Homeರಾಜ್ಯಬ್ರಾಹಣರನ್ನು ವೇಶ್ಯೆಯರಿಗೆ ಹೋಲಿಸಿದ ಎಸ್‌‍ಪಿ ನಾಯಕನ ವಿರುದ್ಧ ಎಫ್‌ಐಆರ್‌

ಬ್ರಾಹಣರನ್ನು ವೇಶ್ಯೆಯರಿಗೆ ಹೋಲಿಸಿದ ಎಸ್‌‍ಪಿ ನಾಯಕನ ವಿರುದ್ಧ ಎಫ್‌ಐಆರ್‌

Another FIR lodged against SP spokesperson Bhati over objectionable remarks against Brahmins

ಸುಲ್ತಾನಪುರ, ಮೇ 15 (ಪಿಟಿಐ) ಬ್ರಾಹಣರನ್ನು ವೇಶ್ಯೆಯರಿಗೆ ಹೋಲಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದ ವಕ್ತಾರ ರಾಜ್ ಕುಮಾರ್ ಭಾಟಿ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಗಾಜಿಯಾಬಾದ್‌ ಮತ್ತು ನೋಯ್ಡಾ ಪೊಲೀಸರು ಸಹ ಭಾಟಿ ವಿರುದ್ಧ ಇದೇ ರೀತಿಯ ಆರೋಪಗಳ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು.ಭಾಟಿ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ ದೀರ್ಘ ಹೇಳಿಕೆಯ ವೀಡಿಯೊ ಕ್ಲಿಪ್‌ನ ಆಧಾರದ ಮೇಲೆ ಅವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.

ಧನಪತ್‌ಗಂಜ್‌‍ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಟಿಕಾರ್‌ ಗ್ರಾಮದ ನಿವಾಸಿ ಅಖಿಲ್‌ ಅಲಿಯಾಸ್‌‍ ಅನುರಾಗ್‌ ತಿವಾರಿ ಅವರ ದೂರಿನ ಮೇರೆಗೆ ಇತ್ತೀಚಿನ ಪ್ರಕರಣ ದಾಖಲಿಸಲಾಗಿದೆ.ದೂರಿನ ಪ್ರಕಾರ, ದೂರುದಾರರು ಮೇ 12 ರಂದು ತಮ್ಮ ಮೊಬೈಲ್‌ ಫೋನ್‌ನಲ್ಲಿ ವೀಡಿಯೊವನ್ನು ವೀಕ್ಷಿಸಿದ್ದಾರೆ, ಇದರಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಟಿ ಬ್ರಾಹ್ಮಣ ಸಮುದಾಯದ ವಿರುದ್ಧ ನಿಂದನೀಯ ಮತ್ತು ಅವಮಾನಕರ ಭಾಷೆಯನ್ನು ಬಳಸುತ್ತಿರುವುದು ಕಂಡುಬಂದಿದೆ.

ವಿಡಿಯೋದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದ್ದು, ಬ್ರಾಹ್ಮಣ ಸಮುದಾಯವನ್ನು ವೇಶ್ಯೆಯರೊಂದಿಗೆ ಹೋಲಿಸಲಾಗಿದೆ, ಇದರಿಂದಾಗಿ ಸಮುದಾಯದ ಘನತೆ ಮತ್ತು ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಮೇ 14 ರಂದು ಧನಪತ್‌ಗಂಜ್‌‍ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿ ವೃಜ್‌ ನಾರಾಯಣ್‌ ಸಿಂಗ್‌ ತಿಳಿಸಿದ್ದಾರೆ. ತನಿಖೆಯನ್ನು ಇನ್‌್ಸಪೆಕ್ಟರ್‌ ಮಹೇಂದ್ರ ಕುಮಾರ್‌ ಅವರಿಗೆ ಹಸ್ತಾಂತರಿಸಲಾಗಿದೆ ಮತ್ತು ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

RELATED ARTICLES

Latest News