ಬೆಂಗಳೂರು,ಮೇ 14- ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದರೆ ತಡೆಯುವ ತಾಕತ್ತು ಸರ್ಕಾರಕ್ಕೆ ಇದೆಯೇ ಎಂದು ವಿಧಾನಪರಿಷತ್ ಪತ್ರಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಬೆಂಕಿ ಹಚ್ಚಲು ಮುಂದಾಗಿದೆ. ಮುಂದೆ ಅಹಿತಕರ ಘಟನೆಗಳು ನಡೆದರೆ ಸರ್ಕಾರವೇ ಕಾರಣ ಎಂದು ಎಚ್ಚರಿಸಿದರು.
ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಪಿತೂರಿ ಸರ್ಕಾರವೇ ಮಾಡುತ್ತಿದೆ. ಹಿಜಾಬ್ ಬೇಡ, ಕೇಸರಿ ಶಾಲೂ ಬೇಡ. ಹಿಜಾಬ್‌ಗೆ ಅವಕಾಶ ಕೊಟ್ಟರೆ ಕೇಸರಿ ಶಾಲಿಗೂ ಅವಕಾಶ ಕೊಡಿ ಎಂಬ ಬೇಡಿಕೆ ಮುಂದಿಡುತ್ತಾರೆ. ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದರೆ ತಡೆಯುತ್ತೀರಾ ಎಂದು ಪ್ರಶ್ನೆ ಮಾಡಿದರು.
ಇದು ಸಂಪೂರ್ಣವಾಗಿ ಸರ್ಕಾರದ ದ್ವಂದ್ವ ನೀತಿ. ಕೂಡಲೇ ಹಿಜಾಬ್ ಜಾರಿ ಮಾಡಿರುವ ಆದೇಶ ವಾಪಸ್ ಪಡೆಯಬೇಕು ಆಗ ಎಲ್ಲವೂ ಸರಿಹೋಗುತ್ತದೆ ಎಂದರು.ಹಿಜಾಬ್ ಧರಿಸಲು ಅವಕಾಶ ಕೊಡುವ ಮೂಲಕ ಸರ್ಕಾರ ಒಂದು ಸಮುದಾಯವನ್ನು ಓಲೈಸಲು ಮುಂದಾಗಿದೆ.
ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ಮುಸಲಾನರು ನಮ ಜೊತೆ ಬರುತ್ತಾರೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಕಾಂಗ್ರೆಸ್ ನಡೆ ಬಹುಸಂಖ್ಯಾತರನ್ನು ಮುಸ್ಲೀಂಮರ ವಿರುದ್ದ ಎತ್ತಿ ಕಟ್ಟಿ ಅವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಸಲಾನರಿಗೆ ಒಳ್ಳೆಯದನ್ನು ಮಾಡುವ ಬದಲು ಕೆಟ್ಟದ್ದನ್ನೇ ಸರ್ಕಾರ ಮಡುತ್ತದೆ. ಈ ಸರ್ಕಾರ ಮುಸ್ಲಿಮರ ಪರ ಇದ್ದಂತೆ ಇಲ್ಲ. ಮುಸಲಾನರೇ ನಿಮನ್ನು ಇತರರು ವಿರೋಧಿಸುವಂತೆ ಕಾಂಗ್ರೆಸ್ ಮಾಡುತ್ತದೆ. ಈ ಪಕ್ಷದಿಂದ ನಿಮಗೆ ಲಾಭ ಇಲ್ಲ. ದೇಶ ಒಡೆಯುತ್ತಿರುವವರು ಕ್ರಾಂಗ್ರೆಸ್ಸಿಗರು ಎಂದು ವಾಗ್ದಾಳಿ ನಡೆಸಿದರು.
ಹಿಂದುತ್ವ ದೇಶದ ಅಸಿತೆ, ಬಂಧುತ್ವ ನಮ ಮಂತ್ರ, ಇದಕ್ಕೆ ನಾವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು. ಹಿಜಾಬ್ ವಾಪಾಸ್ ತರಿಸುವ ಮೂಲಕ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆದರೆ ಅದಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ಕೊಟ್ಟರು.
