಾರ ನೀಡಲಾಗುವುದು.

ಬಿ.ಎಸ್‌‍.ಯಡಿಯೂರಪ್ಪ ಅವರು ತಾನೂ ಬೆಳೆದು ಜೊತೆಯಲ್ಲಿ ಇರುವವರನ್ನೂ ಬೆಳೆಸುವ ಮೂಲಕ ದೊಡ್ಡ ವ್ಯಕ್ತಿಯಾಗಿದ್ದಾರೆ. ಅಂತೆಯೇ ಅಭಿಮಾನೋತ್ಸವಕ್ಕೆ 10 ಲಕ್ಷಕ್ಕೂ ಅಧಿಕ ಜನರು ಬರುತ್ತಿದ್ದಾರೆ ಎನ್ನುತ್ತಾರೆ ಕಾರ್ಯಕ್ರಮದ ಆಯೋಜಕರು.

ಯಡಿಯೂರಪ್ಪ ಎಂದಿಗೂ ನಂಬಿದವರನ್ನು ಕೈಬಿಟ್ಟಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಯ ಹರಿಕಾರ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಅವರು ಜಾರಿಗೆ ತಂದಿರುವ ಯೋಜನೆಗಳು ಈಗಲೂ ಜನರಿಗೆ ಜೀವನಾಡಿಯಾಗಿವೆ. ಇವರ 50 ವರ್ಷದ ಹೋರಾಟದ ಜೀವನದ ಸಾಧನೆಯ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಂಘಟಿತರಾಗಿ, ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ.

RELATED ARTICLES

Latest News